ಗಂಗಾವತಿ: ಜಿಲ್ಲಾಧಿಕಾರಿಯೊಬ್ಬರು 10 ಕಿಲೋಮೀಟರ್ವರೆಗೆ ಸೈಕಲ್ ತುಳಿಯುವ ಮೂಲಕ ಭಾರೀ ಸುದ್ದಿಯಾಗಿದ್ದಾರೆ. ಸೈಕಲ್ ತುಳಿದಿದ್ದು ವಾಹನ ಸಂಚಾರ ಇಲ್ಲವೆಂದೇನೆಲ್ಲ. ಬದಲಾಗಿ ಆನೆಗೊಂದಿ ಉತ್ಸವದಲ್ಲಿ ಹಮ್ಮಿಕೊಂಡಿದ್ದ ಸೈಕ್ಲೋಥಾನ್ ಸ್ಪರ್ಧೆಯಲ್ಲಿ ಭಾಗವಹಿಸಲು ಯುವಕರನ್ನು ಪ್ರೇರೇಪಿಸುವ ಸಲುವಾಗಿ.
ಕೊಪ್ಪಳದ ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್ ಸೈಕಲ್ ತುಳಿದು ಗಮನ ಸೆಳೆದವರು.ಸಹಜವಾಗಿ ಚುನಾಯಿತರು ಅಥವಾ ಅಧಿಕಾರಿಗಳು ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡುತ್ತಾರೆ. ಆದರೆ ಇವರು ಮಾತ್ರ ಗ್ರಾಮದ ಹುಚ್ಚಪ್ಪಯ್ಯನ ಮಠದಿಂದ ಆರಂಭವಾದ ಸೈಕ್ಲೋಥಾನ್ ಸ್ಪರ್ಧೆಗೆ ಈ ರೀತಿಯಲ್ಲಿ ಚಾಲನೆ ನೀಡಿದರು.