ಕುಷ್ಟಗಿ(ಕೊಪ್ಪಳ): ತಾಲೂಕಿನ ನಿಡಶೇಸಿ ಗ್ರಾಮದಲ್ಲಿರುವ ಕರ್ನಾಟಕ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿ ( KSDA)ಯ ಇಸ್ರೇಲ್ ಮಾದರಿ ತೋಟಗಾರಿಕೆ ಕ್ಷೇತ್ರಕ್ಕೆ ಬೆಂಗಳೂರು ತೋಟಗಾರಿಕೆ ಇಲಾಖೆ ನಿರ್ದೇಶನಾಲಯದ ನಿರ್ದೇಶಕಿ ಬಿ. ಫೌಜೀಯ ತರನ್ನಂ ಅವರು, ಭೇಟಿ ನೀಡಿ ಪರಿಶೀಲಿಸಿದರು.
ಇಸ್ರೇಲ್ ಮಾದರಿ ತೋಟಗಾರಿಕೆ ಕ್ಷೇತ್ರದಲ್ಲಿ ಎರೆಜಲ ಹಾಗೂ ಎರೆಗೊಬ್ಬರ ಮಾದರಿ ಘಟಕ, ಸ್ವಯಂ ಚಾಲಿತ ನೀರಾವರಿ ವ್ಯವಸ್ಥೆ, ಸಂರಕ್ಷಿತ ದಾಳಿಂಬೆ, ಟೊಮ್ಯಾಟೋ ಸೇರಿದಂತೆ ಇತರೇ ಬೆಳೆಗಳಾದ ಡ್ರ್ಯಾಗನ್ ಫ್ರುಟ್, ಮಧುವನ ಜೇನು ಘಟಕ, ಮೀನುಗಾರಿಕೆ ಇತ್ಯಾಧಿ ಘಟಕಳನ್ನ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಿಡಶೇಸಿ ಇಸ್ರೇಲ್ ಮಾದರಿ ತೋಟಗಾರಿಕೆ ಕ್ಷೇತ್ರದಲ್ಲಿ ತರಕಾರಿ ಹಾಗೂ ಹಣ್ಣುಗಳ ಉತ್ಪನ್ನಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು, ಇನ್ಮುಂದೆ ಪುಷ್ಪ ಕೃಷಿಗೂ ಆದ್ಯತೆ ವಹಿಸಬೇಕು. ಇದಕ್ಕೆ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು. ಮಧುವನದ ಜೇನು ಘಟಕದಲ್ಲಿರುವ ಮಿಶ್ರೀ ಜೇನಿನ ಬಗ್ಗೆ ಮಾಹಿತಿ ಪಡೆದುಕೊಂಡ ಅವರು, ಮಿಶ್ರೀ ಜೇನು ಹುತ್ತದಲ್ಲಿಡುವ ಜೇನು ಆಗಿದ್ದು, ವರ್ಷಕ್ಕೊಮ್ಮೆ ಜೇನುತುಪ್ಪ ಬರುತ್ತಿದ್ದು, ಇದು ಪ್ರತಿ ಕೆಜಿಗೆ 4 ಸಾವಿರ ರೂ. ಇದೆ. ಈ ಜೇನು ನೇರವಾಗಿ ಹೂವಿನ ಮಕರಂಧದಿಂದ ತಯಾರಿಸು ಮಿಶ್ರೀ ಸಾಮಾನ್ಯ ಜೇನಿಗಿಂತ ಚಿಕ್ಕದಾಗಿದ್ದು, ಜೇನು ಆಯುರ್ವೇಧದಲ್ಲಿ ಔಷಧದಲ್ಲಿ ಬಹುಪಯೋಗಿ ಬಗ್ಗೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣ ಉಕ್ಕುಂದ ಮಾಹಿತಿ ನೀಡಿದರು.
ಇದೇ ವೇಳೆ, ಎರೆಜಲ ಹಾಗೂ ಎರೆಗೊಬ್ಬರ ಘಟಕ ಪರಿಶೀಲಿಸಿದ ನಿರ್ದೇಶಕಿ ಬಿ.ಫೌಜೀಯ ತರನ್ನಂ ಅವರು, ಈ ಘಟಕದ ರಾಜ್ಯದಲ್ಲಿ ಮಾದರಿ ಸರ್ಕಾರಿ ಘಟಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ, ಭೇಟಿಯ ಜ್ಞಾಪಕಾರ್ಥವಾಗಿ ತೆಂಗಿನ ಸಸಿ ನಾಟಿ ಮಾಡಿದರು. ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ದುರ್ಗಾಪ್ರಸಾದ್, ಸಹಾಯಕ ಅಧಿಕಾರಿ ಆಂಜನೇಯ ದಾಸರ್, ಕಳಕನಗೌಡ ಪಾಟೀಲ ಇದ್ದರು.