ಕುಷ್ಟಗಿ (ಕೊಪ್ಪಳ): ಬಿರುಗಾಳಿ ಸಹಿತ ಭಾರೀ ಮಳೆಗೆ ಕುಷ್ಟಗಿ ತಾಲೂಕಿನ ಜಹಗೀರಗುಡದೂರ ಗ್ರಾಮದ ರೈತ ಪರಸಪ್ಪ ಭೀಮಪ್ಪ ಮಾಲಗಿತ್ತಿ ಅವರಿಗೆ ಸೇರಿದ್ದ ಎರಡು ಎಕರೆ ಜಮೀನಿನಲ್ಲಿ ಬೆಳೆದ ಸಜ್ಜೆ ನೆಲ ಕಚ್ಚಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಕಳೆದ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ತೆನೆ ಕಟ್ಟಿದ್ದ ಸಜ್ಜೆ ಬೆಳೆ ಮಕಾಡೆ ಮಲಗಿ ಹಾನಿ ಸಂಭವಿಸಿದೆ. ಉತ್ತಮ ಮಳೆಯಿಂದಾಗಿ ಸಮೃದ್ಧಿ ಬೆಳೆಯಿಂದ ಭರ್ಜರಿ ಫಸಲು ನಿರೀಕ್ಷೆಯಲ್ಲಿದ್ದ ರೈತರಿಗೆ ಅದೃಷ್ಟ ಕೈ ಕೊಟ್ಟಿದೆ.
ಆಗಿರುವ ಅಕಾಲಿಕ ಬೆಳೆ ಹಾನಿಗೆ ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕೆಂದು ರೈತ ಪರಸಪ್ಪ ಮಾಲಗಿತ್ತಿ ಮನವಿ ಮಾಡಿದ್ದಾರೆ.