ETV Bharat / state

ಗುರುವಿಲ್ಲದೆ ಯೋಗ ಕಲಿತು 'ಪ್ರತಾಪ' ತೋರಿದ 'ಸಿಂಗ್'

ಆರಂಭದಲ್ಲಿ ಯಾವುದೇ ಗುರುವಿನ ಮಾರ್ಗದರ್ಶನವಿಲ್ಲದೆ ತಮ್ಮ ಸಹೋದರ ಮಾವ ಮಾಡುತ್ತಿದ್ದ ಯೋಗಾಸನಗಳಿಂದ ಪ್ರೇರಣೆಗೊಂಡು ಪ್ರತಾಪಸಿಂಗ್ ಎಂಬ ಯುವಕ ಉತ್ತಮ ಯೋಗಪಟುವಾಗಿ ಬೆಳೆದು ನಿಂತಿದ್ದಾರೆ. ತಾವಷ್ಟೇ ಯೋಗಾಭ್ಯಾಸ ಮಾಡದೆ ಸುಮಾರು 15 ಕ್ಕೂ ಹೆಚ್ಚು ಯುವಕರಿಗೆ ಯೋಗಾಸನಗಳನ್ನು ಕಲಿಸಿ ಯೋಗಪಟುಗಳನ್ನಾಗಿ ರೂಪಿಸಿದ್ದಾರೆ.

koppal-yoga-athlete-pratap-singh-story
ಯೋಗಪಟು ಪ್ರತಾಪ ಸಿಂಗ್
author img

By

Published : Jun 21, 2021, 5:03 AM IST

ಕೊಪ್ಪಳ: ಯಾವುದೇ ವಿದ್ಯೆಯಾಗಲಿ ಅದು ಹಾಗೆ ಸುಮ್ಮನೆ ಸಿದ್ಧಿಸುವುದಿಲ್ಲ. ಕಲಿಕೆಯಲ್ಲಿ ಶ್ರದ್ಧೆ, ನಿರಂತರ ಅಭ್ಯಾಸ ಕಲಿಕೆಯ ಮಟ್ಟವನ್ನು ಉನ್ನತೀಕರಿಸುತ್ತದೆ. ಕಲಿಕೆಯಲ್ಲಿನ ಆಸಕ್ತಿ, ಶ್ರದ್ಧೆ ಹಾಗೂ ನಿರಂತರ ಪರಿಶ್ರಮದಿಂದ ಆರಂಭದಲ್ಲಿ ನಿರ್ದಿಷ್ಟ ಒಬ್ಬ ಗುರುವಿಲ್ಲದೆಯೂ ಯುವಕನೋರ್ವ ಯೋಗಪಟುವಾಗಿ ಬೆಳೆದಿದ್ದಾನೆ. ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಪ್ರತಾಪ ಸಿಂಗ್ ಎಂಬ ಯುವಕ ತಮ್ಮ ಸ್ನೇಹಿತ ವಿಠ್ಠಲ್ ಸಿಂಗ್ ನೊಂದಿಗೆ ಸೇರಿಕೊಂಡು ಕಳೆದ 14 ವರ್ಷಗಳಿಂದ ಯೋಗ ಸಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಯೋಗಪಟು ಪ್ರತಾಪ ಸಿಂಗ್

ಓದಿ: ಅಂತಾ​ರಾಷ್ಟ್ರೀಯ ಯೋಗ ದಿನ.. ವರ್ಚುವಲ್​ ಮೂಲಕ ಪ್ರಧಾನಿ ಮೋದಿ ಭಾಗಿ

ಆರಂಭದಲ್ಲಿ ಯಾವುದೇ ಗುರುವಿನ ಮಾರ್ಗದರ್ಶನವಿಲ್ಲದೆ ತಮ್ಮ ಸಹೋದರ ಮಾವ ಮಾಡುತ್ತಿದ್ದ ಯೋಗಾಸನಗಳಿಂದ ಪ್ರೇರಣೆಗೊಂಡು ಪ್ರತಾಪಸಿಂಗ್ ಎಂಬ ಯುವಕ ಉತ್ತಮ ಯೋಗಪಟುವಾಗಿ ಬೆಳೆದು ನಿಂತಿದ್ದಾರೆ. ತಾವಷ್ಟೇ ಯೋಗಾಭ್ಯಾಸ ಮಾಡದೆ ಸುಮಾರು 15 ಕ್ಕೂ ಹೆಚ್ಚು ಯುವಕರಿಗೆ ಯೋಗಾಸನಗಳನ್ನು ಕಲಿಸಿ ಯೋಗಪಟುಗಳನ್ನಾಗಿ ರೂಪಿಸಿದ್ದಾರೆ. ಅಲ್ಲದೆ ತಂಡವೊಂದನ್ನು ಕಟ್ಟಿಕೊಂಡು ರಾಜ್ಯದ ಹಲವಾರು ಕಡೆ ಯೋಗಪ್ರದರ್ಶನ ನೀಡಿದ್ದಾರೆ.

ಯುವಕ ಪ್ರತಾಪಸಿಂಗ್ ಕಳೆದ 14 ವರ್ಷಗಳಿಂದ ಯೋಗದ ವಿವಿಧ ಆಸನಗಳನ್ನು ಅತ್ಯಂತ ಲೀಲಾಜಾಲವಾಗಿ ಮಾಡುವುದು ನೋಡುಗರನ್ನು ಬೆರಗುಗೊಳಿಸುತ್ತದೆ. ಅದರಲ್ಲೂ ನೀರಿನಲ್ಲಿ ತೇಲುತ್ತಾ ಯೋಗಾಸನ ಮಾಡುವುದು ನಿಜಕ್ಕೂ ಬೆರಗು ಮೂಡಿಸುತ್ತದೆ. ಜಲಬಸ್ತ್ರಿಕಾ, ಸ್ತಂಬ ಪದ್ಮಾಸನ, ದ್ವಿಪಾದ ಅಂಗುಷ್ಟ, ಜಲನೇತಿ ಹಾಗೂ ಸೂರ್ಯನೇತಿ ಶಿರ್ಶಾಸನ, ಬಕಾಸನ, ಮಯೂರಾಸನ, ಚಕ್ರಾಸನ, ವಕ್ರಾಸನ, ವೃಕ್ಷಾಸನ, ಗರ್ಭಪಿಂಡಾಸನ, ಪಾದಾಂಗುಷ್ಠಾಸನ ಸೇರಿದಂತೆ ಅನೇಕ ಅನೇಕ ಆಸನಗಳನ್ನು ಲೀಲಾಜಾಲವಾಗಿ ಮಾಡುತ್ತಾರೆ.

15 ಯುವಕರಿಗೆ ಯೋಗಾಸನ ಕಲಿಸಿ ತಂಡಕಟ್ಟಿಕೊಂಡು ಯೋಗಾಸನಕ್ಕೆ ಕೆಲ ಸಾಹಸದ ತಿರುವು ನೀಡಿದ್ದಾರೆ. ಈ ತಂಡದಿಂದ ರಾಜ್ಯದ ವಿವಿಧೆಡೆ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಮನಸು ಮಾಡಿದರೆ ಗುರುವಿಲ್ಲದೆಯೂ ಸಾಧನೆ ಮಾಡಬಹದು ಎಂಬುದಕ್ಕೆ ಅಪ್ಪಟ ಗ್ರಾಮೀಣ ಪ್ರತಿಭೆಯಾಗಿರುವ ಪ್ರತಾಪಸಿಂಗ್ ಉದಾಹರಣೆಯಾಗುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.