ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನ ನಾಲ್ವರು ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದಾರೆ. ಇವರಲ್ಲಿ ಮೂವರು ಈಗಾಗಲೇ ಪೊಲೀಸ್ ಇಲಾಖೆಯಲ್ಲಿದ್ದು, ಓರ್ವರು ಮಾಜಿ ಸೈನಿಕರಾಗಿದ್ದಾರೆ.
ಮೂವರು ಮೊದಲೇ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇದೀಗ ಪಿಎಸ್ಐ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಮಾಜಿ ಯೋಧರೊಬ್ಬರು ಈಗ ಪೊಲೀಸ್ ಇಲಾಖೆಯಲ್ಲಿ ಪಿಎಸ್ಐ ಆಗಿದ್ದಾರೆ.
ಮಾಜಿ ಯೋಧ ಪಿಎಸ್ಐ: ಕುಷ್ಟಗಿ ತಾಲೂಕಿನ ಕಲ್ಲಗೋನಾಳ ಗ್ರಾಮದ ಬಸವರಾಜ ಶಂಕ್ರಪ್ಪ ಪಾಟೀಲ್ ಅವರು ಅಕ್ಟೋಬರ್17, 1998ರಲ್ಲಿ ಮರಾಠ ಲೈಟ್ ಇನ್ಫೆಂಟ್ರಿ ರೆಜಿಮೆಂಟ್ ಸೆಂಟರ್ನಲ್ಲಿ ಸಿಪಾಯಿ ಹುದ್ದೆಗೆ ಆಯ್ಕೆಯಾಗಿದ್ದರು.
21 ವರ್ಷ ಸೇವೆ ಸಲ್ಲಿಸಿ, ಬಳಿಕ ಜುಲೈ31, 2019ರಲ್ಲಿ ನಿವೃತ್ತರಾದರು. ಇದೀಗ ಯಾವುದೇ ಕೋಚಿಂಗ್ ಇಲ್ಲದೇ, ನಿರಂತರ ಅಧ್ಯಯನದಿಂದ ಪಿಎಸ್ಐ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಸ್ತಾವ.. ಸಚಿವ ವಿ.ಸೋಮಣ್ಣ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು..
ಅಣ್ಣ- ತಮ್ಮ ಇಬ್ಬರೂ ಪಿಎಸ್ಐ: ತಾಲೂಕಿನ ಹಿರೇನಂದಿಹಾಳ ಗ್ರಾಮದ ರೈತಾಪಿ ಕುಟುಂಬದ ಸಕ್ರಗೌಡ ವೀರಾಪೂರ ಮತ್ತು ಲಕ್ಷ್ಮವ್ವ ದಂಪತಿ ಪುತ್ರರಾದ ಸಿದ್ದಣ್ಣ ವೀರಾಪೂರ ಹಾಗೂ ವೀರೇಶಿ ವೀರಾಪೂರ ಅವರು ಪಿಎಸ್ಐ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ.
ಸಿದ್ದಣ್ಣ ಕೆಎಸ್ಆರ್ಪಿಯಲ್ಲಿ 8 ವರ್ಷ ಸೇವೆ ಸಲ್ಲಿಸಿದ್ದು, ಸಿವಿಲ್ ಪೊಲೀಸರಾಗಿ ವೀರೇಶ್ 5 ವರ್ಷ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ತಿಂಗಳ ರಜೆ ತೆಗೆದುಕೊಂಡು ಓದಿ, ಇಬ್ಬರು ಸಹೋದರರು ಈ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮದ ದುರಗಪ್ಪ ಹಿರೇಬಂಡಿಹಾಳ ಅವರು, ಪ್ರಾಥಮಿಕ ಶಿಕ್ಷಣವನ್ನು ನೆರೆಬೆಂಚಿಯಲ್ಲಿ ಮುಗಿಸಿದ್ದಾರೆ. ಹೈಸ್ಕೂಲ್ ಶಿಕ್ಷಣವನ್ನು ಹಿರೇಅರಳಹಳ್ಳಿಯಲ್ಲಿ ಮುಗಿಸಿ, ಸದ್ಯ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕೆಎಎಸ್, ಪಿಎಸ್ಐ, ಎಫ್ಡಿಎ, ಶಿಕ್ಷಕ ಹುದ್ದೆಯ ನಿರೀಕ್ಷೆಯಲ್ಲಿದ್ದಾಗ ಪಿಎಸ್ಐ ಹುದ್ದೆ ಲಭಿಸಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ