ಕೊಪ್ಪಳ: ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿರುವ ಐತಿಹಾಸಿಕ, ಪುರಾತನ ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹ ದೇವಾಲಯದ ಪ್ರಾಯೋಗಿಕ ರಥೋತ್ಸವ ಅಡೆತಡೆ ಇಲ್ಲದೆ ಯಶಸ್ವಿಯಾಗಿದೆ ಎಂದು ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ ಹೇಳಿದ್ದಾರೆ.
ಓದಿ: ‘ಯಾವ ಕ್ರೀಡೆ ಅಂತ ಬಿಡಿಸಿ ಹೇಳ್ರಿ’: ವಿಧಾನಸಭೆ ಕಲಾಪದಲ್ಲಿ ಸಿಡಿಯದ್ದೇ ಹಾಸ್ಯ
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ನಿನ್ನೆ ಕನಕಗಿರಿಯ ಸಾರ್ವಜನಿಕರ ಸಹಕಾರದೊಂದಿಗೆ ಪ್ರಯೋಗಿಕ ರಥೋತ್ಸವ ನಡೆಸಲಾಗಿದೆ. ಈ ಹಿಂದೆ ಒಂದಿಲ್ಲೊಂದು ತಾಂತ್ರಿಕ ಕಾರಣದಿಂದ ರಥ ಬೀದಿಯಲ್ಲಿ ನಿಲ್ಲುತ್ತಿತ್ತು. ಆದರೆ ನಿನ್ನೆ ನಡೆದ ಪ್ರಾಯೋಗಿಕ ರಥೋತ್ಸವದಲ್ಲಿ ರಥ ಪಾದಗಟ್ಟೆ ಮುಟ್ಟಿ ವಾಪಸ್ ಬಂದಿದೆ. ಇದರಿಂದಾಗಿ ಪ್ರಾಯೋಗಿಕ ರಥೋತ್ಸವ ಯಶಸ್ವಿಯಾಗಿದೆ ಎಂದು ಹೇಳಿದರು.
ರಥ ದೊಡ್ಡದಾಗಿರುವುದರಿಂದ ಈ ಹಿಂದೆ ರಥೋತ್ಸವದ ಸಂದರ್ಭದಲ್ಲಿ ಒಂದಿಲ್ಲೊಂದು ರೀತಿಯ ತಾಂತ್ರಿಕ ತೊಂದರೆಯುಂಟಾಗಿ ರಥ ಬೀದಿಯಲ್ಲಿಯೇ ನಿಲ್ಲುತ್ತಿತ್ತು. ಮರುದಿನ ಅಥವಾ ನಂತರದ ದಿನದಲ್ಲಿ ಟ್ರ್ಯಾಕ್ಟರ್ ಕಟ್ಟಿ ರಥವನ್ನು ಎಳೆದು ಸ್ವಸ್ಥಾನಕ್ಕೆ ತರಲಾಗುತ್ತಿತ್ತು.
ಆದರೆ ನಿನ್ನೆ ನಡೆದ ಪ್ರಾಯೋಗಿಕ ರಥೋತ್ಸವದಲ್ಲಿ ರಥ ಪಾದಗಟ್ಟೆ ತಲುಪಿ ಮತ್ತೆ ಸ್ವಸ್ಥಾನಕ್ಕೆ ಯಶಸ್ವಿಯಾಗಿ ಹಿಂತಿರುಗಿರುವುದು ಜನರಲ್ಲಿ ಹರ್ಷ ಮೂಡಿಸಿದೆ. ಬರುವ ತಿಂಗಳು ಕನಕಗಿರಿಯ ಶ್ರೀ ಕನಕಾಚಲ ಲಕ್ಷ್ಮೀ ನರಸಿಂಹ ಜಾತ್ರೆ ಇರುವುದರಿಂದ ಪ್ರಾಯೋಗಿಕವಾಗಿ ರಥೋತ್ಸವ ನಡೆಸಲಾಗಿದೆ.