ETV Bharat / state

ಪೌರಕಾರ್ಮಿಕರ ನೆರವಿಗೆ ಬಂದ ಕರ್ನಾಟಕ ನವನಿರ್ಮಾಣ ಸೇನೆ

ಪೌರಕಾರ್ಮಿಕರಿಗೆ ಕರ್ನಾಟಕ ನವ ನಿರ್ಮಾಣ ಸೇನೆ ಹಾಗೂ ಕವಲೂರು ಎಜುಕೇಷನ್ ಟ್ರಸ್ಟ್​ನಿಂದ ಸಹಾಯ ಮಾಡಲಾಯಿತು. ಕವಲೂರು ಎಜುಕೇಷನ್ ಟ್ರಸ್ಟ್​ನ ವಿಜಯಕುಮಾರ್ ಕವಲೂರು ನಗರಸಭೆಯ ಸುಮಾರು 165 ಪೌರಕಾರ್ಮಿಕ ಕುಟುಂಬಗಳಿಗೆ ಅಕ್ಕಿ, ಬೇಳೆ, ಎಣ್ಣೆ, ಪೇಸ್ಟ್, ರವೆ, ಸಾಬೂನು ಸೇರಿದಂತೆ ಇತರ ವಸ್ತುಗಳನ್ನು ವಿತರಿಸಿದರು‌‌.

author img

By

Published : Apr 2, 2020, 2:57 PM IST

ಕರ್ನಾಟಕ ನವನಿರ್ಮಾಣ ಸೇನೆ
ಕರ್ನಾಟಕ ನವನಿರ್ಮಾಣ ಸೇನೆ

ಕೊಪ್ಪಳ:- ಕೊರೊನಾ ಕಂಟ್ರೋಲ್ ಮಾಡುವ ನಿಟ್ಟಿನಲ್ಲಿ ಇಡೀ ದೇಶವೇ ಲಾಕ್​​​​ಡೌನ್ ಆಗಿದೆ. ಕೊಪ್ಪಳದಲ್ಲಿಯೂ ಲಾಕ್​ಡೌನ್​​ ಆದ ಹಿನ್ನೆಲೆಯಲ್ಲಿ ಅನೇಕರು ಸಮಾಜಕ್ಕೆ ತಮ್ಮದೇ ಆದ ಶಕ್ತಿ ಅನುಸಾರ ಸಹಾಯ ಮಾಡಿ ಮಾನವೀಯತೆ ತೋರುತ್ತಿದ್ದಾರೆ.

ಇಂದು ನಗರದಲ್ಲಿ ಪೌರಕಾರ್ಮಿಕರಿಗೆ ಕರ್ನಾಟಕ ನವನಿರ್ಮಾಣ ಸೇನೆ ಹಾಗೂ ಕವಲೂರು ಎಜುಕೇಷನ್ ಟ್ರಸ್ಟ್​ನಿಂದ ಸಹಾಯ ಮಾಡಲಾಯಿತು. ಕವಲೂರು ಎಜುಕೇಷನ್ ಟ್ರಸ್ಟ್​ನ ವಿಜಯಕುಮಾರ್ ಕವಲೂರು ನಗರಸಭೆಯ ಸುಮಾರು 165 ಪೌರಕಾರ್ಮಿಕ ಕುಟುಂಬಗಳಿಗೆ ಅಕ್ಕಿ, ಬೇಳೆ, ಎಣ್ಣೆ, ಪೇಸ್ಟ್, ರವೆ, ಸಾಬೂನು ಸೇರಿದಂತೆ ಇತರ ವಸ್ತುಗಳನ್ನು ವಿತರಿಸಿದರು‌‌.

ಒಟ್ಟು 410 ರೂಪಾಯಿ ಮೌಲ್ಯದ ಒಂದು ಕಿಟ್ ಇದಾಗಿದ್ದು, 165 ಕಿಟ್​ಗಳನ್ನು ವಿತರಿಸಿದರು. ಇನ್ನು ಇತ್ತ ಪಾಟೀಲ್ ಬೋರ್​ವೆಲ್ಸ್​ನಿಂದ ಕರ್ತವ್ಯ ನಿರತ ಸಿಬ್ಬಂದಿ ಹಾಗೂ ಜಿಲ್ಲಾಸ್ಪತ್ರೆ ಬಳಿ ಉಪಾಹಾರ, ನೀರು ನೀಡುವ ಮೂಲಕ ಮಾನವೀಯತೆ ಮೆರೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.