ETV Bharat / state

ಯಲಬುರ್ಗಾ ಕ್ಷೇತ್ರದಲ್ಲಿ ಕೈ - ಕಮಲ ನೇರ ಹಣಾಹಣಿ: ಹಾಲಪ್ಪ, ರಾಯರಡ್ಡಿ ನಡುವೆ ಗೆಲ್ಲೋರ್ಯಾರು? - ಯಲಬುರ್ಗಾ ಕ್ಷೇತ್ರ

ಭತ್ತದ ಕಣಜ ಎಂದೇ ಖ್ಯಾತಿ ಪಡೆದ ಕೊಪ್ಪಳ ಜಿಲ್ಲೆಯಲ್ಲಿ ವಿಧಾನಸಭೆಯ ಚುನಾವಣಾ ಕಾವು ಜೋರಾಗಿದೆ. ಅದರಲ್ಲೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹಾಲಪ್ಪ ಆಚಾರ್ ಮತ್ತು ಕಾಂಗ್ರೆಸ್​ನ ಬಸವರಾಜ ರಾಯರಡ್ಡಿ ನಡುವೆ ನೇರ ಹಣಾಹಣಿ ಇದ್ದು, ಗೆಲ್ಲೋರ್ಯಾರು ಎಂಬ ಕುತೂಹಲ ಕೆರಳಿಸಿದೆ.

karnataka-assembly-election-2023-details-ofyelburga-assembly-constituency
ಯಲಬುರ್ಗಾ ಕ್ಷೇತ್ರದಲ್ಲಿ ಕೈ - ಕಮಲ ನೇರ ಹಣಾಹಣಿ
author img

By

Published : Apr 15, 2023, 8:00 PM IST

ಕೊಪ್ಪಳ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಯಲಬುರ್ಗಾ ವಿಧಾನಸಭಾ ಕ್ಷೇತ್ರ ಒಂದು. ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಹೊಂದಿರುವ ಕ್ಷೇತ್ರವು ಯಲಬುರ್ಗಾ ತಾಲೂಕು ಹಾಗೂ ನೂತನ ಕುಕನೂರು ತಾಲೂಕನ್ನು ಒಳಗೊಂಡಿದೆ. ಸಾಮಾನ್ಯ ಕ್ಷೇತ್ರವಾಗಿರುವ ಇಲ್ಲಿ ಲಿಂಗಾಯತ ಸಮುದಾಯದವರೇ ಇಲ್ಲಿಯವರೆಗೆ ಶಾಸಕರಾಗಿ ಆಯ್ಕೆಯಾಗಿದ್ದು ವಿಶೇಷ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಸವರಾಜ ರಾಯರಡ್ಡಿ ಮತ್ತು ಹಾಲಿ ಸಚಿವ ಹಾಲಪ್ಪ ಆಚಾರ್ ನಡುವೆ ನೇರ ಪೈಪೋಟಿ ಇದೆ.

ಯಲಬುರ್ಗಾ ಕ್ಷೇತ್ರದ ಚುನಾವಣಾ ಇತಿಹಾಸ: ಶೇ.90ರಷ್ಟು ಮಳೆಯಾಧಾರಿತ ಕೃಷಿ ಭೂಮಿ, ದೇವಾಲಯಗಳ ಚಕ್ರವರ್ತಿ ಎಂದು ಖ್ಯಾತಿ ಪಡೆದಿರುವ ಇಟಗಿಯ ಮಹಾದೇವ ದೇವಾಲಯ ಹಾಗೂ ಕುಕನೂರಿನಲ್ಲಿರುವ ಶಕ್ತಿ ದೇವತೆ ಮಹಾಮಾಯಾ ದೇವಾಲಯ, ಐತಿಹಾಸಿಕ ಕಲ್ಲೂರಿನ ಕಲ್ಲಿನಾಥೇಶ್ವರ ದೇಗುಲಗಳು ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿವೆ.

ಯಲಬುರ್ಗಾ ವಿಧಾನಸಭೆಗೆ 17 ಚುನಾವಣೆಗಳು ಜರುಗಿದ್ದು, 1957ರಲ್ಲಿ ಮೊದಲ ಬಾರಿಗೆ ಭರತೀಯ ರಾಷ್ಟ್ರೀಯ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಅಳವಂಡಿ ಶಂಕರಗೌಡ ಆಯ್ಕೆಯಾಗಿದ್ದರು. ನಂತರ 1962ರಲ್ಲಿ ಲೋಕಸೇವಾ ಸಂಘದಿಂದ ಸ್ಪರ್ಧಿಸಿದ್ದ ವೀರಭದ್ರಪ್ಪ ಶಾಸಕರಾಗಿದ್ದರು. 1967ರಲ್ಲಿ ಚೆನ್ನಬಸನಗೌಡ, 1972ರಲ್ಲಿ ಪ್ರಭುಲಿಂಗ ಲಿಂಗನಗೌಡ, 1978ರಲ್ಲಿ ಲಿಂಗರಾಜ, 1983 ರಲ್ಲಿ ಲಿಂಗರಾಜ ದೇಸಾಯಿ ಇವರೆಲ್ಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದವರಾಗಿದ್ದಾರೆ.

ಯಲಬುರ್ಗಾ ಕ್ಷೇತ್ರದಲ್ಲಿ 1967ರಿಂದ 2018ರವರೆಗೆ ಗೆದ್ದ ಮತ್ತು ಸೋತ ಅಭ್ಯರ್ಥಿಗಳು

ಐದು ಗೆದ್ದಿರುವ ರಾಯರಡ್ಡಿ: 1985ರಲ್ಲಿ ಜೆಎನ್​ಪಿಯಿಂದ ಸ್ಪರ್ಧಿಸಿ ಬಸವರಾಜ ರಾಯರಡ್ಡಿ ಆಯ್ಕೆಯಾಗಿದ್ದರು. ಅಲ್ಲಿಂದ 1989 ಮತ್ತು 1994ರಲ್ಲಿ ಜನತಾ ದಳದಿಂದ ಆಯ್ಕೆಯಾಗಿ ಬಸವರಾಜ ರಾಯರೆಡ್ಡಿ ಹ್ಯಾಟ್ರಿಕ್​ ಗೆಲುವು ಸಾಧಿಸಿದ್ದರು. 1996ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಶಿವಶರಣಗೌಡ ಪಾಟೀಲ ಆಯ್ಕೆಗೊಂಡಿದ್ದರು. ಇದಾದ ಬಳಿಕ 2004ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿ ರಾಯರಡ್ಡಿ ಜಯ ದಾಖಲಿಸಿದ್ದರು. 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಈಶಣ್ಣ ಗುಳಗಣ್ಣವರ ಆಯ್ಕೆಯಾಗಿದ್ದರು. 2013ರಲ್ಲಿ ಕಾಂಗ್ರೆಸ್​ನಿಂದ ಬಸವರಾಜ ರಾಯರಡ್ಡಿ ಮತ್ತೊಮ್ಮೆ ಗೆಲುವು ಸಾಧಿಸಿದ್ದರು. ಕಳೆದ 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಹಾಲಪ್ಪ ಆಚಾರ್​ ಮೊದಲ ವಿಧಾನಸಭೆಗೆ ಬಾರಿಗೆ ಆಯ್ಕೆಯಾದರು.

ರಾಯರಡ್ಡಿ ವರ್ಸಸ್ ಹಾಲಪ್ಪ: ಈ ಮೊದಲು ರಾಯರಡ್ಡಿ ಮತ್ತು ಹಾಲಪ್ಪ ಆಚಾರ್ ಇಬ್ಬರೂ ಕಾಂಗ್ರೆಸ್ ಪಕ್ಷದಲ್ಲಿದ್ದರು. ಆದರೆ, ಹಾಲಪ್ಪ ಆಚಾರ್​ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಬಳಿಕ ವಿಧಾನ ಪರಿಷತ್​ ಆಯ್ಕೆಯಾಗಿದ್ದರು. ನಂತರ 2013ರ ಚುನಾವಣೆಯಲ್ಲಿ ಹಾಲಪ್ಪ ಆಚಾರ್ ಬಿಜೆಪಿಯಿಂದ ರಾಯರಡ್ಡಿ ವಿರುದ್ಧ ಸ್ಪರ್ಧೆ ಮಾಡಿದ್ದರು. ಆದರೆ, ಈ ಚುನಾವಣೆಯಲ್ಲಿ 16,900 ಮತಗಳಿಂದ ಹಾಲಪ್ಪ ಸೋಲು ಕಂಡಿದ್ದರು. ರಾಯರಡ್ಡಿ 52,388 ಮತ ಪಡೆದು ಗೆಲುವು ಸಾಧಿಸಿದರೆ, ಹಾಲಪ್ಪ 35,488 ಮತಗಳು ಗಳಿಸಿದ್ದರು. ಸಿದ್ದರಾಮಯ್ಯ ಸರ್ಕಾರದಲ್ಲಿ ರಾಯರಡ್ಡಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

1967ರಿಂದ 2018ರವರೆಗೆ ಪಕ್ಷಗಳ ಪಡೆದ ಶೇಕಡಾವಾರು ಮತ

2018ರ ವಿಧಾನಸಭೆ ಚುನಾವಣೆಯಲ್ಲಿ ರಾಯರಡ್ಡಿ ಮತ್ತು ಹಾಲಪ್ಪ ಆಚಾರ್​ ನಡುವೆ ಪೈಪೋಟಿ ಏರ್ಪಟ್ಟಿತ್ತು. ಇದರಲ್ಲಿ ರಾಯರಡ್ಡಿ ಅವರನ್ನು ಹಾಲಪ್ಪ ಸೋಲಿಸುವ ಮೂಲಕ ಮೂಲಕ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಈ ಚುನಾವಣೆಯಲ್ಲಿ ಹಾಲಪ್ಪ ಆಚಾರ್ 79,072 ಮತ ಪಡೆದರೆ, ರಾಯರಡ್ಡಿ 65,754 ಮತ ಪಡೆದು 13,318 ಮತಗಳ ಅಂತರದಿಂದ ಸೋತಿದ್ದರು. ಬಿಜೆಪಿ ಸರ್ಕಾರದಲ್ಲಿ ಹಾಲಪ್ಪ ಆಚಾರ್ ಸಹ ಸಚಿವರಾಗಿದ್ದಾರೆ. ಈಗ 2023ರ ಚುನಾವಣೆಯಲ್ಲೂ ರಾಯರಡ್ಡಿ ಮತ್ತು ಹಾಲಪ್ಪ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಜೆಡಿಎಸ್ ಸಹ ಪೈಪೋಟಿ ನೀಡಲು ಮುಂದಾಗಿದೆ.

ಮಹಿಳಾ ಮತ್ತು ಪುರುಷರ ಶೇಕಡಾವಾರು ಮತದಾನ
ಮಹಿಳಾ ಮತ್ತು ಪುರುಷರ ಶೇಕಡಾವಾರು ಮತದಾನ

2013ರ ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ್ದ ಅಫಿಡವಿಟ್​ ಮಾಹಿತಿ ಪ್ರಕಾರ ರಾಯರಡ್ಡಿ 8.41 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. 2018ರ ಚುನಾವಣೆಯ ಅಫಿಡವಿಟ್ ಪ್ರಕಾರ ಹಾಲಪ್ಪ ಆಚಾರ್ 4 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಜೊತೆಗೆ ಒಂದು ಕ್ರಿಮಿನಲ್​ ಕೇಸ್​ ದಾಖಲಾಗಿರುವ ಬಗ್ಗೆಯೂ ಅಫಿಡವಿಟ್​ನಲ್ಲಿ ತಿಳಿಸಿದ್ದರು.

ರಾಯರಡ್ಡಿಗೆ ಸವದಿ ವರ?: ಯಲಬುರ್ಗಾ ಲಿಂಗಾಯತ ಗಾಣಿಗ, ಪಂಚಮಸಾಲಿ ಸಮುದಾಯದ ಹೆಚ್ಚು ಮತದಾರರಿರುವ ಕ್ಷೇತ್ರವಾಗಿದೆ. ಆದರೆ, ಕುರುಬ ಸಮುದಾಯದ ಮತಗಳು ಗೆಲುವಿನ ನಿರ್ಣಾಯಕ ಪಾತ್ರವಹಿಸುತ್ತವೆ. ಸದ್ಯ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರಿರುವ ಲಕ್ಷ್ಮಣ ಸವದಿ ಅಭ್ಯರ್ಥಿ ಬಸವರಾಜ ರಾಯರಡ್ಡಿ ಗೆಲುವಿಗೆ ವರವಾಗಲಿದೆ ಎಂಬ ನಿರೀಕ್ಷೆ ಇದೆ. ಗಾಣಿಗ ಸಮುದಾಯ ಯಲಬುರ್ಗಾದಲ್ಲಿ ಪ್ರಬಲವಾಗಿದ್ದು, ಲಕ್ಷ್ಮಣ್​ ಸವದಿ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಸವದಿ ಆಗಮನದಿಂದ ಗಾಣಿಗ ಸಮುದಾಯದ ಮತಗಳು ಕಾಂಗ್ರೆಸ್ ಪಾಲಾಗಲಿವೆ ಎಂಬ ಮಾತುಗಳು ಕೇಳಿಬರುತ್ತಿವೆ.

ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಾಹಿತಿ
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಮಾಹಿತಿ

ಮತದಾರರ ಅಂಕಿ ಸಂಖ್ಯೆ: ಯಲಬುರ್ಗಾ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2,20,209 ಜನರಿದ್ದು, ಅದರಲ್ಲಿ 1,10,555 ಪುರುಷ ಮತದಾರರು ಹಾಗೂ 1,00,643 ಮಹಿಳಾ ಮತದಾರರು ಮತ್ತು ಇತರೆ 11 ಮತದಾರರಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕಮಲ ಕಟ್ಟಿಹಾಕಲು ಪ್ರತಿಪಕ್ಷಗಳ ರಣತಂತ್ರ: ಪ್ರಾಬಲ್ಯಕ್ಕಾಗಿ ಕೈ-ದಳ ಪೈಪೋಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.