ETV Bharat / state

ಕೊಪ್ಪಳದಲ್ಲಿ ಇಂದು 3 ವರ್ಷದ ಮಗು ಸೇರಿ ನಾಲ್ವರಲ್ಲಿ ಕೊರೊನಾ ದೃಢ

author img

By

Published : Jun 15, 2020, 8:08 PM IST

ರಾಜ್ಯದಲ್ಲಿ ಇಂದೂ ಸಹ ಕೊರೊನಾ ಆರ್ಭಟ ಮುಂದುವರೆದಿದೆ. ಕೊಪ್ಪಳದಲ್ಲಿ ನಾಲ್ವರಿಗೆ ಕೊರೊನಾ ದೃಢವಾಗಿದ್ದು, ಇದರಲ್ಲಿ 3 ವರ್ಷದ ಮಗುವಿನಲ್ಲೂ ಸೋಂಕು ಪತ್ತೆಯಾಗಿದೆ. ಸದ್ಯ ನಾಲ್ವರನ್ನೂ ಕೋವಿಡ್​ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

Koppal: 4 more Coronavirus reported in koppal today including 3 year child
ಕೊಪ್ಪಳ: 3 ವರ್ಷದ ಮಗು ಸೇರಿ ನಾಲ್ವರಲ್ಲಿ ಕೊರೊನಾ ಸೋಂಕು ದೃಢ

ಕೊಪ್ಪಳ: ಜಿಲ್ಲೆಯಲ್ಲಿ ಇಂದು 3 ವರ್ಷದ ಮಗು ಸೇರಿ ಮತ್ತೆ ನಾಲ್ವರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 17ಕ್ಕೆ ಏರಿದಂತಾಗಿದೆ.

ಈಗಾಗಲೇ ನಾಲ್ವರನ್ನು ಕೊಪ್ಪಳದ ಕೋವಿಡ್-19 ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಜಿಲ್ಲೆಯ ಗಂಗಾವತಿ ನಗರಕ್ಕೆ ಬಂದಿದ್ದ ಮೂರು ವರ್ಷದ ಮಗುವಿಗೆ (P-7103) ಸೋಂಕು ತಗುಲಿದೆ. ತಂದೆ-ತಾಯಿಯೊಂದಿಗೆ ಈ ಮಗು ಜೂನ್ 9ರಂದು ಮಹಾರಾಷ್ಟ್ರದಿಂದ ಗಂಗಾವತಿಗೆ ಬಂದಿತ್ತು. ಇವರು ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದರು. ಗಂಗಾವತಿ ತಾಲೂಕಿನ ಮರಳಿ ಗ್ರಾಮದ ದಂಪತಿಗೆ (P-7104, ಪುರುಷ 55 ವರ್ಷ ಹಾಗೂ P-7105, ಮಹಿಳೆ 50 ವರ್ಷ) ಸೋಂಕು ತಗುಲಿದೆ.

ಜಿಂದಾಲ್ ಕಾರ್ಖಾನೆಯಲ್ಲಿ ಈ ದಂಪತಿಯ ಮಗ ಕೆಲಸ ಮಾಡುತ್ತಿದ್ದು, ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದನಂತೆ. ಮಗನಿಂದ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ. ಕುಕನೂರು ತಾಲೂಕಿನ ಬಳಗೇರಿ ಗ್ರಾಮದ 36 ವರ್ಷದ ( P-7106) ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದೆ.

ಸೋಂಕಿನ ಲಕ್ಷಣ ಕಂಡ ಬಂದ ಹಿನ್ನೆಲೆಯಲ್ಲಿ ಈ ವ್ಯಕ್ತಿ ಬಂದು ತಪಾಸಣೆಗೆ ಒಳಗಾದಾಗ ಸೋಂಕು ಇರುವುದು ದೃಢವಾಗಿದೆ‌. ಎಲ್ಲರನ್ನೂ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಈವರೆಗೆ ಜಿಲ್ಲೆಯಲ್ಲಿ ಒಟ್ಟು 17 ಜನರಿಗೆ ಸೋಂಕು ತಗುಲಿದಂತಾಗುದ್ದು, 9 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ 8 ಸಕ್ರಿಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.