ETV Bharat / state

ಕೃಷಿ, ಗೋ ಹತ್ಯೆ ಕಾಯ್ದೆಗಳನ್ನು ಬೇಷರತ್ತಾಗಿ ಹಿಂಪಡೆಯಬೇಕು: ಕೋಡಿಹಳ್ಳಿ ಚಂದ್ರಶೇಖರ್ - ಬಿಜೆಪಿ ಹಾಗೂ ಆರ್​ಎಸ್ಎಸ್ ಹಿಡನ್ ಅಜೆಂಡಾ

ಕೇಂದ್ರ ಸರ್ಕಾರ ಹದಿನೈದು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದು ಅವೈಜ್ಞಾನಿಕವಾಗಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ದೂರಿದರು.

ಕೋಡಿಹಳ್ಳಿ ಚಂದ್ರಶೇಖರ
ಕೋಡಿಹಳ್ಳಿ ಚಂದ್ರಶೇಖರ
author img

By

Published : Jun 15, 2023, 3:36 PM IST

Updated : Jun 15, 2023, 4:02 PM IST

ಕೋಡಿಹಳ್ಳಿ ಚಂದ್ರಶೇಖರ್

ಕೊಪ್ಪಳ: ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಆಡಳಿತಕ್ಕೆ ತರಲು ಕರ್ನಾಟಕ ರಾಜ್ಯ ರೈತ ಸಂಘ ಬೆಂಬಲ ನೀಡಿದೆ ಎಂದು ರಾಜ್ಯ ರೈತ ಸಂಘಟನೆಗಳ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಹೇಳಿದರು. ಇಂದು ಕೊಪ್ಪಳದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ಸಿಎಂ ಇತ್ತೀಚಿಗೆ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂಬ ಒತ್ತಾಯವನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಅವರ ಈ ಮಾತು ನಮಗೆ ಅನುಮಾನ ಹುಟ್ಟಿಸುತ್ತಿದೆ. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕಾಯ್ದೆಗಳನ್ನು ಹಿಂಪಡೆಯಬೇಕು. ಕೇಂದ್ರ ಸರ್ಕಾರ ಈ ಕಾಯ್ದೆಗಳನ್ನು ಈಗಾಗಲೇ ಹಿಂಪಡೆದಿದೆ. ಆದರೆ ರಾಜ್ಯದ ಸಿಎಂ ಸಿದ್ದರಾಮಯ್ಯ ಜಾಣತನ ಪ್ರದರ್ಶನ ಮಾಡದೇ ನೇರವಾಗಿ ಕಾಯ್ದೆ ಹಿಂಪಡೆಯಬೇಕು" ಎಂದು ಅವರು ಆಗ್ರಹಿಸಿದರು.

ಇದನ್ನೂ ಓದಿ: Mysore crime: ವೈದ್ಯನೆಂದು ನಂಬಿಸಿ ಮದುವೆ, ಹಣ ಚಿನ್ನ ಎಗರಿಸಿ ಪರಾರಿ.. ಸಾಫ್ಟ್​ವೇರ್ ಇಂಜಿನಿಯರ್ ಮಹಿಳೆಯಿಂದ ಕಂಪ್ಲೇಂಟ್​

ಕೃಷಿ ಮಾರುಕಟ್ಟೆಯನ್ನು ರೈತರೇ ನಿರ್ಧರಿಸಬೇಕು: ಕೃಷಿ ಭೂಮಿಯನ್ನು ವ್ಯಾಪಾರಕ್ಕೆ ಬಳಸಬಾರದು. ಈ ಹಿಂದೆ ಅಧಿಕಾರಿಗಳು ಮಾಡಿರುವ ತಪ್ಪನ್ನೇ ಮತ್ತೆ ಭವಿಷ್ಯದಲ್ಲಿ ಮಾಡಬಾರದು. ಎಪಿಎಂಸಿ ಕಾಯ್ದೆಯಿಂದ ರೈತರ ಆದಾಯ ಕಡಿತವಾಗಿದೆ. ಕೃಷಿ ಮಾರುಕಟ್ಟೆಯನ್ನು ರೈತರೇ ನಿರ್ಧರಿಸಬೇಕು. ಇಲ್ಲವಾದಲ್ಲಿ ಬಹು ರಾಷ್ಟ್ರೀಯ ಕಂಪೆನಿಗಳಿಗೆ ಅನುಕೂಲವಾಗಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್

ಇದನ್ನೂ ಓದಿ: ಶಾರ್ಟ್​ ಸರ್ಕ್ಯೂಟ್​ನಿಂದ ಮಕ್ಕಳಿದ್ದ ಶಾಲಾ ವಾಹನಕ್ಕೆ ಬೆಂಕಿ: ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

ಬೆಂಬಲ ಬೆಲೆಯನ್ನು ಶಾಸನಬದ್ದ ಜಾರಿಗೊಳಿಸಬೇಕು : ಕೇಂದ್ರ ಸರ್ಕಾರ ಹದಿನೈದು ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಿದೆ. ಆದರೆ ಅದು ಅವೈಜ್ಞಾನಿಕ ಪ್ರಕ್ರಿಯೆಯಾಗಿದೆ. ರೈತರ ಆದಾಯ ದ್ವಿಗುಣ ಆಗುತ್ತದೆ ಎಂದು ಹೇಳಿದ್ದರು. ಆದರೆ ಇಲ್ಲಿಯವರೆಗೂ ಯಾವೊಬ್ಬ ರೈತನಿಗೂ ಆದಾಯ ದ್ವಿಗುಣ ಆಗಿಲ್ಲ. ಇದಕ್ಕೆ ಬದಲಾಗಿ ರೈತನ ಬದುಕು ಬರ್ಬಾದ್ ಆಗುತ್ತಿದೆ. ಬೆಂಬಲ ಬೆಲೆಯನ್ನು ಶಾಸನಬದ್ದಗೊಳಿಸಿ ಜಾರಿ ಮಾಡಬೇಕು. ಇದರ ಜೊತೆಗೆ ಸ್ವಾಮಿನಾಥನ್ ವರದಿ ಮಾನದಂಡ ಆಗಬೇಕೆಂದು ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್

ಇದನ್ನೂ ಓದಿ: Congress Guarantee scheme: ರಾಜ್ಯಕ್ಕೆ ಅಕ್ಕಿ ಕೊಡದ ವಿಚಾರ : ಕೇಂದ್ರದ ನಡೆಯ ಹಿಂದೆ ದುರುದ್ದೇಶ ಇದೆ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಗೋ ಹತ್ಯೆ ನಿಷೇಧ ಕಾಯ್ದೆ ವಿಚಾರ : ಗೋ ಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ಮಾತನಾಡಿದ ಅವರು,ಈ ಕಾಯ್ದೆಯನ್ನು ಬೇಷರತ್ತಾಗಿ ಹಿಂಪಡೆಯಬೇಕು. ಕಾಯ್ದೆಯ ಪರಿಶೀಲನೆ ಪದ ಸರಿ ಅಲ್ಲ. ಪರಿಗಣಿಸುತ್ತೇವೆ ಎನ್ನಬೇಕು ಎಂದು ಅವರು ಹೇಳಿದರು.

ರೈತರಿಗೆ ಅನುಕೂಲವಾಗುವಂತೆ ಈ ನಿಧಿ ಬಳಕೆ ಮಾಡಿ: ಪ್ರಸ್ತಾಪಿರುವ ಕಾಯ್ದೆಗಳು ಬಿಜೆಪಿ ಹಾಗೂ ಆರ್​ಎಸ್ಎಸ್‌ನ ಹಿಡನ್ ಅಜೆಂಡಾವಾಗಿದ್ದು ಇದನ್ನು 2024ರ ಲೋಕಸಭೆ ಚುನಾವಣೆಯವರೆಗೂ ತೆಗೆದುಕೊಂಡು ಹೋಗುತ್ತಾರೆ. ಮುಂಬರುವ ಬಜೆಟ್‌ನಲ್ಲಿ ರೈತರಿಗಾಗಿ ಆವರ್ತನ ನಿಧಿ ಪ್ರತ್ಯೇಕವಾಗಿಡಬೇಕು. ಅವಶ್ಯಕವಿದ್ದಾಗ ರೈತರಿಗೆ ಅನುಕೂಲವಾಗುವಂತೆ ಈ ನಿಧಿ ಬಳಕೆ ಮಾಡಬೇಕು ಎಂದು ಸರ್ಕಾರಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Electricity price hike: ವಿದ್ಯುತ್ ದರ ಏರಿಕೆ ವಿರೋಧಿಸಿ ಪ್ರತಿಭಟನೆ: ಶಿವಮೊಗ್ಗದಲ್ಲಿ ಸಂಸದ ಬಿ ವೈ ರಾಘವೇಂದ್ರ ಸೇರಿ ಕಾರ್ಯಕರ್ತರು ಪೊಲೀಸ್​ ವಶ

Last Updated : Jun 15, 2023, 4:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.