ETV Bharat / state

ಹುಲಿಹೈದರ ಪ್ರಕರಣ: ಜೈಲು ಸೇರುವ ಭಯದಲ್ಲಿ ಯುವಕ ನೇಣಿಗೆ ಶರಣು

ತಿಂಗಳುಗಳ ಹಿಂದೆ ಹುಲಿಹೈದರ ಗ್ರಾಮದಲ್ಲಿ ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಗುಂಪು ಘರ್ಷಣೆಯಾಗಿತ್ತು. ಇದರಲ್ಲಿ ಸಾವು ನೋವು ಸಂಭವಿಸಿದ್ದು, ಕೆಲವರನ್ನು ಪೊಲೀಸರು ಬಂಧಿಸಿದ್ದರು.

died young man
ನೇಣಿಗೆ ಶರಣಾದ ಯುವಕ
author img

By

Published : Nov 8, 2022, 1:51 PM IST

ಗಂಗಾವತಿ(ಕೊಪ್ಪಳ): ಕನಕಗಿರಿ ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ಮೂರು ತಿಂಗಳ ಹಿಂದೆ ನಡೆದಿದ್ದ ಕೋಮು ಘರ್ಷಣೆ ಪ್ರಕರಣದಲ್ಲಿ ತನ್ನನ್ನು ಸೇರಿಸಿ ಜೈಲಿಗಟ್ಟಬಹುದು ಎಂದು ಭೀತಿಗೊಳಗಾಗಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ನಗರದಲ್ಲಿ ನಡೆದಿದೆ.

ನಗರದ ಬಸವಣ್ಣ ವೃತ್ತದ ಮುದ್ಗಲ್ ಓಣಿಯ ಶಿಲ್ಪಾ ಹಿರೇಮಠ ಎಂಬುವವರ ಮನೆಯಲ್ಲಿ ಯುವಕ ನೇಣಿಗೆ ಶರಣಾಗಿದ್ದು, ಯುವಕನನ್ನು ಹುಲಿಹೈದರ ಗ್ರಾಮದ ನಾಗರಾಜ ಹನುಮಂತಪ್ಪ ಗದ್ದಿ (25) ಎಂದು ಗುರುತಿಸಲಾಗಿದೆ.

ಹುಲಿಹೈದರ ಗ್ರಾಮದಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೃತನ ಸಹೋದರ ಬಳ್ಳಾರಿ ಕಾರಾಗೃಹದಲ್ಲಿದ್ದು, ಇದೇ ಪ್ರಕರಣದಲ್ಲಿ ಪೊಲೀಸರು ತನ್ನನ್ನು ಸಹ ಬಂಧಿಸಬಹುದು ಎಂಬ ಶಂಕೆಯಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ಇದನ್ನೂ ಓದಿ: ಹುಲಿಹೈದರ್​ ಗ್ರಾಮದಲ್ಲಿ ಮೃತರ ಮನೆಗಳಿಗೆ ಬೀಗ.. ಪರಿಹಾರದ ಹಣದೊಂದಿಗೆ ಡಿಸಿ ವಾಪಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.