ETV Bharat / state

ಆಡಿಯೋ ವಿಭಾಗದಲ್ಲಿ ಸಿದ್ದರಾಮಯ್ಯಗೆ ನೊಬೆಲ್ ಕೊಡ್ಬೇಕು: ಈಶ್ವರಪ್ಪ ವ್ಯಂಗ್ಯ

ಯಡಿಯೂರಪ್ಪ ಅವರ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೇನು ಪ್ರತಿಕ್ರಿಯಿಸುವುದಿಲ್ಲ. ಈ ಮೊದಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಡಿಯೋ ಮೊದಲು ರಿಲೀಸ್ ಆಯ್ತು. ಆ ಬಗ್ಗೆ ಅವರು ಮೊದಲು ಹೇಳಲಿ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದ್ದಾರೆ. ಅಲ್ಲದೆ, ಆಡಿಯೋ- ವಿಡಿಯೋ ವಿಭಾಗದಲ್ಲಿ ಸಿದ್ದರಾಮಯ್ಯಗೆ ನೊಬೆಲ್​ ಪ್ರಶಸ್ತಿ ಕೊಡಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಈಶ್ವರಪ್ಪ
author img

By

Published : Nov 4, 2019, 9:13 PM IST

ಕೊಪ್ಪಳ: ಸಿದ್ದರಾಮಯ್ಯ ಅವರ ಆಡಿಯೋ ಮೊದಲು ರಿಲೀಸ್ ಆಗಿದೆ. ಆಡಿಯೋ ವಿಭಾಗದಲ್ಲಿ ಏನಾದ್ರೂ ನೊಬೆಲ್ ಬಹುಮಾನ ನೀಡುವುದಿದ್ದರೆ ಅವರಿಗೇ ಮೊದಲು ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಟಾಂಗ್ ನೀಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೇನು ಪ್ರತಿಕ್ರಿಯಿಸುವುದಿಲ್ಲ. ಈ ಮೊದಲು ಸಿದ್ದರಾಮಯ್ಯ ಅವರ ಆಡಿಯೋ ಮೊದಲು ರಿಲೀಸ್ ಆಯ್ತು. ಆ ಬಗ್ಗೆ ಅವರು ಹೇಳಲಿ ಎಂದು ಒತ್ತಾಯಿಸಿದರು.

ಆಡಿಯೋ ವಿಭಾಗದಲ್ಲಿ ಸಿದ್ದರಾಮ್ಯಯಗೆ ನೋಬೆಲ್ ನೀಡಬೇಕು: ಈಶ್ವರಪ್ಪ ವ್ಯಂಗ್ಯ

ಇನ್ನು, ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡು ಸೀಟು ಗೆಲ್ಲೋದಿಲ್ಲ ಎಂದು ಕಾಂಗ್ರೆಸ್​​​ನವರು ಹೇಳಿದ್ದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್​​​ನವರು ಎರಡು ಸೀಟು ಗೆಲ್ಲಲಿಲ್ಲ. ನಮಗೆ ಲಕ್ಷಾಂತರ ಕಾರ್ಯಕರ್ತರು, ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಮಂತ್ರಿ ಇದ್ದಾರೆ. ಆದರೆ, ಕಾಂಗ್ರೆಸ್​​​ನವರು ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಯಾರು ಎಂದು ಹೇಳಲಿ‌. ಮೊದಲು ತಮ್ಮ ಪಕ್ಷವನ್ನು ನೋಡಿಕೊಳ್ಳಲಿ. ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ ಎಂದು ಟೀಕಿಸಿದರು.

ಅನರ್ಹ ಶಾಸಕರು ರಾಜೀನಾಮೆ ನೀಡಿದ್ದರಿಂದಲೇ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನಾವು ಯಾವುದೇ ಕಾರಣಕ್ಕೂ ಅವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಖುರ್ಚಿ ಕಳೆದುಕೊಂಡ ಮೇಲೆ ಕಾಂಗ್ರೆಸ್​​​ನವರು ಸುಮ್ಮನೆ ಕೂರಲಾಗುತ್ತಿಲ್ಲ. ಏನಾದರೊಂದು ಬಾಯಿಗೆ ಬಂದಂತೆ ಮಾತನಾಡುತ್ತಿರುತ್ತಾರೆ. ಏನಾದರೂ ಮಾತನಾಡದಿದ್ರೆ ಅವರಿಗೆ ತಿಂದ ಅನ್ನ ಕರಗುವುದಿಲ್ಲ. ಹೀಗೆ ಮಾತನಾಡುತ್ತಿರುವವರು ಸಿಎಂ ಆಗಿದ್ದವರು, ಸಚಿವರಾಗಿದ್ದವರು. ತೂಕದ ಮಾತುಗಳನ್ನಾಡುವಂತೆ ನಾನು ಕಾಂಗ್ರೆಸ್​​​ನವರಿಗೆ ಮನವಿ ಮಾಡುತ್ತೇನೆ ಎಂದು‌ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

Intro:

Body:ಕೊಪ್ಪಳ:- ಸಿದ್ದರಾಮಯ್ಯ ಅವರ ಆಡಿಯೋ ಮೊದಲು ರಿಲೀಸ್ ಆಗಿದೆ. ಅವರು ಅದರಲ್ಲಿ ಎಕ್ಸ್ ಪರ್ಟ್. ಆಡಿಯೋ ವಿಭಾಗದಲ್ಲಿ ಏನಾದ್ರೂ ನೋಬೆಲ್ ಬಹುಮಾನ ನೀಡುವುದಿದ್ದರೆ ಸಿದ್ಧರಾಮಯ್ಯ ಅವರಿಗೆ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಟಾಂಗ್ ನೀಡಿದ್ದಾರೆ. ಕೊಪ್ಪಳ‌ದಲ್ಲಿ‌ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನೇನು ಪ್ರತಿಕ್ರಿಯಿಸುವುದಿಲ್ಲ ಎಂದರು. ಈ ಮೊದಲು ಸಿದ್ಧರಾಮಯ್ಯ ಅವರ ಆಡಿಯೋ ಮೊದಲು ರಿಲೀಸ್ ಆಯ್ತು. ಆ ಬಗ್ಗೆ ಅವರು ಮೊದಲು ಹೇಳಲಿ. ಅದೇನೋ ಹೇಳ್ತಾರಲ್ಲ ತಾನೇ ಕಳ್ಳ, ಉಳಿದವರನ್ನು ನಂಬಲ್ಲ. ಸಿದ್ಧರಾಯಮ್ಯ ಅವರು ಸಹ ಹಾಗೆ ಎಂದು ಸೂಚ್ಯವಾಗಿ ಟೀಕಿಸಿದರು. ಇನ್ನು ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡು ಸೀಟು ಗೆಲ್ಲೋದಿಲ್ಲ ಎಂದು ಕಾಂಗ್ರೆಸ್ ನವರು ಹೇಳಿದ್ದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನವರು ಎರಡು ಸೀಟ್ ಗೆಲ್ಲಲಿಲ್ಲ. ನಮಗೆ ಲಕ್ಷಾಂತರ ಕಾರ್ಯಕರ್ತರು, ರಾಷ್ಟ್ರೀಯ ಅಧ್ಯಕ್ಷರು, ಪ್ರಧಾನಮಂತ್ರಿ ಇದ್ದಾರೆ. ಆದರೆ, ಕಾಂಗ್ರೆಸ್ ನವರಿಗೆ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಯಾರು ಹೇಳಲಿ‌. ಮೊದಲು ತಮ್ಮ‌ ಪಕ್ಷವನ್ನು ನೋಡಿಕೊಳ್ಳಲಿ. ಕಾಂಗ್ರೆಸ್ ಪಕ್ಷ ದಿವಾಳಿಯಾಗಿದೆ ಎಂದು ಈಶ್ವರಪ್ಪ ಹೇಳಿದರು‌. ಇನ್ನು ಅನರ್ಹಗೊಂಡಿರುವ ಶಾಸಕರು ರಾಜಿನಾಮೆ ನೀಡಿದ್ದರಿಂದಲೇ ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ನಾವು ಯಾವುದೇ ಕಾರಣಕ್ಕೂ ಅವರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಖುರ್ಚಿ ಕಳೆದುಕೊಂಡ ಮೇಲೆ ಕಾಂಗ್ರೆಸ್ ನವರು ಸುಮ್ಮನೆ ಕೂಡಲಾಗ್ತಿಲ್ಲ. ಏನಾದರೊಂದು ಬಾಯಿಗೆ ಬಂದಂತೆ ಮಾತನಾಡುತ್ತಿರುತ್ತಾರೆ. ಏನಾದರೂ ಮಾತನಾಡದಿದ್ರೆ ಅವರಿಗೆ ತಿಂದ ಅನ್ನ ಕರಗುವುದಿಲ್ಲ. ಹೀಗೆ ಮಾತನಾಡುತ್ತಿರುವವರು ಸಿಎಂ ಆಗಿದ್ದವರು, ಮಂತ್ರಿಗಳಾಗಿದ್ದವರು. ತೂಕದ ಮಾತುಗಳನ್ನಾಡುವಂತೆ ನಾನು ಕಾಂಗ್ರೆಸ್ ನವರಿಗೆ ಮನವಿ ಮಾಡುತ್ತೇನೆ ಎಂದು‌ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಬೈಟ್1:- ಕೆ.ಎಸ್. ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.