ಕೊಪ್ಪಳ: ಆಂಧ್ರ ಪ್ರದೇಶದಿಂದ ನಗರದ ಕಿಮ್ಸ್ ಆಸ್ಪತ್ರೆ ಕಟ್ಟಡ ಕೆಲಸಕ್ಕೆ ಬಂದಿರುವ ಕಾರ್ಮಿಕನಿಗೆ ಕೋವಿಡ್ ಸೋಂಕು ತಗುಲಿರುವ ಹಿನ್ನೆಲೆ ಕಾಮಗಾರಿ ನಡೆಯುತ್ತಿರುವ ಸ್ಥಳದ ಸುಮಾರು 107 ಕಾರ್ಮಿಕರ ಮಾದರಿ ಸಂಗ್ರಹಿಸಲಾಗಿದೆ.
ಕಾರ್ಮಿಕನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹಾಗೂ ಡಿಹೆಚ್‍ಒ ಡಾ. ಅಲಕನಂದಾ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಲಿಂಗರಾಜು ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರಿಂದ ಮಾಹಿತಿ ಪಡೆದುಕೊಂಡರು. ಕಾರ್ಮಿಕನ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ 40 ಜನರ ಜೊತೆಗೆ ಒಟ್ಟು 107 ಕಾರ್ಮಿಕರ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಓದಿ : ಮಾಸ್ಕ್ ಹಾಕಿಲ್ಲ ಎಂದು ಅಪರಾಧಿಯಂತೆ ಕೊಂಡೊಯ್ದ ಪೊಲೀಸರು.. ವಿಡಿಯೋ ವೈರಲ್
ಜಿಲ್ಲೆಯಲ್ಲಿ ಇಂದು 8 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಕೊಪ್ಪಳ ತಾಲೂಕಿನಲ್ಲಿ 3 ಹಾಗೂ ಗಂಗಾವತಿ ತಾಲೂಕಿನಲ್ಲಿ 5 ಪ್ರಕರಣಗಳು ವರದಿಯಾಗಿವೆ.