ಗಂಗಾವತಿ: ಪೌರತ್ವ ಕಾಯ್ದೆ ಪ್ರಚಾರಕ್ಕೆ ಯತ್ನಿಸಿದ ಬಿಜೆಪಿ ಮುಖಂಡನ ಮನೆಗೆ ಮುತ್ತಿಗೆ ಹಾಕಿ, ಪಕ್ಷದ ಕೆಲ ಕಾರ್ಯಕರ್ತರನ್ನು ಗೃಹಬಂಧನಕ್ಕೆ ಒಳಪಡಿಸಿದ ಹಿನ್ನೆಲೆ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಘಟನಾ ಸ್ಥಳಕ್ಕೆ ಹಾಗೂ ಮುಖಂಡನ ನಿವಾಸಕ್ಕೆ ಭೇಟಿ ನೀಡಿ ವಿಚಾರಿಸಿದರು.
ಘಟನಾವಳಿಗಳ ಬಗ್ಗೆ ಪರಾಮರ್ಶೆ ನಡೆಸಿದ ವಿರೂಪಾಕ್ಷಪ್ಪ, ಬಳಿಕ ವಾರ್ಡ್ನ ನಗರಸಭಾ ಸದಸ್ಯ ಜಬ್ಬಾರ್ ಹಾಗೂ ಸ್ಥಳೀಯ ಕೆಲ ಮುಖಂಡರೊಂದಿಗೆ ಚರ್ಚಿಸಿದರು. ಪಕ್ಷದ ಪ್ರಣಾಳಿಕೆ ಪ್ರಕಾರ ಪ್ರಚಾರಕ್ಕೆ ನಮ್ಮ ಮುಖಂಡರು ತೆರಳಿದ್ದರು. ಯಾರಿಗೂ ಒತ್ತಾಯ ಮಾಡಿಲ್ಲ. ಆದರೆ ಉದ್ದೇಶ ಪೂರ್ವಕವಾಗಿ ಕೆಲ ಯುವಕರು ಈ ರೀತಿ ವರ್ಸುತಿಸಿರುವುದು ಸರಿಯಲ್ಲ ಎಂದರು.