ಕೊಪ್ಪಳ: ಗಂಗಾವತಿ ತಾಲ್ಲೂಕಿನ ಹೆಬ್ಬಾಳದಿಂದ ಅಕ್ರಮ ಮರಳು ಸಾಗಿಸುತ್ತಿದ್ದ ವಾಹನವನ್ನ ಗಣಿ,ಭೂ ವಿಜ್ಞಾನ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅಧಿಕಾರಿಗಳು ದಾಳಿ ಮಾಡುತ್ತಿದ್ದಂತೆಯೇ ಚಾಲಕ ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾನೆ. ವಾಹನದ ಇಂಜಿನ್ ಮತ್ತು ಟ್ರಾಲಿಗೆ ಯಾವುದೇ ನಂಬರ್ ಇಲ್ಲದೇ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲಾಗುತ್ತಿತ್ತು.
ಸದ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಿರಿಯ ಇಂಜಿನಿಯರ್ ಸೈಯದ್ ಫಜೀಲ್ ಮತ್ತು ಕಂದಾಯ ಇಲಾಖೆಯ ಮರಳಿ ನಿರೀಕ್ಷಕ ಹನುಮಂತಪ್ಪ ಬೇರೆ ಚಾಲಕನ ಸಹಾಯದಿಂದ ಟ್ರಾಕ್ಟರ್ನ್ನ ಠಾಣೆಗೆ ಒಪ್ಪಿಸಿದ್ದಾರೆ.