ETV Bharat / state

ಕರ್ಫ್ಯೂನಿಂದ ಸಂಕಷ್ಟಕ್ಕೆ ಸಿಲುಕಿದ ಕೂಲಿ ಕಾರ್ಮಿಕರು.. ಕೆಲಸ ಸಿಗದೆ ಕೊಪ್ಪಳದಲ್ಲಿ ಜನರ ಪರದಾಟ - 14ದಿನದ ಕರ್ಫ್ಯೂನಿಂದ ಸಂಕಷ್ಟಕ್ಕೆ ಸಿಲುಕಿದ ಕೂಲಿ ಕಾರ್ಮಿಕರು,

ಕಳೆದ ವರ್ಷ ಹೇರಲಾಗಿದ್ದ ಲಾಕ್ ಡೌನ್ ನಿಂದ ಆದ ತೊಂದರೆಯನ್ನು ಸರಿಪಡಿಸಿಕೊಳ್ಳುವ ಹೊತ್ತಿಗೆ ಮತ್ತೆ ಕೊರೊನಾ ಎರಡನೇ ಅಲೆ ವ್ಯಾಪಕವಾಗಿದೆ. ಪರಿಣಾಮವಾಗಿ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರ ಇಂದಿನಿಂದ ಮುಂದಿನ 14 ದಿನಗಳವರೆಗೆ ಕೊರೊನಾ ಕರ್ಫ್ಯೂ ಘೋಷಿಸಿ, ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಇದರಿಂದಾಗಿ ಕೂಲಿ ಕಾರ್ಮಿಕರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.

ಸಂಕಷ್
ಸಂಕಷ್ಟ
author img

By

Published : Apr 27, 2021, 3:23 PM IST

Updated : Apr 27, 2021, 4:52 PM IST

ಕೊಪ್ಪಳ: ಕಳೆದ ವರ್ಷ ಕೊರೊನಾ ಭೀತಿಯಿಂದ ಮಾಡಲಾಗಿದ್ದ ಲಾಕ್​ ಡೌನ್ ನಿಂದ ಕಷ್ಟ ಅನುಭವಿಸಿದ್ದ ಸಾಮಾನ್ಯ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಈ ನಡುವೆ ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು ಬಡವರ, ಕೂಲಿಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ನಿತ್ಯವೂ ದುಡಿಮೆ ಮಾಡಿಕೊಂಡು ಸಂಸಾರದ ಬಂಡಿ ಸಾಗಿಸುತ್ತಿದ್ದ ಜಿಲ್ಲೆಯ ಸಾಮಾನ್ಯ ಜನರು 14 ದಿನ ಕೊರೊನಾ ಕರ್ಫ್ಯೂ ಆದೇಶದಿಂದ ಕಂಗಾಲಾಗಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವ ಕೊಪ್ಪಳದಲ್ಲಿ ಕೂಲಿ ಕಾರ್ಮಿಕರು ಮತ್ತೊಮ್ಮೆ ಬದುಕಿನ ಬವಣೆ ಅನುಭವಿಸುವ ಸನ್ನಿವೇಶ ಎದುರಾಗಿದೆ. ಕಳೆದ ವರ್ಷ ಹೇರಲಾಗಿದ್ದ ಲಾಕ್ ಡೌನ್ ನಿಂದ ಆದ ತೊಂದರೆಯನ್ನು ಸರಿಪಡಿಸಿಕೊಳ್ಳುವ ಹೊತ್ತಿಗೆ ಮತ್ತೆ ಕೊರೊನಾ ಎರಡನೇ ಅಲೆ ವ್ಯಾಪಕವಾಗಿದೆ. ಪರಿಣಾಮವಾಗಿ ಸೋಂಕು ಹರಡುವಿಕೆ ತಡೆಗಟ್ಟಲು ಸರ್ಕಾರ ಇಂದು 27ರ ಸಂಜೆಯಿಂದ 14 ದಿನಗಳವರೆಗೆ ಕೊರೊನಾ ಕರ್ಫ್ಯೂ ಘೋಷಿಸಿ, ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ಇದರಿಂದಾಗಿ ಜನರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ.

ಜಿಲ್ಲೆಯಲ್ಲಿ ನಿತ್ಯವೂ ಒಂದಿಲ್ಲೊಂದು ಕೆಲಸ ಮಾಡಿ ಕೂಲಿ ಹಣದಿಂದ ಸಂಸಾರ ನಡೆಸುತ್ತಿದ್ದ ಸಾವಿರಾರು ಕುಟುಂಬಗಳು ಈಗ ಚಿಂತೆಗೀಡಾಗಿವೆ. ದಿನದ ದುಡಿಮೆಯನ್ನು ನಂಬಿಕೊಂಡು, ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ. ಈಗ ಕೊರೊನಾ ಕರ್ಫ್ಯೂ ಜಾರಿ ಮಾಡಲಾಗಿದೆ. ಇದರಿಂದ ನಾವು ದುಡಿಯುವುದು ಹೇಗೆ? ನಮ್ಮ ಬದುಕನ್ನು ಹೇಗೆ ನಡೆಸಬೇಕು? ದಿನದ ಕೂಲಿಯನ್ನು ನಂಬಿಕೊಂಡು ಸ್ವಸಹಾಯ ಸಂಘಗಳಲ್ಲಿ ಕುಟುಂಬದ ಅಗತ್ಯತೆಗೆ ಸಾಲ ಮಾಡಿಕೊಂಡಿರುತ್ತೇವೆ. ಈಗ ಕೊರೊನಾ ಕರ್ಫ್ಯೂ ನಿಂದ ನಮ್ಮ ಬದುಕಿಗೆ ಸಂಕಷ್ಟ ಎದುರಾಗುತ್ತದೆ ಎಂದು ಕೊಪ್ಪಳ ನಗರಕ್ಕೆ ನಿತ್ಯವೂ ಕೂಲಿಗೆ ಬರುವ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ಕೊರೊನಾ ಕರ್ಫ್ಯೂ.. ಕೆಲಸವಿಲ್ಲದ ಕಂಗಾಲಾದ ಕೂಲಿ ಕಾರ್ಮಿಕರು

ನಗರದಲ್ಲಿ ಕೂಲಿಗಾಗಿ ಇಂದು ನೂರಾರು ಜನರು ಬಂದು ನಿಂತಿದ್ದರೂ ಸಹ ಕೊರೊನಾ ಭೀತಿಯಿಂದ ಕೂಲಿ ಸಿಗದೆ ಅನೇಕರು ವಾಪಸ್ ಮನೆಗೆ ಮರಳಿದರು. ಒಟ್ಟಾರೆಯಾಗಿ ಈಗ ಜನರ ಬದುಕು ಮತ್ತಷ್ಟು ದುಸ್ತರವಾಗಿದೆ.

Last Updated : Apr 27, 2021, 4:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.