ETV Bharat / state

Jobs in Koppal: ಕೊಪ್ಪಳ ಜಿಲ್ಲಾ ಪಂಚಾಯತ್​ನಲ್ಲಿ ಉದ್ಯೋಗಾವಕಾಶ.. 13 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ - ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ

ಹುದ್ದೆಗಳನ್ನು ತಾತ್ಕಾಲಿಕವಾಗಿ ಹೊರ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.

koppal Zilla panchayat invited Technical Assistant job for degree holders

author img

By

Published : Aug 3, 2023, 3:14 PM IST

ಕೊಪ್ಪಳ ಜಿಲ್ಲಾ ಪಂಚಾಯತ್​​ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಒಟ್ಟು 13 ತಾಂತ್ರಿಕ ಸಹಾಯಕರ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಹೊರ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಈ ನೇಮಕಾತಿ, ಭರ್ತಿ, ವೇತನ ಸೇರಿದಂತೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಅಧಿಸೂಚನೆ
ಅಧಿಸೂಚನೆ

ಹುದ್ದೆ ವಿವರ: ಕೊಪ್ಪಳ ಜಿಲ್ಲಾ ಪಂಚಾಯತ್​ನಲ್ಲಿ ತಾಂತ್ರಿಕ ಸಹಾಯಕರು (ಕೃಷಿ) 5, ತಾಂತ್ರಿಕ ಸಹಾಯಕರು (ಅರಣ್ಯ) 7, ತಾಂತ್ರಿಕ ಸಹಾಯಕರು (ರೇಷ್ಮೆ) 1 ಒಟ್ಟು 13 ಹುದ್ದೆಗಳನ್ನು ಭರ್ತಿ ಮಾಡಲಾಗುವುದು.

ವಿದ್ಯಾರ್ಹತೆ: ತಾಂತ್ರಿಕ ಸಹಾಯಕರು (ಕೃಷಿ): ಅಭ್ಯರ್ಥಿಗಳು ಕೃಷಿ ವಿಷಯದಲ್ಲಿ ಪದವಿಯನ್ನು ಹೊಂದಿರುವ ಜೊತೆಗೆ ಕಂಪ್ಯೂಟರ್​ ಜ್ಞಾನವನ್ನು ಪಡೆದಿರಬೇಕು

ತಾಂತ್ರಿಕ ಸಹಾಯಕರು (ಅರಣ್ಯ): ಈ ಹುದ್ದೆಗೆ ಅಭ್ಯರ್ಥಿಗಳು ಅರಣ್ಯಶಾಸ್ತ್ರದಲ್ಲಿ ಪದವಿ ಜೊತೆಗೆ ಕಂಪ್ಯೂಟರ್​ ಜ್ಞಾನವನ್ನು ಹೊಂದಿರಬೇಕು

ತಾಂತ್ರಿಕ ಸಹಾಯಕರು (ರೇಷ್ಮೆ): ಈ ಹುದ್ದೆಗೆ ಅಭ್ಯರ್ಥಿಗಳು ರೇಷ್ಮೆ ವಿಷಯದಲ್ಲಿ ಪದವಿ ಜೊತೆಗೆ ಕಂಪ್ಯೂಟರ್​ ಜ್ಞಾನವನ್ನು ಹೊಂದಿರಬೇಕು.

ಹುದ್ದೆ ಅನುಭವ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈಗಾಗಲೇ ಸಂಬಂಧಿಸಿದ ಕ್ಷೇತ್ರದಲ್ಲಿ ಮೂರು ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು.

ವೇತನ: ಈ ಹುದ್ದೆಗಳಿಗೆ ಅಭ್ಯರ್ಥಿಗಳಿಗೆ ಮಾಸಿಕ 24 ಸಾವಿರ ವೇತನ ಜೊತೆಗೆ 2000 ರೂ ಪ್ರಯಾಣ ಭತ್ಯೆಗಳನ್ನು ನೀಡಲಾಗುವುದು.

ವಯೋಮಿತಿ: ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 21ರಿಂದ ಗರಿಷ್ಠ ವಯೋಮಿತಿ 40 ವರ್ಷ ಆಗಿದೆ.

ಅರ್ಜಿ ಸಲ್ಲಿಕೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ನಿಗದಿತ ಅರ್ಜಿ ನಮೂನೆಯಲ್ಲಿ ದಾಖಲಾಗಿರುವ ವಿದ್ಯಾರ್ಹತೆ, ಸೇನಾನುಭವ ಮತ್ತು ಸಂಬಂಧಪಟ್ಟ ಮಾಹಿತಿಗಳನ್ನು ಅಭ್ಯರ್ಥಿಗಳಿ ಸರಿಯಾಗಿ, ಸ್ಪಷ್ಟವಾಗಿ ನಮೂದಿಸಬೇಕಿದೆ.

ಆಯ್ಕೆ ವಿಧಾನ: ಈ ಹುದ್ದೆಗಳನ್ನು ಸಂಪೂರ್ಣವಾಗಿ ಮೆರಿಟ್​ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತಿದ್ದು, ಸಂದರ್ಶನ ಇರಲಿದೆ. ಈ ಹುದ್ದೆಗಳನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಜವಾಬ್ದಾರಿಯು ನೇಮಕಾತಿ ಪ್ರಾಧಿಕಾರ ಮತ್ತು ಕೊಪ್ಪಳ ಜಿಲ್ಲಾ ಜಿ.ಪಂ ಮುಖ್ಯ ಕಾರ್ಯ ನಿರ್ವಾಹಕರು ಹೊಂದಿರುತ್ತಾರೆ.

ಈ ಹುದ್ದೆಗೆ ಅಭ್ಯರ್ಥಿಗಳು ಆಗಸ್ಟ್​ 1 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆಗಸ್ಟ್​ 16 ಆಗಿದೆ.

ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿ, ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಅಧಿಕೃತ ಅಧಿಸೂಚನೆ ವೀಕ್ಷಣೆಗೆ ಅಭ್ಯರ್ಥಿಗಳು koppal.nic.in ಈ ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: Southern Railway Recruitment: 790 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ; ಆ. 30 ರೊಳಗೆ ಅರ್ಜಿ ಹಾಕಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.