ಗಂಗಾವತಿ: ಜಿಲ್ಲೆಯಲ್ಲಿ ಸೈಬರ್ ಕ್ರೈಂ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗಂಗಾವತಿ ಉಪ ವಿಭಾಗದ ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ ಹಾಗೂ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಫೇಸ್ಬುಕ್ ಖಾತೆಗಳನ್ನು ಖದೀಮರು ಹ್ಯಾಕ್ ಮಾಡಿರುವ ಘಟನೆ ನಡೆದಿದೆ.
![ಡಿವೈಎಸ್ಪಿ ಆರ್.ಎಸ್. ಉಜ್ಜನಕೊಪ್ಪ ಅವರು ಮನವಿ ಮಾಡಿರುವುದು](https://etvbharatimages.akamaized.net/etvbharat/prod-images/03:09:10:1600249150_kn-gvt-06-16-dysp-and-exminister-facebook-haked-vis-kac10005_16092020142226_1609f_1600246346_1043.jpg)
ಈ ಕುರಿತು ಡಿವೈಎಸ್ಪಿ ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ್ದು, ಎಲ್ಲಾ ನನ್ನ ಫೇಸ್ ಬುಕ್ ಗೆಳೆಯರ ಗಮನಕ್ಕೆ, ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚನೆ ಹೆಚ್ಚಾಗುತ್ತಿದ್ದು, ಎಚ್ಚರಿಕೆಯಿಂದ ಇರಬೇಕು. ಕೆಲವರು ಪೊಲೀಸ್ ಅಧಿಕಾರಿಗಳ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ನನ್ನ ಅಕೌಂಟ್ ಕೂಡ ಯಾರೋ ನಕಲಿ ಮಾಡಿದ್ದಾರೆ. ನಿಮಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ನಂತರ ಹಣವನ್ನು ಗೂಗಲ್ ಪೇ ಮಾಡುವಂತೆ ಕೇಳುವ ಸಾಧ್ಯತೆ ಇರುತ್ತದೆ. ದಯವಿಟ್ಟು ಯಾರೂ ಇಂತಹ ಸಂದೇಶಕ್ಕೆ ಸ್ಪಂದಿಸಬಾರದು ಎಂದು ಮನವಿ ಮಾಡಿದ್ದಾರೆ.
ಮಾಜಿ ಸಚಿವರ ಮನವಿ:
ಚುನಾವಣೆ ಪ್ರಚಾರದ ಉದ್ದೇಶಕ್ಕೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆರಂಭಿಸಿದ್ದ ಫೇಸ್ಬುಕ್ ಖಾತೆಯನ್ನೂ ಯಾರೋ ಹ್ಯಾಕ್ ಮಾಡಿದ್ದು, 2018ರ ಪೇಜಿನಲ್ಲಿ ಕೆಲ ಅವರ ವೈಯಕ್ತಿಕ ಮಾಹಿತಿ ತೆಗೆದು ಸಂಪರ್ಕ ಸಂಖ್ಯೆಯನ್ನು ತಪ್ಪಾಗಿ ನೀಡಿದ್ದಾರೆ. ಇದರಿಂದ ಅಭಿಮಾನಿಗಳು, ಕಾರ್ಯಕರ್ತರು ಎಚ್ಚರಿಕೆಯಿಂದ ಇರಬೇಕು ಎಂದು ನಾಯಕರ ಆಪ್ತರು ಮನವಿ ಮಾಡಿದ್ದಾರೆ.