ETV Bharat / state

ಹಳಿ ತಪ್ಪಿದ ಕಾರಟಗಿ - ಯಶವಂತಪುರ ರೈಲು: ಗಂಗಾವತಿ-ಕಾರಟಗಿ ನಡುವೆ ಸಂಚರಿಸುವ ರೈಲುಗಳ ಭಾಗಶಃ ರದ್ದು - ಕಾರಟಗಿ ಯಶವಂತರಪು ರೈಲು

ಕಾರಟಗಿ ರೈಲ್ವೆ ನಿಲ್ದಾಣದ ಸಮೀಪ ಕಾರಟಗಿ - ಯಶವಂತರಪುರ ರೈಲು ಹಳಿ ತಪ್ಪಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪರಿಣಾಮ ಕೆಲವು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.

ಹಳಿ ತಪ್ಪಿದ ಕಾರಟಗಿ ಯಶವಂತರಪು ರೈಲು
ಹಳಿ ತಪ್ಪಿದ ಕಾರಟಗಿ ಯಶವಂತರಪು ರೈಲು
author img

By ETV Bharat Karnataka Team

Published : Oct 17, 2023, 2:00 PM IST

Updated : Oct 17, 2023, 4:29 PM IST

ಹಳಿ ತಪ್ಪಿದ ಕಾರಟಗಿ ಯಶವಂತಪುರ ರೈಲು

ಗಂಗಾವತಿ (ಕೊಪ್ಪಳ): ಕಾರಟಗಿ - ಯಶವಂತರಪುರ ರೈಲು ಹಳಿ ತಪ್ಪಿದ ಘಟನೆ ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಕಾರಟಗಿ ರೈಲ್ವೆ ನಿಲ್ದಾಣದ ಸಮೀಪ ನಡೆದಿದೆ. ಚಾಲಕನ ಸಮಯ ಪ್ರಜ್ಞೆಯಿಂದಾಗಿ ರೈಲಿನಲ್ಲಿದ್ದ ನೂರಾರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಾಂತ್ರಿಕ ಕಾರಣದಿಂದ ಎಂಜಿನ್ ಮುಂಭಾಗದಲ್ಲಿನ ಚಕ್ರ ಹಳಿ ತಪ್ಪಿದ್ದು ಗಮನಕ್ಕೆ ಬರುತ್ತಿದ್ದಂತೆಯೆ ತಕ್ಷಣ ಎಚ್ಚೆತ್ತುಕೊಂಡ ಲೋಕೋ ಪೈಲಟ್ ಕೂಡಲೇ ವೇಗವನ್ನು ಶೂನ್ಯಕ್ಕೆ ಇಳಿಸಿ ಅಪಾಯ ತಪ್ಪಿಸಿದ್ದಾರೆ. ಹೀಗಾಗಿ ರೈಲಿನ ಎಂಜಿನ್ ಮಾತ್ರ ಹಳಿ ತಪ್ಪಿದ್ದು, ಬೋಗಿಗಳು ಹಳಿಯ ಮೇಲೆ ನಿಂತಿವೆ. ರೈಲು ನಿಲ್ದಾಣ ಸಮೀಪಿಸಿದ್ದರಿಂದ ರೈಲಿನ ವೇಗವನ್ನು ಕಡಿಮೆ ಮಾಡಿದ್ದರಿಂದಾಗಿ ಲೋಕೋ ಪೈಲಟ್ ರೈಲನ್ನು ನಿಯಂತ್ರಿಸಲು ಸಾಧ್ಯವಾಗಿದೆ.

ಹಳಿ ತಪ್ಪಿದ ಕಾರಟಗಿ ಯಶವಂತರಪು ರೈಲು
ಹಳಿ ತಪ್ಪಿದ ಕಾರಟಗಿ ಯಶವಂತರಪು ರೈಲು

ಬೆಂಗಳೂರಿನ ಯಶವಂತಪುರದಿಂದ ಹೊರಟ ರೈಲು ಕಾರಟಗಿ ರೈಲು ನಿಲ್ದಾಣ ಸಮೀಪಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ರೈಲಿನಲ್ಲಿ ನೂರಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಆದರೆ ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ.

ಹಳಿ ತಪ್ಪಿದ ರೈಲನ್ನು ಮತ್ತೆ ಹಳಿಗೆ ತರಲು ಹೊಸಪೇಟೆಯಿಂದ ಕ್ರೇನ್ ತರಿಸಿದ್ದು, ಸುಮಾರು 4-5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಯಲಿದೆ. ಸಂಜೆಯ ಕಾರಟಗಿ - ಬೆಂಗಳೂರು ಮಧ್ಯದ ಸಂಚಾರವನ್ನು ರದ್ದು ಪಡಿಸುವ ಸಾಧ್ಯತೆ ಇದೆ. ರೈಲು ಹಳಿ ತಪ್ಪಿದ್ದರಿಂದ ಮಧ್ಯಾಹ್ನ 2.15ಕ್ಕೆ ಕಾರಟಗಿಯಿಂದ ಹುಬ್ಬಳ್ಳಿ ಮಾರ್ಗದಲ್ಲಿ ಸಂಚರಿಸಬೇಕಿದ್ದ ರೈಲು ಪ್ರಯಾಣ ಸ್ಥಗಿತಗೊಳಿಸಲಾಗಿದೆ ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಹಳಿ ತಪ್ಪಿದ ಕಾರಟಗಿ ಯಶವಂತರಪು ರೈಲು
ಹಳಿ ತಪ್ಪಿದ ಕಾರಟಗಿ ಯಶವಂತರಪು ರೈಲು

ಸಹಜವಾಗಿ ಪ್ರತಿ ಗಂಟೆಗೆ 90 ರಿಂದ 100 ಕಿಮೀ ವೇಗದಲ್ಲಿ ಸಂಚರಿಸುವ ಕಾರಟಗಿ - ಯಶವಂತರಪುರ ರೈಲು, ಕಾರಟಗಿಯ ನಿಲ್ದಾಣ ಸಮೀಪಿಸಿದ್ದರಿಂದ ರೈಲಿನ ವೇಗವನ್ನು ಗಂಟೆಗೆ 20ರಿಂದ 30 ಕಿ.ಮೀಗೆ ಇಳಿಸಲಾಗಿತ್ತು. ಹೀಗಾಗಿ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಗಂಗಾವತಿ ಕಾರಟಗಿ ನಡುವೆ ಸಂಚರಿಸುವ ರೈಲುಗಳು ಭಾಗಶಃ ರದ್ದು...

ಕಾರಟಗಿಯಲ್ಲಿ ಎಂಜಿನ್ ಸಂಖ್ಯೆ WDP 4B 40066 ಹಳಿತಪ್ಪಿದೆ. ರೈಲು ಸಂಖ್ಯೆ 16545 ಯಶವಂತಪುರ-ಕಾರಟಗಿ ಎಕ್ಸ್‌ಪ್ರೆಸ್‌ನ ಇಂಜಿನ್ ಕಾರಟಗಿ ನಿಲ್ದಾಣದಲ್ಲಿ ಹಳಿತಪ್ಪಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ನೈರುತ್ಯ ವಿಭಾಗೀಯ ರೈಲ್ವೆ ಮ್ಯಾನೇಜರ್ ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಹಳಿ ತಪ್ಪಿದ ಪರಿಣಾಮ ಗಂಗಾವತಿಯಿಂದ ಕಾರಟಗಿ ನಡುವೆ ಸಂಚರಿಸುವ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ.

1. ರೈಲು ಸಂಖ್ಯೆ 07381 SSS ಹುಬ್ಬಳ್ಳಿ- ಕಾರಟಗಿ ಪ್ಯಾಸೆಂಜರ್ 17.10.2023ರ ವಿಶೇಷ ರೈಲು ಗಂಗಾವತಿಯಲ್ಲಿ ಕೊನೆಗೊಳ್ಳುತ್ತದೆ.

2. ರೈಲು ಸಂಖ್ಯೆ 07382 ಕಾರಟಗಿ - 17.10.2023 ರ ಎಸ್‌ಎಸ್‌ಎಸ್ ಹುಬ್ಬಳ್ಳಿ ಪ್ಯಾಸೆಂಜರ್ ವಿಶೇಷ ರೈಲು ಕಾರಟಗಿ ಮತ್ತು ಗಂಗಾವತಿ ನಡುವೆ ಭಾಗಶಃ ರದ್ದಾಗಿದೆ ಮತ್ತು ರೈಲು ಗಂಗಾವತಿಯಿಂದ ಹೊರಡಲಿದೆ.

3. ರೈಲು ಸಂಖ್ಯೆ 16546 ಕಾರಟಗಿ - ಯಶವಂತಪುರ ಎಕ್ಸ್‌ಪ್ರೆಸ್ 17.10.2023 ಕಾರಟಗಿ ಮತ್ತು ಗಂಗಾವತಿ ನಡುವೆ ಭಾಗಶಃ ರದ್ದುಗೊಳಿಸಲಾಗಿದೆ ಮತ್ತು ರೈಲು ಗಂಗಾವತಿಯಿಂದ ಹೊರಡಲಿದೆ. ರೈಲು ಸಂಚಾರ ಸ್ಥಗಿತ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಗಂಗಾವತಿ ಮತ್ತು ಕಾರಟಗಿ ನಡುವೆ ಬಸ್ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಮಾಡಿದೆ.

ಇದನ್ನೂ ಓದಿ: ಮುಲ್ಲಾಪುರ ಬಳಿ ಹಳಿ ತಪ್ಪಿದ ಗೂಡ್ಸ್​ ರೈಲು: ತಪ್ಪಿದ ಭಾರಿ ಅನಾಹುತ

Last Updated : Oct 17, 2023, 4:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.