ಕೊಪ್ಪಳ: ಜಿಲ್ಲೆಯಲ್ಲಿ ಸಹ ಐಟಿ ಅಧಿಕಾರಿಗಳ ದಾಳಿ ಜೋರಾಗಿದ್ದು, ಗುತ್ತಿಗೆದಾರ ಎಂ ಶ್ರೀನಿವಾಸ ಎಂಬುವವನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿರುವ ಮೂಲತಃ ಗುತ್ತಿಗೆದಾರರಾಗಿರುವ ಎಂ. ಶ್ರೀನಿವಾಸ್ ಅವರ ಗಂಗಾವತಿ ತಾಲೂಕಿನ ಕೋಟಯ್ಯಕ್ಯಾಂಪ್ನಲ್ಲಿರುವ ಮನೆ ಮೇಲೆ ಹುಬ್ಬಳ್ಳಿಯಿಂದ ಬಂದಿರುವ 6 ಜನ ಐಟಿ ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದೆ.
ಖಾಲಿ ಬಿಟ್ಟಿರುವ ಮನೆಯ ಉಸ್ತುವಾರಿಯನ್ನು ಶ್ರೀನಿವಾಸ್ ಅವರ ಮಾವ ನೋಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳ ದಾಳಿ ವೇಳೆ ಹಲವು ದಾಖಲೆಗಳು ದೊರಕಿವೆ ಎಂದು ತಿಳಿದು ಬಂದಿದೆ. ಐಟಿ ಅಧಿಕಾರಿಗಳು ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ.
ಇದನ್ನೂ ಓದಿ:ಐಟಿ ದಾಳಿ ಬಗ್ಗೆ ಯಡಿಯೂರಪ್ಪ ಅವರನ್ನೇ ಕೇಳಿ.. ಈ ಬಾರಿ ಬೈ ಎಲೆಕ್ಷನ್ನಲ್ಲಿ ನಾವೇ ಗೆಲ್ಲೋದು: ಸಿದ್ದರಾಮಯ್ಯ