ಗಂಗಾವತಿ (ಕೊಪ್ಪಳ): ಕೊಪ್ಪಳ ಜಿಲ್ಲೆಯಿಂದ ವರ್ಗಾವಣೆಯಾಗಿರುವ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಶುಕ್ರವಾರದಂದು ಗಂಗಾವತಿ ತಾಲೂಕಿನ ದುರ್ಗಾ ಬೆಟ್ಟದ ದೇಗುಲದಲ್ಲಿ ಹೋಮ - ಹವನ, ಪೂಜೆ ಮಾಡಿಸಿದ್ದಾರೆ.
![Homa havana by Vikas Kishore Suralkar couple in koppala durga hill](https://etvbharatimages.akamaized.net/etvbharat/prod-images/15831208_thumb.jpg)
ಆನೆಗೊಂದಿ ಸಮೀಪ ಇರುವ ದುರ್ಗಾಬೆಟ್ಟಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಮತ್ತು ಪತ್ನಿ ಪಾಯಲ್ ಸುರಾಳ್ಕರ್ ಚಂಡಿಕಾ ಹೋಮ, ಲಲಿತಾ ಸಹಸ್ರನಾಮವಳಿ ಹವನ ಮಾಡಿಸಿದರು. ಒಂದು ಗಂಟೆ ಕಾಲ ಹೋಮ ನಡೆಸಿದ ಸುರಾಳ್ಕರ್ ದಂಪತಿ ಬಳಿಕ ಹೋಮ ಕುಂಡಕ್ಕೆ ಪೂರ್ಣಾಹುತಿ ನೀಡಿದರು. ದೇಗುಲದ ಪ್ರಧಾನ ಅರ್ಚಕ ಬ್ರಹ್ಮಯ್ಯ ನೇತೃತ್ವ ವಹಿಸಿದ್ದರು.
ಬಳಿಕ ದೇಗುಲದ ವತಿಯಿಂದ ಜಿಲ್ಲಾಧಿಕಾರಿ ಮತ್ತು ಅವರ ಪತ್ನಿಯನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಕೊಪ್ಪಳ ಜಿಲ್ಲೆಯಲ್ಲಿ ಎರಡು ವರ್ಷ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಅವರನ್ನು ಸರ್ಕಾರ ಇತ್ತೀಚೆಗೆ ಕೆಪಿಎಸ್ಸಿ ಕಾರ್ಯದರ್ಶಿ ಹುದ್ದೆಗೆ ನಿಯೋಜಿಸಿ ವರ್ಗಾವಣೆ ಮಾಡಿದೆ.
ಇದನ್ನೂ ಓದಿ: ವಿಜಯಪುರ: ಹೆಚ್ಚುತ್ತಿರುವ ಅಪಘಾತ ತಪ್ಪಿಸಲು ವಿಶಿಷ್ಟ ಆಚರಣೆಗೆ ಮುಂದಾದ ಜನ