ETV Bharat / state

ಕೊಪ್ಪಳ : ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಪ್ರಸ್ತಾವನೆ ಸಿದ್ಧಪಡಿಸಿದ ಜಿಲ್ಲಾಡಳಿತ - budget for Anjanadri development

ಅಂಜನಾದ್ರಿಯ ಅಭಿವೃದ್ಧಿಗೆ ಬಜೆಟ್​ನಲ್ಲಿ ಘೋಷಣೆಯಾಗಿರುವ 100 ಕೋಟಿ ಅನುದಾನದಲ್ಲಿ ಯಾವ ಯಾವ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂಬುದನ್ನು ಕೊಪ್ಪಳ ಜಿಲ್ಲಾಡಳಿತ ಪ್ರಸ್ತಾವನೆಯನ್ನು ಸಿದ್ಧಪಡಿಸಿಕೊಂಡಿದೆ..

Anjanadri hill development
ಅಂಜನಾದ್ರಿ ಬೆಟ್ಟದ ಅಭಿವೃದ್ಧಿ
author img

By

Published : Mar 12, 2022, 1:22 PM IST

ಕೊಪ್ಪಳ : ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯುಳ್ಳ ಹನುಮನ ಜನ್ಮ ಸ್ಥಳವಾದ ಕೊಪ್ಪಳದ ಅಂಜನಾದ್ರಿಯ ಅಭಿವೃದ್ಧಿಗೆ ಈ ಬಾರಿ ರಾಜ್ಯ ಸರ್ಕಾರ ಬಜೆಟ್​ನಲ್ಲಿ 100 ಕೋಟಿ ರೂಪಾಯಿ ಅನುದಾನ ಘೋಷಣೆ ಮಾಡಿದೆ. ಬಜೆಟ್​ನಲ್ಲಿ ಘೋಷಣೆಯಾಗಿರುವ ಈ 100 ಕೋಟಿ ಅನುದಾನದಲ್ಲಿ ಯಾವ ಯಾವ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂಬುದನ್ನು ಕೊಪ್ಪಳ ಜಿಲ್ಲಾಡಳಿತ ಪ್ರಸ್ತಾವನೆಯನ್ನು ಸಿದ್ಧಪಡಿಸಿಕೊಂಡಿದೆ.

ಅಂಜನಾದ್ರಿ‌ ಪರ್ವತದ ಅಭಿವೃದ್ದಿಯ ಬಗ್ಗೆ ಚರ್ಚೆ ನಡೆದಿದೆ. ರಾಜ್ಯ ಮುಜರಾಯಿ ಇಲಾಖೆಯಲ್ಲಿ ಎ ಗ್ರೇಡ್ ದೇವಸ್ಥಾನವಾಗಿರುವ ಅಂಜನಾದ್ರಿಯನ್ನು ವಿಶ್ವಮಟ್ಟದ ಪ್ರಮುಖ ದೇವಸ್ಥಾನವನ್ನಾಗಿಸಲು ಈಗ ಯೋಜನೆ ಸಿದ್ಧವಾಗುತ್ತಿದೆ.

ಸಿಎಂ ಬಸವರಾಜ ಬೊಮ್ಮಾಯಿ ಅವರು ಸಹ ಅಂಜನಾದ್ರಿಯನ್ನು ಅಯೋಧ್ಯೆ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದಾಗಿ ಘೋಷಣೆ ಮಾಡಿದ್ದಾರೆ. ಅದರಂತೆ ಈ ಬಾರಿಯ ಬಜೆಟ್​ನಲ್ಲಿ ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಣೆ ಮಾಡಲಾಗಿದೆ.

ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಪ್ರಸ್ತಾವನೆ ಸಿದ್ಧಪಡಿಸಿದ ಜಿಲ್ಲಾಡಳಿತ..

ಕಳೆದ ವರ್ಷ ಬಜೆಟ್​ನಲ್ಲಿ ರಾಜ್ಯ ಸರ್ಕಾರ 20 ಕೋಟಿ ರೂಪಾಯಿಯನ್ನು ಘೋಷಣೆ ಮಾಡಿತ್ತು. ಆದರೆ, ಈ ಹಣ ಖರ್ಚು ಮಾಡಿಲ್ಲ. 20 ಕೋಟಿ ರೂಪಾಯಿಯಲ್ಲಿ ಕೊಪ್ಪಳ ಜಿಲ್ಲಾಡಳಿತ 13 ಎಕರೆ ಭೂಮಿ ಖರೀದಿ, ಪಾರ್ಕಿಂಗ್, ಪ್ರವಾಸಿಗರಿಗೆ ಮೂಲಸೌಲಭ್ಯ ನೀಡುವ ಯೋಜನೆ ಸಿದ್ಧಪಡಿಸಿ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಸಿ ವಿಕಾಸ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.

ಇದನ್ನೂ ಓದಿ: ಕೊಪ್ಪಳ: ಪುನೀತ್ ರಾಜಕುಮಾರ್ ಮೂರ್ತಿ ಪ್ರತಿಷ್ಠಾಪಿಸಿದ ಅಭಿಮಾನಿಗಳು

ಮತ್ತೆ ಈಗ ಬಜೆಟ್​ನಲ್ಲಿ ಘೋಷಣೆಯಾಗಿರುವ 100 ಕೋಟಿ ರೂಪಾಯಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಿಂತನೆ ಮಾಡಲಾಗಿದೆ. ಅಂಜನಾದ್ರಿ ಪರ್ವತವೇರಲು 575 ಮೆಟ್ಟಿಲುಗಳಿವೆ. ಈ ಮೆಟ್ಟಿಲುಗಳನ್ನು ಏರುವಾಗ ಹನುಮನ, ರಾಮಾಯಣ ಕುರಿತು ಆಡಿಯೋ ವಿಡಿಯೋ ಅಳವಡಿಸುವುದು, ಭಕ್ತರಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ವಿಶ್ರಾಂತಿ ಸ್ಥಳ ನಿರ್ಮಿಸುವುದು, ಯಾತ್ರಿ ನಿವಾಸ, ಪಾರ್ಕಿಂಗ್, ಸಂಪರ್ಕ ಕೇಂದ್ರ, ತುಂಗಭದ್ರಾ ನದಿ ಹಾಗೂ ಪಂಪಾಸರೋವರದಲ್ಲಿ ಮೂಲಸೌಲಭ್ಯ ಒದಗಿಸುವ ಯೋಜನೆಯ ವರದಿ ಸಿದ್ಧಪಡಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯು ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ ನಂತರ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.