ETV Bharat / state

ಇದ್ದರೂ ಇಲ್ಲದಂತಾಗಿದೆ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ

ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದಲ್ಲಿರುವ ಲಕ್ಷಾಂತರ ರೂಪಾಯಿ ಮೂಲ್ಯದ ಶುದ್ಧ ಕುಡಿಯುವ ನೀರಿನ ಘಟಕ ನಿಷ್ಪ್ರಯೋಜಕವಾಗಿದೆ.

author img

By

Published : Nov 23, 2019, 11:36 AM IST

Updated : Nov 23, 2019, 12:42 PM IST

ಇದ್ದರೂ ಇಲ್ಲದಂತಾಗಿದೆ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ

ಕೊಪ್ಪಳ: ಪ್ರಯಾಣಿಕರಿಗೆ ಅನೂಕೂಲಕ್ಕಾಗಿ ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ‌. ಆದರೆ ಅದು ಸರಿಯಾಗಿ ಕಾರ್ಯನಿರ್ವಹಿಸದೇ ಇರುವ ಕಾರಣ ಲಕ್ಷಾಂತರ ರೂಪಾಯಿ ಮೌಲ್ಯದ ಯೋಜನೆ ಮೂಲೆಗುಂಪಾಗಿದೆ.

ಹೌದು, ಸೌಲಭ್ಯಗಳೇ ಇಲ್ಲ ಎಂಬ ಕೊರತೆ ಕಹಲವೆಡೆಯಾದರೆ, ಹೀಗೆ ಕೈಗೆ ಬಂದರೂ ಬಾಯಿಗೆ ಬರದಂತಾಗಿರುವುದು ಕೊಪ್ಪಳದ ಕೇಂದ್ರೀಯ ಬಸ್ ನಿಲ್ದಾಣದ ಶುದ್ಧ ಕುಡಿಯುವ ನೀರಿನ ಘಟಕದ ಸ್ಥಿತಿಯಾಗಿದೆ. ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದು, ಪ್ರಯಾಣಿಕರು ಕೇವಲ 2 ರೂಪಾಯಿ ನಾಣ್ಯ ಹಾಕಿ ಒಂದು ಬಾಟಲ್​ ನೀರು ಪಡೆಯಬಹುದಿತ್ತು. ಆದರೆ, ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅಳವಡಿಸಲಾಗಿರುವ ಈ ಶುದ್ಧ ಕುಡಿಯುವ ನೀರಿನ ಘಟಕ ಯೋಜನೆ ನಿಷ್ಪ್ರಯೋಜಕವಾಗಿ ಬಹುಕಾಲವೇ ಆಗಿದೆ. ನೀರಿಗಾಗಿ ಬಾಟಲ್​ ಹಿಡಿದು ಹೋದವರು ಘಟಕದಿಂದ ಹನಿ ನೀರೂ ಸಿಗದೆ ಕೊನೆಗೆ ಅಂಗಡಿಯಿಂದಲೇ ದುಬಾರಿ ಬಾಟಲ್​ ನೀರನ್ನು ಕೊಳ್ಳವಂತಾಗಿದೆ.

ಈ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿರುವುದರಿಂದ ನೀರು ಶುದ್ಧೀಕರಣ ಯಂತ್ರಗಳು ಧೂಳು ತಿನ್ನುತ್ತಿವೆ. ಆದರೆ, ಸಾರಿಗೆ ಸಂಸ್ಥೆಯ ಅಧಿಕಾರಿಗಳಾಗಲಿ, ಸಂಬಂಧಿಸಿದ ಅಧಿಕಾರಿಗಳಾಗಲಿ ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಹಣ ಇದ್ದ ಪ್ರಯಾಣಿಕರು ಹೆಚ್ಚಿನ ದುಡ್ಡು ಕೊಟ್ಟು ನೀರು ತೆಗೆದುಕೊಳ್ತಾರೆ. ಆದರೆ, ಸಾಮಾನ್ಯ ಪ್ರಯಾಣಿಕರು ದಾಹದಿಂದಲೇ ತಮ್ಮ ಊರಿಗೆ ಹೋಗಬೇಕಿದೆ. ಅಲ್ಲಿನ ಅಂಗಡಿ ಮಾಲೀಕರ ಲಾಬಿಗೆ ಮಣಿದು ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

Intro:

Body:ಕೊಪ್ಪಳ:- ಪ್ರಯಾಣಿಕರಿಗೆ ಅನುಕೂಲವಾಗಲಿ ಎಂದು ನಗರದ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ‌. ಅದರೆ ಅದು ಕೇವಲ ಹಸರಿಗೆ ಮಾತ್ರ ಎಂಬಂತಾಗಿದೆ. ನೀರಿನ ಘಟಕ ಆರಂಭಿಸಿದ್ದಾಗಿನಿಂದ ಅದು ಪ್ರಯಾಣಿಕರ ದಾಹ ತಣಿಸಿಲ್ಲ. ಆ ಶುದ್ಧ ನೀರಿನ ಘಟಕ ಬಂದ್ ಬಂದ್ ಆಗಿದೆ. ಎರಡು ರುಪಾಯಿ ಕಾಯಿನ್ ಹಾಕಿದರೆ ಒಂದು ಲೀಟರ್ ನೀರು ಬರುವಂತೆ ಆಟೋಮೆಟಿಕ್ ಯಂತ್ರವನ್ನು ಅಳವಡಿಸಲಾಗಿದೆ. ಪ್ರಯಾಣಿಕರು ಬಾಟಲ್ ಹಿಡಿದುಕೊಂಡು ಬಂದು ವಾಪಸ್ ಹೋಗುತ್ತಿದ್ದಾರೆ. ಈ ಶುದ್ಧ ಕುಡಿಯುವ ನೀರಿನ ಘಟಕ ಬಂದ್ ಆಗಿರುವುದರಿಂದ ನೀರು ಶುದ್ಧೀಕರಣ ಯಂತ್ರಗಳು ಧೂಳು ತಿನ್ನುತ್ತಿವೆ. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಅಳವಡಿಸಲಾಗಿರುವ ಈ ಶುದ್ಧ ಕುಡಿಯುವ ನೀರಿನ ಘಟಕ ನಿಷ್ಪ್ರಯೋಜಕವಾಗಿದೆ. ಆದರೆ, ಸಾರಿಗೆ ಸಂಸ್ಥೆಯ ಅಧಿಕಾರಿಗಳಾಗಲಿ, ಸಂಬಂಧಿಸಿದ ಅಧಿಕಾರಿಗಳಾಗಲಿ ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಕೇವಲ ಎರಡು ರೂಪಾಯಿಗೆ ಸಿಗುವ ನೀರನ್ನು ಪ್ರಯಾಣಿಕರು ಬಸ್ ನಿಲ್ದಾಣಗಳಲ್ಲಿನ ಅಂಗಡಿಗಳಲ್ಲಿ ಇಪ್ಪತ್ತರಿಂದ ಇಪ್ಪತ್ತೈದು ರುಪಾಯಿ ತೆತ್ತು ಒಂದು ಲೀಟರ್ ನೀರು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ‌. ಹಣ ಇದ್ದ ಪ್ರಯಾಣಿಕರು ಹೆಚ್ಚಿನ ದುಡ್ಡು ಕೊಟ್ಟು ನೀರು ತೆಗೆದುಕೊಳ್ತಾರೆ. ಆದರೆ, ಸಾಮಾನ್ಯ ಪ್ರಯಾಣಿಕರು ಅಷ್ಟು ಹಣ ನೀಡಿ ನೀರು ತೆಗೆದುಕೊಳ್ಳಲು ಆಗದೆ ದಾಹದಿಂದಲೇ ತಮ್ಮ ಊರಿಗೆ ಹೋಗಬೇಕಿದೆ. ಅಲ್ಲಿನ ಅಂಗಡಿಕಾರರ ಲಾಭಿಗೆ ಮಣಿದು ಈ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿ ಮಾಡಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

Conclusion:
Last Updated : Nov 23, 2019, 12:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.