ಗಂಗಾವತಿ : ಕೋವಿಡ್ ಕರ್ಫ್ಯೂ ನಡುವೆ ಆಹಾರಕ್ಕಾಗಿ ಪರದಾಡುವ ಬಡ, ನಿರ್ಗತಿಕರಿಗೆ ಪ್ರತಿನಿತ್ಯ ಊಟ ವಿತರಿಸುವ ಮೂಲಕ ನಗರದ ವ್ಯಕ್ತಿಯೊಬ್ಬ ಮಾನವೀಯ ಕಾರ್ಯ ಮಾಡುತ್ತಿದ್ದಾರೆ.
ನಗರದ ಸ್ನೇಹಜೀವಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಸ್ಥಾಪಕ ವಿಜಯ ಕುಮಾರ ಗದ್ದಿ`ಕೈ ತುತ್ತು' ಎಂಬ ಹೆಸರಿನಡಿ ಪ್ರತಿನಿತ್ಯ ಬಡ ಜನರಿಗೆ ಅನ್ನದ ಪ್ಯಾಕೇಟ್ ವಿತರಿಸಿ ಅವರ ಹಸಿವು ನೀಗಿಸುವ ಮೂಲಕ ಮಾನವೀಯತೆ ತೋರುತ್ತಿದ್ದಾರೆ.
ಓದಿ : ಪೊಲೀಸರು ಸೇರಿ 600 ಮಂದಿಗೆ ಅನ್ನದಾನ ಮಾಡಿದ ಬಂಟ್ವಾಳದ ಯುವಕರ ಬಳಗ
ವೃತ್ತಿಯಲ್ಲಿ ಡ್ರೈವಿಂಗ್ ಶಾಲೆ ನಡೆಸುವ ಹಾಗೂ ಆಸಕ್ತಿ ಇರುವವರಿಗೆ ವಾಹನ ಡ್ರೈವಿಂಗ್ ಕಲಿಸಿ ಕೊಡುವ ವಿಜಯ ಕುಮಾರ ಗದ್ದಿ, ಕರ್ಫ್ಯೂ ಆರಂಭವಾದಾಗಿನಿಂದ ಗಂಗಾವತಿ ನಗರ ಹಾಗೂ ಕನಕಗಿರಿಯಲ್ಲಿ ಸುಮಾರು 100 ಜನರಿಗೆ ನಿತ್ಯ ಮಧ್ಯಾಹ್ನ ಹಾಗೂ ರಾತ್ರಿಯ ಊಟ ನೀಡುತ್ತಿದ್ದಾರೆ. ಗದ್ದಿ ಅವರ ಈ ಮಾನವೀಯ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.