ETV Bharat / state

ಕಾನೂನು ಬಾಹಿರ ಕೃತ್ಯ: ಕೊಪ್ಪಳದ ವ್ಯಕ್ತಿ ಚಾಮರಾಜನಗರಕ್ಕೆ ಗಡಿಪಾರು - ಗಡಿಪಾರು

ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಕೊಪ್ಪಳದಿಂದ ಚಾಮರಾಜನಗರ ಜಿಲ್ಲೆಗೆ ಗಡಿಪಾರು ಮಾಡಿ ಎಸ್​ಪಿ ಆದೇಶಿಸಿದ್ದಾರೆ.

Parashuram
ಪರಶುರಾಮ
author img

By

Published : Jul 20, 2022, 12:16 PM IST

ಗಂಗಾವತಿ: ಕಳೆದ 9 ವರ್ಷಗಳಿಂದ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಅವರು ಕೊಪ್ಪಳದಿಂದ ಚಾಮರಾಜನಗರ ಜಿಲ್ಲೆಗೆ ಗಡಿಪಾರು ಮಾಡಿದ್ದಾರೆ. ಕಾರಟಗಿ ತಾಲೂಕಿನ ಹೊಸ ಜೂರಟಗಿ ಗ್ರಾಮದ ಪರಶುರಾಮ ಅಲಿಯಾಸ್ ರಮೇಶ ನಿಂಗಪ್ಪ ಸಿದ್ದಾಪುರ ಎಂಬ ವ್ಯಕ್ತಿಯನ್ನು ಗಡಿಪಾರು ಮಾಡಲಾಗಿದೆ. ಕಳೆದ 2013ರಿಂದ ಈತ ಮಟ್ಕಾದಂತಹ ಕೃತ್ಯಗಳಲ್ಲಿ ತೊಡಗಿದ್ದ.

ಕಾರಟಗಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಈವರೆಗೆ 17 ಪ್ರಕರಣಗಳು ದಾಖಲಾಗಿವೆ. 14 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಈ ಹಿನ್ನೆಲೆಯಲ್ಲಿ ಗಡಿಪಾರು ಶಿಕ್ಷೆ ವಿಧಿಸಲಾಗಿದೆ ಎಂದು ಎಸ್​​ಪಿ ತಿಳಿಸಿದ್ದಾರೆ.

ಇದನ್ನೂ ಓದಿ: ದೇವರ ದರ್ಶನಕ್ಕೆ ತೆರಳಿದ್ದಾಗ ಮನೆಗೆ ಕನ್ನ: ಕಳ್ಳರ ಪಾಲಾಯ್ತು ಮದುವೆಗೆ ಖರೀದಿಸಿಟ್ಟಿದ್ದ ಚಿನ್ನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.