ETV Bharat / state

ಕೊಪ್ಪಳ ಹುಲಿಹೈದರ ಸಂಘರ್ಷ: ಈವರೆಗೆ 36 ಜನರ ಬಂಧನ - ಈಟಿವಿ ಭಾರತ್​ ಕನ್ನಡ

ಹುಲಿಹೈದರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕೋಮು ಸಂಘರ್ಷದಲ್ಲಿ ನೀಡಲಾಗಿದ್ದ ಎರಡು ದೂರಿನನ್ವಯ ಮೂವತ್ತಾರು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

koppala-hulihydera
ಹುಲಿಹೈದರ ಪ್ರಕರಣ
author img

By

Published : Aug 16, 2022, 4:33 PM IST

ಗಂಗಾವತಿ(ಕೊಪ್ಪಳ): ಕನಕಗಿರಿ ವಿಧಾನಸಭಾ ಕ್ಷೇತ್ರದ ಹುಲಿಹೈದರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕೋಮು ಘರ್ಷಣೆಯಲ್ಲಿ ಇಬ್ಬರು ಸಾವನ್ನಪ್ಪಿ ಹಲವರು ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ದೂರಿನನ್ವಯ ಇದುವರೆಗೆ 36 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಸಂಘರ್ಷದಲ್ಲಿ ಸಾವನ್ನಪ್ಪಿದ್ದ ಯಂಕಪ್ಪ ತಳವಾರ ಎಂಬುವವರ ಪತ್ನಿ ಹಂಪಮ್ಮ ನೀಡಿದ್ದ ದೂರಿನ ಆಧಾರದಲ್ಲಿ 30 ಮಂದಿಯ ವಿರುದ್ಧ ಹಾಗೂ ಇದೇ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಪಾಷಾವಲಿ ಎಂಬುವವರ ಸಹೋದರ ಖಾದರಾಭಾಷಾ 28 ಜನರ ಮೇಲೆ ಪ್ರತ್ಯೇಕ ದೂರು ಸಲ್ಲಿಸಿದ್ದರು. ಕನಕಗಿರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡೂ ದೂರಿಗೆ ಸಂಬಂಧಿಸಿದಂತೆ ಒಂದು ಪ್ರಕರಣದಲ್ಲಿ 21 ಮತ್ತೊಂದು ಪ್ರಕರಣದಲ್ಲಿ 15 ಜನರನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡ ಮಿಕ್ಕವರ ಶೋಧ ನಡೆಯುತ್ತಿದೆ ಎಂದು ಪೊಲೀಸು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಹುಲಿಹೈದರ್ ಮಾರಾಮಾರಿಯ ಮತ್ತೊಂದು ವಿಡಿಯೋ ವೈರಲ್..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.