ಕೊಪ್ಪಳ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 640 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಐವರು ಸೋಂಕಿತರು ಮೃತಪಟ್ಟಿದ್ದಾರೆ.
ಕೊಪ್ಪಳ ತಾಲೂಕಿನಲ್ಲಿ 227, ಗಂಗಾವತಿ ತಾಲೂಕಿನಲ್ಲಿ 291, ಕುಷ್ಟಗಿ ತಾಲೂಕಿನಲ್ಲಿ 39 ಹಾಗೂ ಯಲಬುರ್ಗಾ ತಾಲೂಕಿನ 83 ಪ್ರಕರಣ ಸೇರಿ ಒಟ್ಟು 640 ಪಾಸಿಟಿವ್ ಪ್ರಕರಣಗಳು ಕಂಡುಬಂದಿವೆ.
ಈವರೆಗೆ ಒಟ್ಟು 25,085 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಹೊಸದಾಗಿ ಐವರು ಸೋಂಕಿತರ ಸಾವು ಸೇರಿ ಈವರೆಗೆ ಒಟ್ಟು 418 ಜನ ಮೃತಪಟ್ಟಿದ್ದಾರೆ. ಇದೇ ಅವಧಿಯಲ್ಲಿ 732 ಜನರು ಗುಣಮುಖರಾಗಿದ್ದು, ಒಟ್ಟು 20,143 ಸೋಂಕಿತರು ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ 4524 ಸಕ್ರೀಯ ಪ್ರಕರಣಗಳಿದ್ದು, 3868 ಜನ ಸೋಂಕಿತರು ಹೋಂ ಐಸೋಲೇಷನ್ನಲ್ಲಿದ್ದಾರೆ. 656 ಜನ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.