ಗಂಗಾವತಿ: ತಾಲೂಕಿನ ಚಿಕ್ಕರಾಂಪೂರದ ಬಳಿಯ ಅಂಜನಾದ್ರಿ ದೇಗುಲದಲ್ಲಿನ ಕಾಣಿಕೆ ಹುಂಡಿ ಹಣವನ್ನು ತಹಶೀಲ್ದಾರ್ ಯು.ನಾಗರಾಜ್ ಅವರ ನೇತೃತ್ವದಲ್ಲಿ ಎಣಿಕೆ ಮಾಡಲಾಗಿದ್ದು, 30 ದಿನದಲ್ಲಿ 11,99,470 ರೂಪಾಯಿ ಸಂಗ್ರಹವಾಗಿದೆ. ಇದೇ ಸಂದರ್ಭದಲ್ಲಿ ಇಥಿಯೋಪಿಯ ದೇಶದ ಹತ್ತು ರೂಪಾಯಿ ಮುಖ ಬೆಲೆಯ ಎರಡು ಮತ್ತು ಐದು ರೂಪಾಯಿ ಮುಖಬೆಲೆಯ ಒಂದು ನೋಟು ಪತ್ತೆಯಾಗಿದೆ. ಪ್ರತಿ ತಿಂಗಳು ಕಾಣಿಕೆ ಪೆಟ್ಟಿಗೆಯಲ್ಲಿ ಸರಾಸರಿ ಎಂಟರಿಂದ ಹತ್ತು ಲಕ್ಷ ರೂಪಾಯಿ ನಗದು ಹಣವನ್ನು ಭಕ್ತರು ಹರಕೆ ರೂಪದಲ್ಲಿ ಒಪ್ಪಿಸುತ್ತಿದ್ದಾರೆ.
ಇದೇ ತಿಂಗಳಲ್ಲಿ ನಡೆದ ಹನುಮ ಜಯಂತಿ ಅಂಗವಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಕಾಣಿಕೆ ಪೆಟ್ಟಿಗೆಯಲ್ಲಿ ಸಂಗ್ರಹವಾದ ಹಣದಲ್ಲಿ ಸುಮಾರು ಎರಡರಿಂದ ಮೂರು ಲಕ್ಷ ರೂಪಾಯಿ ಆದಾಯ ಏರಿಕೆ ಕಂಡಿದೆ.
ಇದನ್ನೂ ಓದಿ: ಹಾವೇರಿಯಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ; ನಾಲ್ವರು ಸಾವು