ETV Bharat / state

ಜನಾರ್ದನ ರೆಡ್ಡಿ ಹೊಸ ಪಕ್ಷ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ: ಸಂಸದ ಸಂಗಣ್ಣ ಕರಡಿ

author img

By

Published : Dec 25, 2022, 5:36 PM IST

ಜನಾರ್ದನ ರೆಡ್ಡಿ ಅವರು ಘೋಷಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಯಶಸ್ವಿ ಬಗ್ಗೆ ಈಗಲೇ ಹೇಳಲು ಸಾಧ್ಯವಿಲ್ಲ-ಹಿಂದೆ ಅನೇಕ ನಾಯಕರು ಪಕ್ಷ ಕಟ್ಟಿದವರೆಲ್ಲ ಯಶಸ್ವಿಯಾಗಿರಲಿಲ್ಲ- ಸಂಸದ ಸಂಗಣ್ಣ ಕರಡಿ

MP Sanganna Karadi
ಜನಾರ್ಧನರೆಡ್ಡಿ ಹೊಸ ಪಕ್ಷ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ:ಸಂಸದ ಸಂಗಣ್ಣ ಕರಡಿ
ಸಂಸದ ಸಂಗಣ್ಣ ಕರಡಿ ಪ್ರತಿಕ್ರಿಯೆ

ಕೊಪ್ಪಳ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಘೋಷಿಸಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಯಶಸ್ವಿಯಾಗುತ್ತದೆ ಎಂದು ಈಗಲೇ ಹೇಳಲ್ಲು ಸಾಧ್ಯವಿಲ್ಲ, ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ವಿಚಾರದ ಕುರಿತು ಇಂದು ಮಾಧ್ಯಮದವರಿಗೆ ಪ್ರತ್ರಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಪಕ್ಷ ಸ್ಥಾಪಿಸಲು ಮುಕ್ತ ಅವಕಾಶ ಇದೆ, ಹೊಸ ಪಕ್ಷ ಸ್ಥಾಪನೆಯಿಂದ ಕಾರ್ಯಕರ್ತರಲ್ಲಿ ಗೊಂದಲವಾಗುವುದು ಉಂಟಾಗುತ್ತದೆಯೋ ಇಲ್ಲವೋ ಎಂಬುದನ್ನು ಮುಂದೆ ಕಾದು ನೋಡಬೇಕಾಗಿದೆ, ಹಿಂದೆ ಕರ್ನಾಟಕದಲ್ಲಿ ಬಂಗಾರಪ್ಪ, ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಪಕ್ಷ ಕಟ್ಟಿದ್ದರು. ಆದರೆ ಅವರೆಲ್ಲ ಯಶಸ್ವಿಯಾಗಲಿಲ್ಲ, ಹಾಗೇ ಜನಾರ್ದನ್​ ರೆಡ್ಡಿ ಕಟ್ಟಿರುವ ಪಕ್ಷ ಯಾವ ಸಿದ್ಧಾಂತ, ತತ್ವಗಳ ಸ್ಥಾಪನೆಯಾಗಿದೆ ಎಂಬುದರ ಮೇಲೆ ಅದರ ಯಶಸ್ಸು ನಿರ್ಧರಿಸಿದೆ ಎಂದರು.

ಸದ್ಯ ಅವರ ಹೊಸ ಪಕ್ಷದ ಸಿದ್ಧಾಂತ ಏನು ಎಂಬುದು ತಿಳಿಸಿಲ್ಲ. ಅವರು ಇಲ್ಲಿಯವರೆಗೂ ಕೊಪ್ಪಳದಲ್ಲಿ ನನ್ನನ್ನು ಸೇರಿದಂತೆ ಬೇರೆ ಯಾವ ಬಿಜೆಪಿ ನಾಯಕರನ್ನು, ಕಾರ್ಯಕರ್ತರನ್ನು ಸಂಪರ್ಕಿಸಿಲ್ಲ. ಜನಾರ್ದನ ರೆಡ್ಡಿ ಪಕ್ಷ ಸ್ಥಾಪನೆಯಿಂದ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿರುವ 8 ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು.

ಹೊಸ ಪಕ್ಷ ಸ್ಥಾಪಿಸಿರುವ ರೆಡ್ಡಿ: ಬಿಜೆಪಿ ಜೊತೆಗಿನ ಸಂಬಂಧಕ್ಕೆ ವಿದಾಯ ಹೇಳಿದ ಜನಾರ್ದನ ರೆಡ್ಡಿ, ಇದೀಗ ಹೊಸ ಪಕ್ಷ ಘೋಷಿಸಿದ್ದಾರೆ. ಗೋಲಿಯಾಟದಲ್ಲೇ ಸೋಲನ್ನು ಒಪ್ಪದ ನಾನು, ರಾಜಕೀಯದಲ್ಲಿ ಸೋಲೊಪ್ಪಲ್ಲ. ನನಗೆ ಜನರ ಆಶೀರ್ವಾದ ಸಿಗಲಿದೆ. ಕರ್ನಾಟಕ ಕಲ್ಯಾಣವಾಗಲಿದೆ. ಪ್ರಗತಿ ಕಾಣಲಿದೆ ಎಂದು ಈ ಸಂದರ್ಭದಲ್ಲಿ ರೆಡ್ಡಿ ಹೇಳಿದರು.

ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಭಾನುವಾರ ಬೆಳಗ್ಗೆ ಸುದ್ದಿಗೋಷ್ಟಿ ನಡೆಸಿದ ಜನಾರ್ದನ ರೆಡ್ಡಿ, 12 ವರ್ಷದ ನಂತರ ಬಳ್ಳಾರಿಗೆ ಬರಲು ಕೋರ್ಟ್ ಆದೇಶ ಕೊಟ್ಟರೂ ಮತ್ತೆ ನಮ್ಮನ್ನು ಬಳ್ಳಾರಿಯಿಂದ ಸಿಬಿಐ ಬಳಸಿ ಹೊರಹಾಕಿದ್ದಾರೆ. ಇಷ್ಟೆಲ್ಲಾ ಆದ ಮೇಲೆ ಹಿತೈಷಿಗಳು ನಾವೆಲ್ಲಾ ನಿಮ್ಮ ಜೊತೆ ಇರಲಿದ್ದೇವೆ. ನಿಮ್ಮ ಶಕ್ತಿಯಾಗಿ ಕೆಲಸ ಮಾಡುತ್ತೇವೆ. ನಿಮ್ಮ ಬೆನ್ನೆಲುಬಾಗಿ ಇರಲಿದ್ದೇವೆ. ಧರ್ಮ, ಸತ್ಯ , ಮಾನವೀಯ ಮೌಲ್ಯ ಸತ್ತುಹೋಗಿದೆ. ಈ ಕ್ಷಣದಲ್ಲಿಯೂ ಬಿಜೆಪಿಯಿಂದ ಹೊರಗೆ ಬಂದಿಲ್ಲ ಎಂದರೆ ಹೇಗೆ? 12 ವರ್ಷ ವನವಾಸ ಅನುಭವಿಸಿದ್ದೀರ. ನಿಮ್ಮ ಜೊತೆ ನಾವಿದ್ದು ಕೆಲಸ ಮಾಡುತ್ತೇವೆ ಎಂದು ಬಳ್ಳಾರಿಯ ಜನ ಹೇಳಿದಾಗ ನಾನು ಹೊಸ ಪಕ್ಷ ಆರಂಭಿಸುವ ನಿರ್ಧಾರ ಮಾಡಿದೆ ಎಂದು ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಬಿಜೆಪಿಗೆ ವಿದಾಯ ಹೇಳಿದ ಜನಾರ್ದನ ರೆಡ್ಡಿ: ಭಕ್ತಿ ಭಂಡಾರಿ ಬಸವಣ್ಣ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ರೀತಿ, ಇವನಾರವ ಇವನಾರವ ಇವ ನಮ್ಮವ ಇವ ನಮ್ಮವ ಕೂಡಲ ಸಂಗಮ ದೇವ ನಾನಿನ್ನ ಮನೆಯ ಮಗನೆನಿಸಯ್ಯ ಎನ್ನುವಂತೆ ಜಾತಿ ಮತ ಬೇಧ ಇಲ್ಲದಂತೆ ಲಿಂಗ ಬೇಧ, ಮೇಲು ಕೀಳು ಇಲ್ಲದಂತೆ ರಾಜ್ಯದ ಅಭಿವೃದ್ಧಿಗೆ ನಾನು ಕಂಡ ಕನಸು. ನಾನು ಏನು ಎಂದು ತೋರಿಸಲು, ಜನರು ಬೆಂಬಲ ಕೊಡುತ್ತಿರುವ ಈ ಸಂದರ್ಭದಲ್ಲಿ ವಾಜಪೇಯಿ ಸಿದ್ಧಾಂತ ನಂಬಿದ್ದ ನಾನು ಇವತ್ತಿಗೆ ಬಿಜೆಪಿ ಜೊತೆಗಿನ ಸಂಬಂಧ ಬಿಡುತ್ತಿದ್ದೇನೆ ಎಂದು ತಿಳಿಸಿದರು.

ಆ ಪಕ್ಷದ ಸದಸ್ಯ ಅಲ್ಲ ಎಂದರೂ ನಾನು ಆ ಪಕ್ಷದವನೇ ಎಂದು ಜನ ಅಂದುಕೊಂಡಿದ್ದರು. ಅದಕ್ಕೆ ಇಂದು ತೆರೆ ಎಳೆಯುತ್ತಿದ್ದೇನೆ. ಇನ್ನು ಮುಂದೆ ಬಿಜೆಪಿ ಜೊತೆಗೆ ಸಂಬಂಧ ಇಲ್ಲ. ನಾನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹೆಸರಿನಲ್ಲಿ ಪಕ್ಷ ಆರಂಭಿಸುತ್ತೇನೆ. ನನ್ನದೇ ಆದ ಯೋಚನೆಗಳೊಂದಿಗೆ ಹೊಸ ಪಕ್ಷ ಕಟ್ಟುತ್ತೇನೆ. ಇಡೀ ಕರ್ನಾಟಕ ರಾಜ್ಯದಲ್ಲಿ ಸಂಘರ್ಷದ ವಾತಾವರಣ ಸೃಷ್ಟಿಸಿ ರಾಜಕೀಯ ಲಾಭಕ್ಕೆ ಯತ್ನಿಸುತ್ತಿರುವ ವೇಳೆ ಅದಕ್ಕೆ ಅವಕಾಶವಿಲ್ಲ ಎನ್ನುವ ಸಂದೇಶ ನೀಡುತ್ತ ಹೊಸ ಪಕ್ಷ ಘೋಷಣೆ ಮಾಡಿದರು. ಪ್ರತಿ ಹಳ್ಳಿ ಮನೆ ಮನೆಗೂ ಬರುತ್ತೇನೆ ಎಂದು ಇದೇ ವೇಳೆ ಹೇಳಿದರು.

ಇದನ್ನೂ ಓದಿ:ಗಂಗಾವತಿ: ಅಕ್ರಮ‌ ಮೊರಂ ಗಣಿಗಾರಿಕೆ; ಮಧ್ಯರಾತ್ರಿ ದಾಳಿ, ಜೆಸಿಬಿ ವಾಹನ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.