ETV Bharat / state

ಕೊಪ್ಪಳ : ವಿವಾದದ ಕಿಡಿ ಹೊತ್ತಿಸಿದ ಕನದಾಸ ಮೂರ್ತಿ ಪ್ರತಿಷ್ಠಾಪನೆ ಸ್ಥಳ‌‌‌

ಸಂಸದ ಸಂಗಣ್ಣ ಕರಡಿ ಸಮಾಜಕ್ಕೆ ಕ್ಷಮಾಪಣೆ ಕೇಳುವಂತೆ ಆಗ್ರಹಿಸಿದರು. ಈ ಜಾಗವನ್ನು 1988ರಲ್ಲಿಯೇ ಕನಕದಾಸರ ವೃತ್ತಕ್ಕಾಗಿ ಮೀಸಲಿಡಲಾಗಿದೆ‌. ಕನಕದಾಸರು ಕೇವಲ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಅವರು ಇಡೀ ಮಾನವಕುಲಕ್ಕೆ ಒಳಿತು ಬಯಸಿದ ಸಂತ ಶ್ರೇಷ್ಠರು. ಈಗ ಸಂಸದ ಸಂಗಣ್ಣ ಕರಡಿ ಅವರು ವಿನಾಕಾರಣ ಗೊಂದಲ ಮೂಡಿಸುತ್ತಿದ್ದಾರೆ..

Kanakadasa statue
ಕನದಾಸ ಮೂರ್ತಿ ಪ್ರತಿಷ್ಠಾಪನೆ ಸ್ಥಳ‌‌‌
author img

By

Published : Jul 7, 2021, 7:16 PM IST

ಕೊಪ್ಪಳ : ನಗರದ ಕೇಂದ್ರೀಯ ಬಸ್​ ನಿಲ್ದಾಣದ ಬಳಿಯ ಕನಕದಾಸರ ಮೂರ್ತಿ ಪ್ರತಿಷ್ಠಾಪನಾ ಸ್ಥಳದ ವಿಚಾರವೀಗ ವಿವಾದದ ಕಿಡಿ ಹೊತ್ತಿಸಿದೆ. ಮೂರ್ತಿ ಸ್ಥಾಪನೆಯ ಜಾಗದ ಕುರಿತು ಸಂಸದ ಸಂಗಣ್ಣ ಕರಡಿ ಜಿಲ್ಲಾಧಿಕಾರಿಗಳಿಗೆ ಇತ್ತೀಚಿಗೆ ಪತ್ರ ಬರೆದಿರುವುದು ಹಾಲುಮತ ಸಮಾಜದ ಕೆಂಗಣ್ಣಿಗೆ ಗುರಿಯಾಗಿದೆ‌.

ಸಂಗಣ್ಣ ಕರಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಹಾಲುಮತ ಸಮಾಜದ ಮುಖಂಡರು

ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ಇರುವ ನಗರಸಭೆಗೆ ಸೇರಿದ ಕನಕದಾಸರ ವೃತ್ತದಲ್ಲಿ ಪುತ್ಥಳಿ ನಿರ್ಮಾಣಕ್ಕೆ ಕಾಮಗಾರಿ ನಡೆಸಲಾಗಿತ್ತು. ಇದರ ಹಿಂದೆ ಇದ್ದ ನಗರಸಭೆಗೆ ಸೇರಿದ ವಾಣಿಜ್ಯ ಮಳಿಗೆ ಶಿಥಿಲಗೊಂಡಿದೆ ಎಂದು ನಗರಸಭೆ ಇತ್ತೀಚಿಗೆ ಆ ಕಟ್ಟಡವನ್ನು ನೆಲಸಮಗೊಳಿಸಿದೆ.

Kanakadasa statue
ಜಿಲ್ಲಾಧಿಕಾರಿಗೆ ಸಂಸದ ಸಂಗಣ್ಣ ಕರಡಿ ಬರೆದ ಪತ್ರ

ಇದರ ಜೊತೆಗೆ ಒಂದಿಷ್ಟು ಕಾಮಗಾರಿಯಾಗಿದ್ದ ಕನಕದಾಸರ ಮೂರ್ತಿ ಪ್ರತಿಷ್ಠಾಪನೆಯ ಕಟ್ಟೆಯನ್ನು ಸಹ ಕೆಡವಲಾಗಿದೆ. ಜೊತೆಗೆ ಕನಕದಾಸರ ಮೂರ್ತಿ ಪ್ರತಿಷ್ಠಾಪನೆಯ ಕಟ್ಟಡ ಕಾಮಗಾರಿಯನ್ನು ನಗರಸಭೆ ಅಧಿಕಾರಿಗಳ ಅನುಮತಿ ಇಲ್ಲದೆ ನಡೆಸುತ್ತಿದ್ದಾರೆ. ಅಧಿಕಾರಿಗಳ‌ ಮೇಲೆ ಕ್ರಮಕೈಗೊಳ್ಳುವಂತೆ ಸಂಸದ ಸಂಗಣ್ಣ ಕರಡಿ ಜಿಲ್ಲಾಧಿಕಾರಿಗಳಿಗೆ ಜುಲೈ 5ರಂದು ಪತ್ರ ಬರೆದಿದ್ದರು.

ಈ ಪತ್ರದ ಕುರಿತು ಹಾಲುಮತ ಸಮಾಜದ ಮುಖಂಡರು ಸ್ವಾಮೀಜಿಗಳೊಂದಿಗೆ ಇಂದು ಸುದ್ದಿಗೋಷ್ಠಿ ನಡೆಸಿ, ಸಂಸದ ಸಂಗಣ್ಣ ಕರಡಿ ಸಮಾಜಕ್ಕೆ ಕ್ಷಮಾಪಣೆ ಕೇಳುವಂತೆ ಆಗ್ರಹಿಸಿದರು. ಈ ಜಾಗವನ್ನು 1988ರಲ್ಲಿಯೇ ಕನಕದಾಸರ ವೃತ್ತಕ್ಕಾಗಿ ಮೀಸಲಿಡಲಾಗಿದೆ‌. ಕನಕದಾಸರು ಕೇವಲ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಅವರು ಇಡೀ ಮಾನವಕುಲಕ್ಕೆ ಒಳಿತು ಬಯಸಿದ ಸಂತ ಶ್ರೇಷ್ಠರು. ಈಗ ಸಂಸದ ಸಂಗಣ್ಣ ಕರಡಿ ಅವರು ವಿನಾಕಾರಣ ಗೊಂದಲ ಮೂಡಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಅನೇಕ ಕಡೆ ಸರ್ಕಾರಿ ಜಾಗಗಳು ಅತಿಕ್ರಮಣವಾಗಿವೆ. ಅದು ಸಂಸದರಿಗೆ ಕಾಣುತ್ತಿಲ್ಲವಾ? ಎಂದು ಕುರುಬ ಸಮುದಾಯದ ಮುಖಂಡರು ಪ್ರಶ್ನಿಸಿದ್ದಾರೆ.

ಇನ್ನು, ಈ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ. ರಾಜಶೇಖರ್ ಹಿಟ್ನಾಳ್ ಮಾತನಾಡಿದ್ದು, ಕನಕದಾಸರ ಜಯಂತಿ ಸಂದರ್ಭದಲ್ಲಿ ಅದೇ ಸ್ಥಳದಲ್ಲಿ ಸಂಸದ ಸಂಗಣ್ಣ ಕರಡಿ ಅವರು ಅನೇಕ ಬಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ದುರುದ್ದೇಶದಿಂದ ಸಂಗಣ್ಣ ಕರಡಿ ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.