ಕುಷ್ಟಗಿ (ಕೊಪ್ಪಳ): ಗಜೇಂದ್ರಗಡ ರಸ್ತೆಯಲ್ಲಿರುವ ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ವಸತಿ ನಿಲಯದ 100 ಬೆಡ್ ಕೋವಿಡ್ ಕಾಳಜಿ ಕೇಂದ್ರದಲ್ಲಿ ಕೇವಲ ಒಬ್ಬ ಕೊರೊನಾ ಸೋಂಕಿತನಿಗೆ 6 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತಾಲೂಕಿನಲ್ಲಿ ಕೊರೊನಾ ಹಾವಳಿ ತಗ್ಗಿದ ಹಿನ್ನೆಲೆ 6 ಕೋವಿಡ್ ಕಾಳಜಿ ಕೇಂದ್ರಗಳ ಪೈಕಿ 4 ಕೋವಿಡ್ ಕಾಳಜಿ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕುಷ್ಟಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿರುವ ಡೆಡಿಕೇಟ್ ಕೋವಿಡ್ ಹೆಲ್ತ್ ಕೇರ್ ಸೆಂಟರ್ (ಡಿಸಿಹೆಚ್ಸಿ) ನಲ್ಲಿ ಐವರು, ಹನುಮಸಾಗರ ಕೋವಿಡ್ ಕಾಳಜಿ ಕೇಂದ್ರದಲ್ಲಿ 6 ಜನ ದಾಖಲಾಗಿದ್ದಾರೆ.
ಕುಷ್ಟಗಿ ಕೋವಿಡ್ ಕಾಳಜಿ ಕೇಂದ್ರದಲ್ಲಿ ಕಳೆದ ಮೂರು ದಿನಗಳಿಂದ ಒಬ್ಬ ಸೋಂಕಿತನಿದ್ದು ಆತನಿಗೆ ಚಿಕಿತ್ಸೆ ನೀಡಲು ನಾಲ್ವರು ಆರೋಗ್ಯ ಇಲಾಖೆ ಸಿಬ್ಬಂದಿ, ಇಬ್ಬರು ಗೃಹರಕ್ಷಕರು ಪಾಳೆ ಪ್ರಕಾರ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಕುರಿತು, ತಹಶೀಲ್ದಾರ್ ಎಂ.ಸಿದ್ದೇಶ್ ಪ್ರತಿಕ್ರಿಯಿಸಿ ತಾಲೂಕಿನಲ್ಲಿರುವ ಕೋವಿಡ್ ಕಾಳಜಿ ಕೇಂದ್ರಗಳನ್ನು ಡಿಸಿ ಆದೇಶ ನೀಡುವವರೆಗೂ ಸ್ಥಗಿತಗೊಳಿಸುವುದಿಲ್ಲ. ಎಲ್ಲವೂ ಚಾಲ್ತಿಯಲ್ಲಿದ್ದು, ಕೊರೊನಾ ದೃಢವಾದರೆ ಸೋಂಕಿತರನ್ನು ದಾಖಲಿಸಲಾಗುತ್ತಿದೆ ಎಂದರು.
ಇದನ್ನೂ ಓದಿ:Covid Update: ರಾಜ್ಯದಲ್ಲಿಂದು 5,815 ಸೋಂಕಿತರು ಪತ್ತೆ.. 161 ಮಂದಿ ಬಲಿ