ETV Bharat / state

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರಿಗೆ ಕಿಟ್​​​ ವಿತರಿಸಿದ ಕೊಪ್ಪಳ ಶಾಸಕ! - without maintaining social Distance

ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊಪ್ಪಳ ಶಾಸಕ, ಕಾರ್ಯಕರ್ತರು ಹಾಗೂ ಮುಖಂಡರು ಗುಂಪು ಗುಂಪಾಗಿ ನಿಂತು ಆಹಾರ ಧಾನ್ಯಗಳ ಕಿಟ್ ವಿತರಿಸಿದ್ದಾರೆ.

Koppala MLA distributed the kit without maintaining social Distance
ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್
author img

By

Published : Apr 21, 2020, 3:12 PM IST

ಕೊಪ್ಪಳ: ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ನಗರದ ವಿವಿಧ ವಾರ್ಡ್​ಗಳಲ್ಲಿನ ಜನರಿಗೆ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಆಹಾರ ಪದಾರ್ಥಗಳ ಕಿಟ್​ ವಿತರಿಸಿದ್ದಾರೆ.

ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್​ಡೌನ್ ಮುಂದುವರೆದಿದ್ದು, ಹಲವು ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಜನರಿಗೆ ಅನೇಕರು ತಮ್ಮ ನೆರವಿನ ಹಸ್ತ ಚಾಚುತ್ತಿದ್ದಾರೆ. ಹಾಗೆಯೇ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಸಹ ನಗರದಲ್ಲಿ ಅಕ್ಕಿ, ಬೇಳೆ ಸೇರಿದಂತೆ ಆಹಾರ ಪದಾರ್ಥಗಳ ಕಿಟ್​ಗಳನ್ನ ನಗರದ ವಿವಿಧ ವಾರ್ಡ್​ಗಳಲ್ಲಿನ ಜನರಿಗೆ ವಿತರಿಸುತ್ತಿದ್ದಾರೆ.

ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್

ಅವರ ಕೊಪ್ಪಳ ನಿವಾಸದ ಬಳಿ ಸಾಂಕೇತಿಕವಾಗಿ ಆಹಾರ ಸಾಮಗ್ರಿ ಕಿಟ್​ಗಳನ್ನು ವಿತರಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದು ಕಂಡುಬಂತು. ಕಾರ್ಯಕರ್ತರು ಹಾಗೂ ಮುಖಂಡರು ಗುಂಪು ಗುಂಪಾಗಿ ನಿಂತಿದ್ದರು. ಭಾಗ್ಯನಗರದಲ್ಲಿ ಸುಮಾರು 3000 ಸಾವಿರ ಕಿಟ್​​ಗಳನ್ನು ವಿತರಿಸುತ್ತಿರುವುದಾಗಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.