ETV Bharat / state

ಗಗನಕ್ಕೇರಿದ ಬಂಗಾರದ ಬೆಲೆ: ಮಹಾಲಕ್ಷ್ಮಿ ಪೂಜೆಗೆ ಚಿನ್ನ ಕೊಳ್ಳಲು ಜನರ ಪರದಾಟ - ಕೊಪ್ಪಳ

ದಿನೇ ದಿನೆ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದು, ಸಾಮಾನ್ಯ ವರ್ಗದ ಜನರು ಚಿನ್ನ ಕೊಳ್ಳಲು ಪರದಾಡುವಂತಾಗಿದೆ.

ಚಿನ್ನ ಕೊಳ್ಳಲು ಗ್ರಾಹಕರ ಪರದಾಟ
ಚಿನ್ನ ಕೊಳ್ಳಲು ಗ್ರಾಹಕರ ಪರದಾಟ
author img

By

Published : Jul 31, 2020, 12:54 PM IST

ಕೊಪ್ಪಳ: ವರ ಮಹಾಲಕ್ಷ್ಮಿ ಅಲಂಕಾರ ಪ್ರಿಯಳು. ವಿವಿಧ ರೀತಿಯಲ್ಲಿ ಅಲಂಕಾರ ಮಾಡಿದರೆ ಪ್ರಸನ್ನಳಾಗುತ್ತಾಳೆ ಎಂಬುದು ನಂಬಿಕೆ. ಹೀಗಾಗಿ ವರಮಹಾಲಕ್ಷ್ಮಿ ಹಬ್ಬದಲ್ಲಿ ಉಳ್ಳವರು ಬಗೆ ಬಗೆಯ ಚಿನ್ನದ ಆಭರಣಗಳನ್ನು ಹಾಕಿ ಅಲಂಕರಿಸಿ‌ ವರಮಹಾಲಕ್ಷ್ಮಿಗೆ ಪೂಜೆ ಸಲ್ಲಿಸುತ್ತಾರೆ. ಸಾಮಾನ್ಯ ಹಾಗೂ ಮಧ್ಯಮ ವರ್ಗದ ಕುಟುಂಬದವರು ಹಬ್ಬದ ಸಂದರ್ಭದಲ್ಲಿ ಗುಂಜಿ ಬಂಗಾರವನ್ನಾದರೂ ಖರೀದಿಸುತ್ತಿದ್ದರು. ಆದರೆ, ಈ ವರ್ಷ ಚಿನ್ನದ ಬೆಲೆ ಗಗನಕ್ಕೇರಿದೆ.

ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೆ ಏರಿಕೆಯಾಗುತ್ತಿರೋದು ಆಭರಣ ಪ್ರಿಯರಲ್ಲಿ ನಿರಾಸೆ ಮೂಡಿಸುತ್ತಿದೆ. ಅದರಲ್ಲೂ ಸಾಮಾನ್ಯ ಮತ್ತು ಮಧ್ಯಮ ವರ್ಗದ ಕುಟುಂಬದವರ ಕೈಗೆ ಬಂಗಾರ ಈಗ ಎಟುಕದ ಬೆಲೆಯಲ್ಲಿದೆ. ಜುಲೈ 30ರ ಸಂಜೆಯ ವೇಳೆಗೆ ಕೊಪ್ಪಳದಲ್ಲಿ 10 ಗ್ರಾಂ ಶುದ್ಧ ಚಿನ್ನಕ್ಕೆ 55,300 ರುಪಾಯಿ ಇತ್ತು. 10 ಗ್ರಾಂ ಶುದ್ಧ ಚಿನ್ನದ ಬೆಲೆ 55 ಸಾವಿರ ರೂ. ಗಡಿ ದಾಟಿರುವುದರಿಂದ ಸಾಮಾನ್ಯ ಜನರಿಗೆ ಈಗ ಚಿನ್ನ ಅನ್ನೋದು ಗಗನ‌ ಕುಸುಮವಾಗಿ ಪರಿಣಮಿಸಿದೆ.

ಚಿನ್ನ ಕೊಳ್ಳಲು ಗ್ರಾಹಕರ ಪರದಾಟ

ಸಾಮಾನ್ಯವಾಗಿ ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಲಕ್ಷ್ಮಿಗೆ ಅಲಂಕಾರ ಮಾಡಲು ಸಾಮಾನ್ಯ ಜನರು ಕನಿಷ್ಠ ಒಂದು ಗುಂಜಿಯಷ್ಟಾದರೂ ಬಂಗಾರವನ್ನು ಖರೀದಿಸುತ್ತಿದ್ದರು. ಆದರೆ, ಈ ವರ್ಷ ಒಂದು ಕಡೆ ಕೊರೊನಾ ಸಂಕಷ್ಟ, ಇನ್ನೊಂದೆಡೆ ಚಿನ್ನದ ಬೆಲೆ ಗಗನಕ್ಕೆ ಏರಿರೋದು ಸಾಮಾನ್ಯ ಜನರಿಗೆ ಸಮಸ್ಯೆಯುಂಟು ಮಾಡಿದೆ.

ಕಳೆದ ವರ್ಷದಂತೆ ಈ ಬಾರಿಯೂ ಕೊಪ್ಪಳದಲ್ಲಿ ಚಿನ್ನದ ವ್ಯಾಪಾರ ಫುಲ್​ ಡಲ್ ಆಗಿದೆ ಎಂದು ಚಿನ್ನದ ವ್ಯಾಪಾರಿ ಗುರುರಾಜ ರಾಯ್ಕರ್ ಹೇಳುತ್ತಾರೆ. ಒಟ್ಟಾರೆ ಕೊರೊನಾದಿಂದ ಆರ್ಥಿಕ‌ ಮುಗ್ಗಟ್ಟಿನಲ್ಲಿರುವ ಜನಸಾಮಾನ್ಯರಿಗೆ ಚಿನ್ನದ ದರ ಗಗನಮುಖಿಯಾಗಿರೋದು ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.