ETV Bharat / state

ನಾನು ವಿಧಾಸಭಾ ಚುನಾವಣೆಯಲ್ಲಿ ಸ್ಪರ್ಧಿಸುವೆ: ಜಗದೀಶ ಶೆಟ್ಟರ್

author img

By

Published : Feb 26, 2023, 6:06 PM IST

ಗುಜರಾತ್ ಮಾದರಿಯಲ್ಲಿ ಹಿರಿಯರಿಗೆ ಟಿಕೆಟ್ ಇಲ್ಲ ಎಂಬುವುದು ಮಾಧ್ಯಮಗಳಲ್ಲಿನ ಚರ್ಚೆ - ಕಾಂಗ್ರೆಸ್ಸಿನವರಿಗೆ ರಾಜ್ಯ ಸರ್ಕಾರದ ಬಗ್ಗೆ ಟೀಕಿಸಲು ವಿಷಯವಿಲ್ಲ -

i-will-contest-assembly-elections-jagdeesha-shettar
ನಾನು ವಿಧಾಸಭಾ ಚುನಾವಣೆಯಲ್ಲಿ ಸ್ಪರ್ಧಿಸುವೆ: ಜಗದೀಶ ಶೆಟ್ಟರ್

ಕೊಪ್ಪಳ: ನಾನು ಈ ಬಾರಿಯೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಪ್ರತಿಕ್ರಿಯೆ ನೀಡಿ ವಯಸ್ಸಿನ ಆಧಾರದಲ್ಲಿ ಕೆಲವರಿಗೆ ಟಿಕೆಟ್​ ತಪ್ಪುವ ಪಟ್ಟಿಯಲ್ಲಿ ಶೆಟ್ಟರ್ ಇದ್ದಾರೆ ಎಂಬ ಚರ್ಚೆಗೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ತೆರೆ ಎಳೆದಿದ್ದಾರೆ.

ಕೊಪ್ಪಳ ಜಿಲ್ಲೆಯ ಯಲಬುರ್ಗದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೋದಿ ಈ ದೇಶದ ನಾಯಕರು ಮತ್ತು ವಿಶ್ವದ ನಾಯಕರು. ಕಳೆದ ಎಂಟು ವರ್ಷದಿಂದ ಈ ದೇಶವನ್ನು ಮುನ್ನೆಡೆಸಿ ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಿದ್ದಾರೆ. ನಾಳೆ ಬೆಳಗಾವಿ ಮತ್ತು ಶಿವಮೊಗ್ಗಕ್ಕೆ ಆಗಮಿಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಹೊಸ ವಿಮಾನ ನಿಲ್ದಾಣ ಉದ್ಘಾಟನೆ ಹಾಗೂ ಬೆಳಗಾವಿಯಲ್ಲಿ ನವೀಕೃತ ರೈಲ್ವೆ ನಿಲ್ದಾಣದ ಉದ್ಘಾಟನೆಗೆ ಆಗಮಿಸುತ್ತಿದ್ದಾರೆ ಎಂದು ತಿಳಿಸಿದರು.

ಇಂದಿರಾ ಗಾಂಧಿಯವರು ಚುನಾವಣೆ ಪ್ರಚಾರಕ್ಕೆ ಬಂದಿಲ್ಲವೇ? : ಕಾಂಗ್ರೆಸ್ಸಿನವರಿಗೆ ರಾಜ್ಯ ಸರ್ಕಾರದ ಬಗ್ಗೆ ಟೀಕಿಸಲು ವಿಷಯವಿಲ್ಲ. ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್​ ಶಾ ಬಗ್ಗೆ ಇಲ್ಲ ಸಲ್ಲದ ಟೀಕೆಯನ್ನು ಮಾಡುತ್ತಿದ್ದಾರೆ. ಹಿಂದೆ ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಚುನಾವಣಾ ಪ್ರಚಾರಕ್ಕೆ ಬಂದಿರಲಿಲ್ಲವೇ? ಎಂದು ಶೆಟ್ಟರ್ ಪ್ರಶ್ನಿಸಿದರು.

ರಾಜ್ಯದಲ್ಲಿಯೂ ಬಿಜೆಪಿ ನಾಯಕರು ಸಮರ್ಥರಿದ್ದಾರೆ. ಗುಜರಾತ್ ಮಾದರಿಯಲ್ಲಿ ಹಿರಿಯರಿಗೆ ಟಿಕೆಟ್ ಇಲ್ಲ ಎಂಬುದು ಮಾಧ್ಯಮಗಳಲ್ಲಿನ ಚರ್ಚೆ ಮಾತ್ರ. ಪಕ್ಷದಲ್ಲಿ ಆ ರೀತಿಯ ಚರ್ಚೆಯಾಗಿಲ್ಲ. ಕಾಂಗ್ರೆಸ್​ನವರು ರಾಜ್ಯದ ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಅವರಿಗೆ ಮತ ಕೇಳಲು ಮುಖವಿಲ್ಲ. ಅವರಲ್ಲಿ ನಾಯಕತ್ವ ಗುಣಗಳಿಲ್ಲ ಎಂದು ಟೀಕಿಸಿದರು.

ಸಿದ್ದರಾಮಯ್ಯ 986 ಎಕರೆ ಭೂಮಿ ಡಿನೋಟಿಫೈ ಮಾಡಿದ್ದರು: ಅರ್ಕಾವತಿ ಬಡಾವಣೆ ಡಿನೋಟಿಫೈನಲ್ಲಿ ಸಿದ್ದರಾಮಯ್ಯನವರಿಗೆ ಕ್ಲೀನ್ ಚಿಟ್ ನೀಡಿಲ್ಲ. ಕ್ಲೀನ್ ಚಿಟ್ ನೀಡಿದ್ದರೆ ಅಂದೆ ಸದನದಲ್ಲಿ ಮಂಡಿಸುತ್ತಿದ್ದರು. ಸಿದ್ದರಾಮಯ್ಯ 986 ಎಕರೆ ಭೂಮಿ ಡಿನೋಟಿಫೈ ಮಾಡಿದ್ದನ್ನು ನಾನು ಅಂದು ಪ್ರತಿಪಕ್ಷ ನಾಯಕನಾಗಿ ಸದನದ ಗಮನ ಸೆಳೆದಿದ್ದೆ ಎಂದು ಜಗದೀಶ್​ ಶೆಟ್ಟರ್​ ಹೇಳಿದರು.

ಕಾಯಕಯೋಗಿಗಳಿಂದ ಪ್ರಧಾನಿ ಮೋದಿಗೆ ಸ್ವಾಗತ: ನಾಳೆ ಕುಂದಾನಗರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲು ಮಧ್ಯಾಹ್ನ ಎರಡು ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದು, ಇವರ ಸ್ವಾಗತಕ್ಕೆ ಐದು ಜನ ಕಾಯಕಯೊಗಿಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲಿದ್ದಾರೆ. ಐದು ಜನ ಕಾರ್ಮಿಕರನ್ನು ಆಯ್ಕೆ ಮಾಡಲಾಗಿದ್ದು, ಕಾರ್ಮಿಕ, ರೈತ ಮಹಿಳೆ, ನೇಕಾರ, ಪೌರ ಕಾರ್ಮಿಕ ಮಹಿಳೆ, ಆಟೋ ಚಾಲಕರಿಗೆ ಅವಕಾಶ ನೀಡಲಾಗಿದೆ.

2 ಲಕ್ಷ ಜನರಿಗೆ ಆಸನ ವ್ಯವಸ್ಥೆ: ಬೆಳಗಾವಿ ನಗರದ ಮಾಲಿನಿ ಸಿಟಿಯಲ್ಲಿ ಬೃಹತ್​ ಪೆಂಡಾಲ್​ ನಿರ್ಮಾಣ ಮಾಡಲಾಗಿದೆ. 2 ಲಕ್ಷ ಜನರಿಗೆ ಆಸನದ ವ್ಯವಸ್ಥೆ ಜೊತೆಗೆ ಮೂರು ಕಡೆ ಪಾರ್ಕಿಂಗ್​ ವ್ಯವಸ್ಥೆಯನ್ನು ಮಾಡಲಾಗಿದೆ. ವಾಹನ ನಿಲುಗಡೆ ಸ್ಥಳದಲ್ಲೇ ಆಗಮಿಸುವ ಜನರಿಗೆ ಊಟದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಕಾರ್ಯಕ್ರಮಕ್ಕೆ ವಿವಿಧ ಕಡೆಗಳಿಂದ ಫಲಾನುಭವಿಗಳು, ಬಿಜೆಪಿ ಕಾರ್ಯಕರ್ತರು ಆಗಮಿಸಲು ಸುಮಾರು 1500 ಬಸ್​ ವ್ಯವಸ್ಥೆಯನ್ನು ಮಾಡಲಾಗಿದೆ.

ಇದನ್ನೂ ಓದಿ: ನಾಳೆ ಶಿವಮೊಗ್ಗ ವಿಮಾನ ನಿಲ್ದಾಣ ಲೋಕಾರ್ಪಣೆ: ನಗರದೆಲ್ಲೆಡೆ ರಾರಾಜಿಸುತ್ತಿರುವ ಕಮಲದ ಫ್ಲೆಕ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.