ETV Bharat / state

ದಾರಿದ್ರ್ಯ ಕಳೆದ ಆರಿದ್ರಾ.. ನಿನ್ನೆ ಸುರಿದ ಭಾರೀ ಮಳೆಗೆ ರೈತರ ಮೊಗದಲ್ಲಿ ಮಂದಹಾಸ

author img

By

Published : Jun 26, 2020, 2:25 PM IST

ಬಹುತೇಕ ಕಡೆ ಹೆಸರು, ಎಳ್ಳು, ಸೂರ್ಯಕಾಂತಿ, ಮೆಕ್ಕೆಜೋಳ ಮತ್ತಿತರೆ ಬೆಳೆಗೆ ಈ ಮಳೆ ಚೈತನ್ಯ ನೀಡಿದೆ..

ಭಾರಿ ಮಳೆಗೆ ರೈತರ ಮೊಗದಲ್ಲಿ ಮಂದಹಾಸ
ಭಾರಿ ಮಳೆಗೆ ರೈತರ ಮೊಗದಲ್ಲಿ ಮಂದಹಾಸ

ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳಲ್ಲಿ ಮುಂಗಾರು ಹಂಗಾಮಿನ ಆರಿದ್ರಾ ನಕ್ಷತ್ರದ ಮಳೆ ಮಧ್ಯರಾತ್ರಿ ಗುಡುಗು ಸಿಡಿಲಬ್ಬರದಿಂದ ಅಬ್ಬರಿಸಿದ್ದು ರೈತಾಪಿ ವರ್ಗಕ್ಕೆ ಫುಲ್ ಖುಷಿ ತಂದಿದೆ.

ಸಮರ್ಪಕ ಮಳೆ ಇಲ್ಲದೆ ಸಂಕಷ್ಟಕ್ಕೀಡಾಗಿದ್ದ ರೈತರ ಮೊಗದಲ್ಲೀಗ ಸಂತೊಷ ಮೂಡಿದೆ. ಬಯಲು ಸೀಮೆ ನಾಡಿನ ದಾರಿದ್ರ್ಯ ಅಳಿಸಿದೆ. ಆರಿದ್ರಾ ಹೊಯ್ದ್ರೇ ದಾರಿದ್ರ್ಯ ಹೋಗುತ್ತೆ ಎಂದು ಹಿರಿಯರು ಹೇಳುತ್ತಾರೆ. ನಾಲ್ಕೈದು ವರ್ಷದಿಂದ ಭರಣಿ, ರೋಹಿಣಿ, ಮೃಗಶಿರಾ, ಆರಿದ್ರಾ ನಕ್ಷತ್ರದ ಮಳೆ ಕೈಕೊಟ್ಟಿದ್ದವು. ಆದ್ರೀಗ ರೈತರಿಗೆ ಆರಿದ್ರಾ ಆಶಾಭಾವ ಮೂಡಿಸಿದೆ. ತಾಲೂಕಿನ ದೋಟಿಹಾಳ, ತಾವರಗೇರಾದಲ್ಲಿ ಉತ್ತಮ ಮಳೆಯಾಗಿದ್ರೆ, ಕುಷ್ಟಗಿಯಲ್ಲಿ ಸಾಧಾರಣ ಹಾಗೂ ಕಿಲ್ಲಾರಹಟ್ಟಿ, ಹನುಮಸಾಗರ, ಹನುಮನಾಳದಲ್ಲಿ ಕನಿಷ್ಠ ಮಳೆಯಾಗಿದೆ.

ಭಾರಿ ಮಳೆಗೆ ರೈತರ ಮೊಗದಲ್ಲಿ ಮಂದಹಾಸ

ಬಹುತೇಕ ಕಡೆ ಹೆಸರು, ಎಳ್ಳು, ಸೂರ್ಯಕಾಂತಿ, ಮೆಕ್ಕೆಜೋಳ ಮತ್ತಿತರೆ ಬೆಳೆಗೆ ಈ ಮಳೆ ಚೈತನ್ಯ ನೀಡಿದೆ. ಕುಷ್ಟಗಿ-28.6.ಮಿ.ಮೀ, ಹನುಮಸಾಗರ-6.4 ಮಿ.ಮೀ, ಹನುಮನಾಳ-9.2.ಮಿ.ಮೀ, ಕಿಲಾರಹಟ್ಟಿ-14.2 ಮಿ.ಮೀ, ತಾವರಗೇರಾ-41.0 ಮಿ.ಮೀ, ದೋಟಿಹಾಳ-42.3 ಮಿ.ಮೀ. ನಷ್ಟು ಮಳೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.