ಕುಷ್ಟಗಿ (ಕೊಪ್ಪಳ): ಸೂರ್ಯಕಾಂತಿ ಹಾಗೂ ತೊಗರಿ ಹೊಲದ ಮಧ್ಯೆ ಕಡಲೆ ಬಿತ್ತನೆ ಮಾಡಿದರೆ ಕೀಟ ಬಾಧೆ ತಪ್ಪಿದ್ದಲ್ಲ ಎಂದು ಕೃಷಿ ವಿಸ್ತರಣಾ ಕೇಂದ್ರ ವಿಜ್ಞಾನಿ ಡಾ. ಎಂ.ಬಿ. ಪಾಟೀಲ ತಿಳಿಸಿದರು.
ಕಡಲೆ ಬೆಳೆಗೆ ಹಸಿರು ಕೀಟದ ಕಾಟದ ಕುರಿತು ನ.2ರಂದು ಈಟಿವಿ ಭಾರತದಲ್ಲಿ ಸುದ್ದಿ ಪ್ರಸಾರವಾಗಿತ್ತು. ಇದರಿಂದ ಎಚ್ಚೆತ್ತ ವಿಜ್ಞಾನಿಗಳು ರೈತನ ಜಮೀನಿಗೆ ಭೇಟಿ ನೀಡಿ ನಿಯಂತ್ರಣ ಕ್ರಮದ ಬಗ್ಗೆ ಚರ್ಚಿಸಿದರು.
ಇದನ್ನು ಓದಿ-ಕಡಲೆ ಬೆಳೆಗೆ ಹಸಿರು ಕೀಟದ ಕಾಟ: ಕ್ರಿಮಿನಾಶಕ ದಾಸ್ತಾನಿಲ್ಲದೇ ಅನ್ನದಾತ ಕಂಗಾಲು
ಹಿಂಗಾರು ಹಂಗಾಮಿನ ಕಡಲೆ ಬೆಳೆಗೆ ಹಸಿರು ಕೀಟ ಬಾಧೆ ಹಿನ್ನೆಲೆಯಲ್ಲಿ ಕುಷ್ಟಗಿ ಸೀಮಾದ ಸಂಗಪ್ಪ ಬಲ್ಲೋಡಿ ಅವರ ಹೊಲಕ್ಕೆ ಭೇಟಿ ನೀಡಿ, ಪರಿಶೀಲಿಸಿ ಪರಿಹಾರ ಕ್ರಮದ ಸಲಹೆ ನೀಡಿದರು. ತೊಗರಿ ಹಾಗೂ ಸೂರ್ಯಕಾಂತಿಯಲ್ಲಿನ ಕೀಟಗಳು ಅಲ್ಲಿನ ಬೆಳೆ ಹಾಳು ಮಾಡಿ, ಕಡಲೆ ಬೆಳೆಯತ್ತ ವಲಸೆ ಬರುತ್ತಿದ್ದು, ಇದನ್ನು ತಡೆಯುವುದು ರೈತರಿಗೆ ಅಗತ್ಯ ಕ್ರಮವಾಗಿರುತ್ತದೆ.
ಕಡಲೆಗೆ ಕ್ರಿಮಿನಾಶಕ ಸಿಂಪಡಿಸಿದರೆ ಸಾಲದು, ಕೀಟ ಸಮೂಹ ಕಡಲೆಯತ್ತ ಬರದಂತೆ ನಿಗಾವಹಿಸಬೇಕಿದೆ. ಈ ಬೆಳೆ ಸುತ್ತಲು ಜೋಳ, ಸಜ್ಜೆ ಹಿಂಗಾರಿಗೆ ಸರಿ ಹೊಂದುವ ಏಕಧಾನ್ಯ ಬದುವಿಗೆ ಬೆಳೆಯಬೇಕು. ಕೀಟ ಹತೋಟಿಗೆ ರೈತರು ಜೈವಿಕ ನಿಯಂತ್ರಣದ ಹಿನ್ನೆಲೆಯಲ್ಲಿ ಲಿಂಗಾಕರ್ಷಕ ಬೆಳೆ, ಎನ್.ಪಿ.ವಿ ವೈರಾಣುಗಳಿಂದ ಕೀಟ ನಿಯಂತ್ರಿಸಿ ಕಡಲೆ ಬೆಳೆ ರಕ್ಷಿಸಿಸಿಕೊಳ್ಳಲು ಸಾದ್ಯವಿದೆ.
ಕಡಲೆ ಮೂರು ಹಂತದ ಕೀಟ ಬಾಧೆಗೆ ಒಳಗಾಗುತ್ತಿದ್ದು, 20 ದಿನಕ್ಕೆ, 40 ದಿನಕ್ಕೆ, ಕಾಯಿ ಕಟ್ಟಿದ ನಂತರ ಕೀಟ ಬಾಧೆ ಕಾಡಲಿದೆ. ಇದಕ್ಕೆ ರಾಸಾಯನಿಕ ಕೀಟನಾಶಕ ಪ್ರಯೋಗಿಸದೇ ಹಂತ ಹಂತವಾಗಿ ಜೈವಿಕ ಕ್ರಮ ಅನುಸರಿಸುವಂತೆ ಸಲಹೆ ನೀಡಿದರು.