ಕೊಪ್ಪಳ: ಸೇವೆಗೆ ಇಂತಹದ್ದನ್ನೇ ಮಾಡಬೇಕು ಎಂಬ ನಿರ್ಬಂಧ ಇಲ್ಲ. ಹೀಗಾಗಿ, ತಾವು ಮಾಡುವ ಕಾಯಕದಲ್ಲಿಯೂ ಸಮಾಜಕ್ಕಾಗಿ ತುಡಿಯುವ ಮನಸ್ಸುಗಳು ಅದೆಷ್ಟೋ. ಅಂತಹವರ ಸಾಲಿನಲ್ಲಿ ಈ ವ್ಯಕ್ತಿಯೂ ನಿಲ್ಲುತ್ತಾರೆ.
ಜಿಲ್ಲೆಯ ಗಂಗಾವತಿ ನಗರದಲ್ಲಿರುವ ನೇತ್ರಾ ಹೇರ್ಡ್ರೆಸ್ನ ಗೋಪಾಲಕೃಷ್ಣ ಎಂಬುವರು ತಮ್ಮ ಸಲೂನ್ ವಾರ್ಷಿಕೋತ್ಸವ ಅಂಗವಾಗಿ ವಿಕಲಚೇತನ ಹಾಗೂ ವಿಶೇಷ ಮಕ್ಕಳಿಗೆ ಕ್ಷೌರ ಸೇವೆ ಮಾಡುತ್ತಿದ್ದಾರೆ. ನಿನ್ನೆ ಅವರು130 ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಕ್ಷೌರ ಮಾಡಿ ತಮ್ಮ ಸೇವೆ ಸಲ್ಲಿಸಿದ್ದಾರೆ.
ಪ್ರತಿ ವರ್ಷವೂ ವಿಕಲಚೇತನ ಹಾಗೂ ವಿಶೇಷ ಮಕ್ಕಳಿಗೆ ಒಂದು ದಿನ ಉಚಿತವಾಗಿ ಕ್ಷೌರ ಮಾಡುತ್ತಾರೆ. ಈ ವೃತ್ತಿಯನ್ನು ಇವರು ಕಳೆದ 18 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಈ ಹಿನ್ನೆಲೆ ಗೋಪಾಲಕೃಷ್ಣ ಸಾರ್ವಜನಿಕರಿಂದ ಪ್ರಶಂಸೆಗೆ ಒಳಗಾಗಿದ್ದಾರೆ.