ಕೊಪ್ಪಳ: ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಅವಶ್ಯಕ ವಸ್ತುಗಳ ಜತೆಗೆ ಮದ್ಯದಂಗಡಿ ತೆರೆಯಲು ಅವಕಾಶ ನೀಡಿರುವ ಹಿನ್ನೆಲೆ ಮದ್ಯ ಖರೀದಿಸಲು ಮದ್ಯಪ್ರಿಯರು ಮುಗಿಬಿದ್ದಿದ್ದಾರೆ.
ಕಳೆದ ಐದು ದಿನಗಳ ಕಾಲ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿದ್ದ ಕಾರಣ ಮದ್ಯದಂಗಡಿಗಳನ್ನು ಸಹ ಬಂದ್ ಮಾಡಲಾಗಿತ್ತು. ಇಂದು ಮತ್ತು ನಾಳೆ ಎರಡು ದಿನಗಳ ಕಾಲ ಬೆಳಗ್ಗೆ 10 ಗಂಟೆಯವರೆಗೆ ಅಗತ್ಯ ವಸ್ತುಗಳು ಹಾಗೂ ಮದ್ಯದಂಗಡಿ ತೆರೆಯಲು ಅವಕಾಶ ನೀಡಲಾಗಿದೆ. ಇಂದು ತಡವಾಗಿ ಮದ್ಯದಂಗಡಿ ತೆಗೆಯಲು ಅನುಮತಿ ನೀಡಿದ್ದರಿಂದ ನಗರದಲ್ಲಿ ಮದ್ಯದಂಗಡಿಗಳ ಮುಂದೆ ಮದ್ಯ ಖರೀದಿಗೆ ಮದ್ಯಪ್ರಿಯರು ಮುಗಿಬಿದ್ದಿದ್ದಾರೆ.
ಖರೀದಿಗೆ ಬಂದ ಮದ್ಯಪ್ರಿಯರನ್ನು ನಿಯಂತ್ರಿಸಲು ಮದ್ಯದಂಗಡಿಗಳ ಮಾಲೀಕರು ಹರಸಾಹಸ ಪಡಬೇಕಾಯಿತು. ನಾಳೆ ಒಂದು ದಿನ ಮಾತ್ರ ಮದ್ಯದಂಗಡಿ ತೆರೆಯಲು ಅವಕಾಶವಿದೆ. ಮತ್ತೆ ಮೇ 24 ಸೋಮವಾರದಿಂದ ಮೇ 30ರವರೆಗೆ ಸಂಪೂರ್ಣ ಲಾಕ್ಡೌನ್ ಜಾರಿಯಾಗಲಿದ್ದು, ಮದ್ಯದಂಗಡಿಗಳು ಬಂದ್ ಆಗಲಿವೆ.
ಇದನ್ನೂ ಓದಿ: ಕೋವಿಡ್ ಭೀತಿ: ಹೊಲಗಳಿಗೆ ಶಿಫ್ಟ್ ಆದ ಗ್ರಾಮಸ್ಥರು!
ಹೀಗಾಗಿ ಇಂದೇ ಮದ್ಯಪ್ರಿಯರು ಹೆಚ್ಚಿನ ಪ್ರಮಾಣದಲ್ಲಿ ಮದ್ಯವನ್ನು ಖರೀದಿಸಿಕೊಂಡು ಹೋಗುತ್ತಿರುವ ದೃಶ್ಯ ಕಂಡು ಬಂದಿತು. ಮದ್ಯದಂಗಡಿಗಳ ಮುಂದೆ ಮದ್ಯಪ್ರಿಯರ ಸಂಖ್ಯೆ ಹೆಚ್ಚಾಗಿದ್ದರಿಂದ ಕೆಲವೆಡೆ ಪೊಲೀಸರು ಮದ್ಯದಂಗಡಿಗಳನ್ನು ಬಂದ್ ಮಾಡಿಸಿದರು. ಇದರಿಂದ ಮದ್ಯ ಸಿಗದೆ ಹಲವರು ನಿರಾಸೆಯಿಂದ ವಾಪಸಾಗುವಂತಾಯಿತು.