ETV Bharat / state

ಆಸ್ತಿ ಎಷ್ಟೋ ಅಷ್ಟೇ ಸಾಲ: ಆದಾಯ ವಿವರ ತಿಳಿಸಿದ ಸಂಗಣ್ಣ ಕರಡಿ - etv bharat

ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಚುನಾವಣಾಧಿಕಾರಿಗೆ ತಮ್ಮ ಆಸ್ತಿ ವಿವರವನ್ನು ಸಲ್ಲಿಸಿದ್ದು, ತಾವು ಎಷ್ಟು ಆಸ್ತಿ ಹೊಂದಿದ್ದಾರೋ ಅಷ್ಟು ಸಾಲವನ್ನೂ ತೋರಿಸಿದ್ದಾರೆ.

ಆಸ್ತಿ ವಿವರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ
author img

By

Published : Apr 4, 2019, 12:57 PM IST

ಕೊಪ್ಪಳ: ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ತಮ್ಮ ಆಸ್ತಿ ಎಷ್ಟಿದೆಯೋ ಅಷ್ಟು ಹತ್ತಿರವಾಗಿ ಸಾಲವನ್ನೂ ಹೊಂದಿದ್ದಾರೆ. ಈ ಕುರಿತಂತೆ ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಾವು ಹೊಂದಿರುವ ಆಸ್ತಿ ಮತ್ತು ಆದಾಯ ವಿವರವನ್ನು ತಿಳಿಸಿದ್ದಾರೆ.

ಆಸ್ತಿ ವಿವರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ

ಕರಡಿ ಸಂಗಣ್ಣ ಅವರು ಒಟ್ಟು 2.51 ಕೋಟಿ ರೂ. ಆಸ್ತಿ ಹೊಂದಿದ್ದು, 2.3 ಕೋಟಿ ರೂ. ಸಾಲವಿದೆ ಎಂದು ಮಾಹಿತಿ‌ ನೀಡಿದ್ದಾರೆ. ಅವರ ಪತ್ನಿ ನಿಂಗಮ್ಮ 35.9 ಲಕ್ಷ ರೂ. ಮೌಲ್ಯದ ಆಸ್ತಿಯ ಒಡತಿಯಾಗಿದ್ದಾರೆ. ಇದರ ಜೊತೆಗೆ 21 ಲಕ್ಷ ರೂ. ಸಾಲಗಾರರು ಆಗಿದ್ದಾರೆ. ಅಭ್ಯರ್ಥಿ ಕರಡಿ ಸಂಗಣ್ಣ ಅವರ ಕೈಯಲ್ಲಿ 2 ಲಕ್ಷ ರೂ. ನಗದು ಹಾಗೂ ಪತ್ನಿ ನಿಂಗಮ್ಮ ಅವರ ಕೈಯಲ್ಲಿ 1 ಲಕ್ಷ ರೂ. ನಗದು ಇದೆ ಎಂದು ಮಾಹಿತಿ ನೀಡಿದ್ದಾರೆ‌.

ವ್ಯವಸಾಯ ಆದಾಯದ ಮೂಲವಾಗಿ 14 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಇನ್ನು ಪ್ರಮಾಣಪತ್ರದಲ್ಲಿ ವಾರ್ಷಿಕ ಆದಾಯ 38.91 ಲಕ್ಷ ರೂ. ತೋರಿಸಿದ್ದಾರೆ‌. ಪತ್ನಿ ನಿಂಗಮ್ಮ ಗೃಹಿಣಿಯಾಗಿದ್ದು, ಆದಾಯ ತೋರಿಸಿಲ್ಲ. ಕರಡಿ ಸಂಗಣ್ಣ ಅವರು ವಿವಿಧ‌ ಬ್ಯಾಂಕ್​ಗಳಲ್ಲಿ ನಾಲ್ಕು ಖಾತೆಗಳನ್ನು ಹೊಂದಿದ್ದಾರೆ. 100 ಗ್ರಾಂ ಚಿನ್ನ, ಒಂದು ಫಾರ್ಚೂನರ್​ ಕಾರು ಹೊಂದಿದ್ದಾರೆ. ಪತ್ನಿ ನಿಂಗಮ್ಮ ಬಳಿ 200 ಗ್ರಾಂ ಚಿನ್ನ, 350 ಗ್ರಾಂ ಬೆಳ್ಳಿ ಹೊಂದಿರುವುದಾಗಿ ಚುನಾವಣಾಧಿಕಾರಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

Intro:

Body:ಕೊಪ್ಪಳ:- ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಹೊಂದಿರುವ ಆಸ್ತಿಗೆ ಹತ್ತಿರವಾಗಿ ಸಾಲವನ್ನೂ ಹೊಂದಿದ್ದಾರೆ. ಈ ಕುರಿತಂತೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೊಂದಿರುವ ಆಸ್ತಿ ಮತ್ತು ಆದಾಯ ವಿವರ ತಿಳಿಸಿದ್ದಾರೆ. ಕರಡಿ ಸಂಗಣ್ಣ ಅವರು ಒಟ್ಟು ೨.೫೧ ಕೋಟಿ ರುಪಾಯಿ ಆಸ್ತಿ ಹೊಂದಿದ್ದರೆ, ೨.೩ ಕೋಟಿ ರುಪಾಯಿ ಸಾಲವಿದೆ ಎಂದು ಮಾಹಿತಿ‌ ನೀಡಿದ್ದಾರೆ. ಅವರ ಪತ್ನಿ ನಿಂಗಮ್ಮ ಅವರು ೩೫.೯ ಲಕ್ಷ ರುಪಾಯಿ ಮೌಲ್ಯದ ಆಸ್ತಿಯ ಒಡತಿಯಾಗಿದ್ದಾರೆ. ಇದರ ಜೊತೆಗೆ ೨೧ ಲಕ್ಷ ರುಪಾಯಿ ಸಾಲಗಾರರಾಗಿದ್ದಾರೆ. ಅಭ್ಯರ್ಥಿ ಕರಡಿ ಸಂಗಣ್ಣ ಅವರ ಕೈಯ್ಯಲ್ಲಿ ೨ ಲಕ್ಷ ರುಪಾಯಿ ನಗದು ಹಾಗೂ ಪತ್ನಿ ನಿಂಗಮ್ಮ ಅವರ ಕೈಯ್ಯಲ್ಲಿ ೧ ಲಕ್ಷ ರುಪಾಯಿ ಮಗದು ಇದೆ ಎಂದು ಮಾಹಿತಿ ನೀಡಿದ್ದಾರೆ‌. ವ್ಯವಸಾಯ ಆದಾಯದ ಮೂಲವಾಗಿದ್ದು ೧೪ ಎಕರೆ ಕೃಷಿಭೂಮಿ ಹೊಂದಿದ್ದಾರೆ. ವಾರ್ಷಿಕ ಆದಾಯ ೩೮.೯೧ ಲಕ್ಷ ರುಪಾಯಿ ತೋರಿಸಿದ್ದಾರೆ‌. ಪತ್ನಿ ನಿಂಗಮ್ಮ ಗೃಹಿಣಿಯಾಗಿದ್ದು ಆದಾಯ ತೋರಿಸಿಲ್ಲ. ಕರಡಿ ಸಂಗಣ್ಣ ಅವರು ವಿವಿಧ‌ ಬ್ಯಾಂಕ್ ಗಳಲ್ಲಿ ನಾಲ್ಕು ಖಾತೆಗಳನ್ನು ಹೊಂದಿದ್ದಾರೆ. ೧೦೦ ಗ್ರಾಂ ಚಿನ್ನ, ಒಂದು ಫಾರ್ಚೂನರ್ ಕಾರು ಹೊಂದಿದ್ದಾರೆ, ಪತ್ನಿ ನಿಂಗಮ್ಮ ಬಳಿ ೨೦೦ ಗ್ರಾಂ ಚಿನ್ನ, ೩೫೦ ಗ್ರಾಂ ಬೆಳ್ಳಿ ಹೊಂದಿರುವುದಾಗಿ ಚುನಾವಣಾಧಿಕಾರಿಗಳಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.