ETV Bharat / state

ಕಾಂಗ್ರೆಸ್, ಬಿಜೆಪಿಗೆ ಸದ್ಯಕ್ಕೆ ಉಳಿದಿದ್ದು ವಿಷಕನ್ಯೆ, ವಿಷಸರ್ಪ ಅಷ್ಟೇ: ಹೆಚ್​​ ಡಿ ಕುಮಾರಸ್ವಾಮಿ - karnataka assembly election 2023

ಚುನಾವಣಾ ಸಮೀಕ್ಷೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಸಮೀಕ್ಷೆಗೂ ನೆಲದ ವಾಸ್ತವಕ್ಕೂ ಬಹಳ ವ್ಯತ್ಯಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಹೇಳಿದರು.

hd-kumarswamy-campaigned-for-jds-candidate-in-koppal
ಕಾಂಗ್ರೆಸ್, ಬಿಜೆಪಿಗೆ ಸದ್ಯಕ್ಕೆ ಉಳಿದಿದ್ದು ವಿಷಕನ್ಯೆ, ವಿಷಸರ್ಪ ಅಷ್ಟೇ: ಹೆಚ್​​ಡಿ ಕುಮಾರಸ್ವಾಮಿ ವ್ಯಂಗ್ಯ
author img

By

Published : May 2, 2023, 10:01 PM IST

ಕಾಂಗ್ರೆಸ್, ಬಿಜೆಪಿಗೆ ಸದ್ಯಕ್ಕೆ ಉಳಿದಿದ್ದು ವಿಷಕನ್ಯೆ, ವಿಷಸರ್ಪ ಅಷ್ಟೇ: ಹೆಚ್​​ಡಿ ಕುಮಾರಸ್ವಾಮಿ ವ್ಯಂಗ್ಯ

ಕೊಪ್ಪಳ: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಯೋಜನೆಗಳೇ ಇಲ್ಲ. ಹಾಗಾಗೀ ಅವರು ವಿಷಕನ್ಯೆ, ವಿಷ ಸರ್ಪ ಬಿಟ್ಟು ಜನರಿಗೆ ಮತ್ತೇನನ್ನು ಹೇಳಲು ಸಾಧ್ಯ ಎಂದು ಮಾಜಿ ಸಿಎಂ ಹೆಚ್​​​ಡಿ ಕುಮಾರಸ್ವಾಮಿ ಕೇಳಿದರು.

ಕೊಪ್ಪಳದ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ ವೇಳೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಈ ಚುನಾವಣೆಯಲ್ಲಿ ಬಹುಮತ ಪಡೆದು ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಸದ್ಯ ಕಾಂಗ್ರೆಸ್, ಬಿಜೆಪಿ ಜನರಿಗೆ ದಿನಕ್ಕೊಂದು ಉಚಿತ ಯೋಜನೆಗಳನ್ನ ಘೋಷಣೆ ಮಾಡುತ್ತಿದ್ದಾರೆ. ಇದರಲ್ಲೂ ಅವರಿಗೆ ಕಾಂಪಿಟೇಷನ್ ಇದೆ. ಮುಂದೆ ಏನಾಗುತ್ತೊ ಕಾದು ನೋಡೋಣ ಎಂದು ಹೇಳಿದರು.

ಚುನಾವಣಾ ಸಮೀಕ್ಷೆಗಳ ಬಗ್ಗೆ ಮಾತನಾಡಿದ ಹೆಚ್​ಡಿಕೆ, ನಾನು ಸಮೀಕ್ಷೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಎರಡು ರಾಷ್ಟ್ರೀಯ ಪಕ್ಷಗಳು ಸಮೀಕ್ಷೆ ನಡೆಸುವ ಖಾಸಗಿ ಸಂಸ್ಥೆಗಳಿಗೆ ಹೆಚ್ಚಿನ ಹಣವನ್ನು ನೀಡಿ, ಅವರಿಗೆ ಬೇಕಾದ ಹಾಗೆ ಸಮೀಕ್ಷೆ ಮಾಡಿಸಿ, ನಂತರ ಖಾಸಗಿ ಸುದ್ದಿವಾಹಿನಿಗಳಿಗೆ ಹಣ ಕೊಟ್ಟು ಪ್ರಸಾರ ಮಾಡುತ್ತಾರೆ, ಇದು ವಾಸ್ತವಾಂಶ. ಅಲ್ಲಿ ಬರುವಂತಹ ಸಮೀಕ್ಷೆಗೂ ನೆಲದ ವಾಸ್ತವಕ್ಕೂ ಬಹಳ ವ್ಯತ್ಯಾಸ ಇದೆ ಎಂದರು.

ಬಜರಂಗ ದಳ ಹಾಗೂ ಪಿಎಫ್​​ಐ ಬ್ಯಾನ ವಿಚಾರವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಕಾಂಗ್ರೆಸ್ ಮತ್ತು ಬಿಜೆಪಿಗೆ ಜನಪರ ಕೆಲಸಗಳ ಬಗ್ಗೆ ಹೇಳಿಕೊಳ್ಳುವುದಕ್ಕೆ ಏನು ಉಳುದಿಲ್ಲ. ಜನರ ಹಿತಾಸಕ್ತಿ ಅವರಿಗೆ ಮುಖ್ಯವಾಗಿಲ್ಲ. ಅಧಿಕಾರ ಅವಧಿಯಲ್ಲಿ ಜನರ ಮಧ್ಯೆ ದ್ವೇಷದ ಮನೋಭಾವಗಳನ್ನು ಸೃಷ್ಟಿಸಿ ಸಮಾಜಮವನ್ನು ಹಾಳುಗೆಡುವಲು ಎರಡು ರಾಷ್ಟ್ರೀಯ ಪಕ್ಷಗಳು ಕೆಲಸ ಮಾಡುತ್ತಲೇ ಬಂದಿವೆ. ವಿಷಕನ್ಯೆ, ವಿಷಸರ್ಪದ ಹೇಳಿಕೆಗಳಿಂದ ನಾಡಿನ ಜನತೆಗೆ ಏನು ಉಪಯೋಗ? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಮಂಡ್ಯ ಅಭ್ಯರ್ಥಿ ಪರ ಪ್ರಿಯಾಂಕಾ ಗಾಂಧಿ ಅಬ್ಬರದ ಪ್ರಚಾರ : ಕೈ ನಾಯಕಿಗೆ ಸಾವಯವ ಬೆಲ್ಲ, ಕೃಷ್ಣನ ವಿಗ್ರಹ ಗಿಫ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.