ETV Bharat / state

ಮನೆಯ ಛಾವಣಿ ಕುಸಿತ: ಅದೃಷ್ಟವಶಾತ್ ಮಗು ಅಪಾಯದಿಂದ ಪಾರು

ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ತಿರಣೆಪ್ಪ ಓಲಿ ಎಂಬುವವರ ಮನೆಯ ಹಿಂಭಾಗದ ಛಾವಣಿ ಕುಸಿತಗೊಂಡಿದೆ. ಅದೃಷ್ಠವಶಾತ್ ಹಿಂಭಾಗದ ಕೋಣೆಗೆ ಹೋಗಿದ್ದ ಮಗು ಪ್ರಾಣಾಪಾಯದಿಂದ ಪಾರಾಗಿದೆ.

house roof collapse
ಮನೆಯ ಮೇಲ್ಛಾವಣಿ ಕುಸಿತ: ಅದೃಷ್ಠವಶಾತ್ ಮಗು ಅಪಾಯದಿಂದ ಪಾರು
author img

By

Published : Aug 17, 2020, 9:24 AM IST

ಕೊಪ್ಪಳ: ಕಳೆದ‌ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ಮನೆಯ ಛಾವಣಿ ಕುಸಿತಗೊಂಡಿದ್ದು, ಪವಾಡ ಸದೃಶ್ಯವಾಗಿ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಮನೆಯ ಛಾವಣಿ ಕುಸಿತ: ಅದೃಷ್ಠವಶಾತ್ ಮಗು ಅಪಾಯದಿಂದ ಪಾರು

ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ಸಂಜೆಯ ವೇಳೆ, ಈ ಘಟನೆ ನಡೆದಿದೆ. ನಿನ್ನೆ ಸಂಜೆ ಸುಮಾರು 6 ಗಂಟೆಯ ವೇಳೆಗೆ ಮುಧೋಳ ಗ್ರಾಮದ ತಿರಣೆಪ್ಪ ಓಲಿ ಎಂಬುವವರ ಮನೆಯ ಹಿಂಭಾಗದ ಛಾವಣಿ ಕುಸಿತಗೊಂಡಿದೆ. ಮನೆಯ ಮುಂಭಾಗದ ಕೋಣೆಯಲ್ಲಿ ಸುಮಾರು ನಾಲ್ಕು ಜನ ಇದ್ದರು. ಏನೋ ತರಲು ಎಂದು 5 ವರ್ಷದ ಮಗು ಮನೆಯ ಹಿಂಭಾಗದ ಕೋಣೆಗೆ ಹೋಗಿದೆ. ಆಗ ಏಕಾಏಕಿ ಮನೆಯ ಛಾವಣಿ ಕುಸಿದಿದೆ. ಅದೃಷ್ಠವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಛಾವಣಿ ಕುಸಿತದಿಂದ ಮನೆಯೊಳಗೆ ಮಗು ಸಿಲುಕಿದ್ದು, ಮನೆಯವರು ಕೂಗಿಕೊಂಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತದ ಸ್ಥಳೀಯರು ಮಗುವನ್ನು ಸುರಕ್ಷಿತವಾಗಿ ಹೊರಗೆ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.