ETV Bharat / state

ಬಿಜೆಪಿ ಸೇಡಿನ ರಾಜಕೀಯ ಮಾಡುತ್ತಿದೆ: ಮಾಜಿ ಸಂಸದ ಉಗ್ರಪ್ಪ ಆರೋಪ - ಡಿ.ಕೆ.ಶಿವಕುಮಾರ್

ಕಾಂಗ್ರೆಸ್​ ನಾಯಕರನ್ನು ಗುರಿಯಾಗಿಸಿಕೊಂಡು ಐಟಿ, ಇಡಿ ಮೂಲಕ ದಾಳಿ ನಡೆಸುತ್ತಿದೆ. ಡಿ.ಕೆ.ಶಿವಕುಮಾರ್ ಯಾವುದೇ ಆರ್ಥಿಕ ಅಪರಾಧ ಎಸಗಿಲ್ಲ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ
author img

By

Published : Aug 31, 2019, 3:33 PM IST

ಕೊಪ್ಪಳ: ಕಾಂಗ್ರೆಸ್​ ನಾಯಕರನ್ನು ಗುರಿಯಾಗಿಸಿಕೊಂಡು ಸಿಬಿಐ, ಐಟಿ ಹಾಗೂ ಇಡಿ ಮೂಲಕ ಕೇಸ್ ದಾಖಲಿಸುತ್ತಿದೆ. ಇದು ಬಿಜೆಪಿಯ ದ್ವೇಷದ ರಾಜಕಾರಣ. ಹೀಗಾಗಿ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್​ನ ಅನೇಕ ನಾಯಕರ ಮೇಲೆ ದಾಳಿ ಮಾಡಿಸುತ್ತಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ

ತಾಲೂಕಿನ ಮುನಿರಾಬಾದ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಯಾವುದೇ ಆರ್ಥಿಕ ಅಪರಾಧ ಮಾಡಿಲ್ಲ. ಸಿಕ್ಕಿರುವ ಹಣ ಅದು ಅಕೌಂಟೇಬಲ್. ಗ್ರಾಮೀಣ ಪ್ರದೇಶದಿಂದ ಬಂದಿರುವ ಡಿಕೆಶಿ ಮೊದಲಿನಿಂದಲೂ ಆಸ್ತಿವಂತರು.‌ ಅವರು ಕಾಂಗ್ರೆಸ್ ಪಕ್ಷದ ನಿಷ್ಠರು ಎನ್ನುವ ಕಾರಣಕ್ಕೆ ಬಿಜೆಪಿ ಸಮಸ್ಯೆ ನೀಡುತ್ತಿದೆ ಎಂದರು.

ಸೋನಿಯಾಗಾಂಧಿ ಕುಟುಂಬ, ಪಿ. ಚಿದಂಬರಂ ಹಾಗೂ ಡಿ.ಕೆ. ಶಿವಕುಮಾರ್ ಮೇಲೆ ಐಟಿ ಹಾಗೂ ಇಡಿ ಬಳಸಿಕೊಂಡು ಕೇಸ್ ದಾಖಲಿಸುತ್ತಿದೆ. ಆದರೆ, ಯಡಿಯೂರಪ್ಪ, ಅಮಿತ್ ಶಾ ಸೇರಿ ಬಿಜೆಪಿ ನಾಯಕರ ಮೇಲೆ ಇದ್ದ ಕೇಸ್ ಗಳನ್ನು ಒಂದೊಂದಾಗಿ ಮುಚ್ಚಿ ಹಾಕಲಾಗುತ್ತಿದೆ ಎಂದು ದೂರಿದರು.

ಡಿಕೆಶಿ ವಿರುದ್ಧ ಐಟಿಗೆ ಯಾರೂ ದೂರು ನೀಡಿಲ್ಲ. ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಆದರೆ, ಶಾಸಕರ ಖರೀದಿ ವಿಚಾರವಾಗಿ ತಮ್ಮದೇ ಧ್ವನಿ ಎಂದು ಸ್ವತಃ ಯಡಿಯೂರಪ್ಪ ಒಪ್ಪಿಕೊಂಡರೂ ಮತ್ತು ಕೋಲಾರ ಶಾಸಕ ಶ್ರೀನಿವಾಸಗೌಡ ಅವರಿಗೆ ₹ 5 ಕೋಟಿಯನ್ನು ಈಗಿನ ಡಿಸಿಎಂ ಡಾ.ಅಶ್ವತ್ಥನಾರಾಯಣ ಅವರು ಕೊಟ್ಟು ಹೋಗಿರುವ ವಿಷಯ ಸದನದಲ್ಲಿ ಪ್ರಸ್ತಾಪವಾಗಿ ಕಡತದಲ್ಲಿ ದಾಖಲಾಗಿದೆ. ಆದರೆ, ಬಿಜೆಪಿ ವಿರುದ್ಧ ಸಿಬಿಐ, ಐಟಿ ಹಾಗೂ ಇಡಿ ಏಕೆ ಕೇಸ್ ದಾಖಲಿಸಿಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು‌.

Intro:

Body:ಕೊಪ್ಪಳ:- ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಹೀಗಾಗಿ, ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನ ಅನೇಕ ನಾಕಯರನ್ನು ಗುರಿಯಾಗಿಸಿಕೊಂಡು ಸಿಬಿಐ, ಐಟಿ ಹಾಗೂ ಇಡಿ ಮೂಲಕ ಕೇಸ್ ದಾಖಲಿಸುತ್ತಿದೆ ಎಂದು ಮಾಜಿ ಸಂಸದ ಹಾಗೂ ಕೆಪಿಸಿಸಿ ವಕ್ತಾರ ವಿ.ಎಸ್. ಉಗ್ರಪ್ಪ ಆರೋಪಿಸಿದ್ದಾರೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಡಿ.ಕೆ.‌ ಶಿವಕುಮಾರ್ ಅವರು ಯಾವುದೇ ಆರ್ಥಿಕ ಅಪರಾಧ ಮಾಡಿಲ್ಲ. ಸಿಕ್ಕಿರುವ ಹಣ ಅದು ಅಕೌಂಟೇಬಲ್. ಗ್ರಾಮೀಣ ಪ್ರದೇಶದಿಂದ ಬಂದಿರುವ ಡಿಕೆಶಿ ಮೊದಲಿನಿಂದಲೂ ಆಸ್ತಿವಂತರು.‌ ಅವರು ಕಾಂಗ್ರೆಸ್ ಪಕ್ಷ ನಿಷ್ಠರು ಎನ್ನುವ ಕಾರಣಕ್ಕೆ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಸೋನಿಯಾಗಾಂಧಿ ಕುಟುಂಬ, ಪಿ. ಚಿದಂಬರಂ ಹಾಗೂ ಡಿ.ಕೆ. ಶಿವಕುಮಾರ್ ಮೇಲೆ ಐಟಿ ಹಾಗೂ ಇಡಿ ಬಳಸಿಕೊಂಡು ಕೇಸ್ ದಾಖಲಿಸುತ್ತಿದೆ. ಆದರೆ, ಯಡಿಯೂರಪ್ಪ, ಅಮಿತ್ ಶಾ ಸೇರಿ ಬಿಜೆಪಿ ನಾಯಕರ ಮೇಲೆ ಇದ್ದ ಕೇಸ್ ಗಳನ್ನು ಒಂದೊಂದಾಗಿ ಕ್ಲೋಸ್ ಮಾಡುತ್ತಿದ್ದಾರೆ ಎಂದು ದೂರಿದರು. ಡಿಕೆಶಿ ವಿರುದ್ಧ ಐಟಿಗೆ ಯಾರೂ ದೂರು ನೀಡಿಲ್ಲ. ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಆದರೆ, ಶಾಸಕರ ಖರೀದಿ ವಿಚಾರವಾಗಿ ತಮ್ಮದೇ ಧ್ವನಿ ಎಂದು ಸ್ವತಃ ಯಡಿಯೂರಪ್ಪ ಒಪ್ಪಿಕೊಂಡರೂ ಮತ್ತು ಕೋಲಾರ ಶಾಸಕ ಶ್ರೀನಿವಾಸಗೌಡ ಅವರಿಗೆ ಐದು ಕೋಟಿ ರುಪಾಯಿಯನ್ನು ಈಗಿನ ಡಿಸಿಎಂ ಡಾ. ಅಶ್ವತ್ಥನಾರಾಯಣ ಅವರು ಇಟ್ಟುಹೋಗಿರುವ ವಿಷಯ ಸದನದಲ್ಲಿ ಪ್ರಸ್ತಾಪವಾಗಿ ಕಡತದಲ್ಲಿ ದಾಖಲಾಗಿದೆ. ಆದರೆ, ಬಿಜೆಪಿ ವಿರುದ್ಧ ಸಿಬಿಐ, ಐಟಿ ಹಾಗೂ ಇಡಿ ಏಕೆ ಕೇಸ್ ದಾಖಲಿಸಿಕೊಳ್ಳಲಿಲ್ಲ ಎಂದು ಉಗ್ರಪ್ಪ ಪ್ರಶ್ನಿಸಿದರು‌. ಡಿಕೆ ಶಿವಕುಮಾರ್ ಅವರು ಯಾವುದೇ ಆರ್ಥಿಕ ಅಪರಾಧ ಮಾಡಿಲ್ಲ. ಅವರು ಆರೋಪ ಮುಕ್ತರಾಗುತ್ತಾರೆ. ಅವರು ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಜೊತೆ ಕಾಂಗ್ರೆಸ್‌ ಪಕ್ಷ ಇರುತ್ತದೆ ಎಂದು ಹೇಳಿದರು.

ಬೈಟ್1:-ವಿ.ಎಸ್. ಉಗ್ರಪ್ಪ, ಕೆಪಿಸಿಸಿ ವಕ್ತಾರ ಹಾಗೂ ಮಾಜಿ ಸಂಸದ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.