ಕೊಪ್ಪಳ: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಇಂದು ನಡೆದ ವಿಕಲಚೇತನರ ಕಬಡ್ಡಿ ಪಂದ್ಯಾವಳಿ ಗಮನ ಸೆಳೆಯಿತು.
ವಿಕಲಚೇತನರಾಗಿದ್ದರೂ ಸಹ ದೈಹಿಕವಾಗಿ ಸಾಮಾನ್ಯರಿಗಿಂತ ತಾವೇನೂ ಕಡಿಮೆ ಇಲ್ಲ ಎಂಬಂತೆ ಕಬಡ್ಡಿಯಲ್ಲಿ ಪಾಲ್ಗೊಳ್ಳುವ ಮೂಲಕ ವಿಕಲಚೇತನ ನೌಕರರು ಗಮನ ಸೆಳೆದರು. ವಿಕಲಚೇತನರ ಕಬಡ್ಡಿ ಪಂದ್ಯಾವಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ ಚಾಲನೆ ನೀಡಿದರು.
ಆರಂಭದ ಪಂದ್ಯದಲ್ಲಿ ಗಂಗಾವತಿ ಹಾಗೂ ಕೊಪ್ಪಳ ತಾಲೂಕಿನ ತಂಡಗಳು ಭಾಗವಹಿಸಿ ಉತ್ತಮ ಪ್ರದರ್ಶನ ತೋರಿದರು. ವಿಕಲಚೇತನರ ಕಬಡ್ಡಿಗೆ ಅಲ್ಲಿದ್ದವರು ಕೇಕೆ, ಶಿಳ್ಳೆ ಹಾಕಿ ಹುರಿದುಂಬಿಸಿದರು.