ETV Bharat / state

ಅದ್ಧೂರಿ ಹುಟ್ಟುಹಬ್ಬ ಆಚರಣೆ.. ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಶಕ್ತಿ ಪ್ರದರ್ಶನ - ರೆಡ್ಡಿ ಅಭಿಮಾನಿಗಳು ಹೂವಿನ ಮಳೆಗರೆದು ಅಭಿನಂದನೆ

ಜನಾರ್ದನ ರೆಡ್ಡಿ ಹುಟ್ಟುಹಬ್ಬ- ಗಂಗಾವತಿಯಲ್ಲಿ ಸಾವಿರಾರು ಬೈಕ್​ಗಳ ಜಾಥಾ- ವಿಧಾನಸಭೆ ಚುನಾವಣಾ ಅಖಾಡಕ್ಕಿಳಿಯಲು ಈಗ್ಲೇ ಶಕ್ತಿ ಪ್ರದರ್ಶನ

reddy power show in gangavathi
ಗಂಗಾವತಿಯಲ್ಲಿ ರೆಡ್ಡಿ ಶಕ್ತಿ ಪ್ರದರ್ಶನ
author img

By

Published : Jan 11, 2023, 3:19 PM IST

Updated : Jan 11, 2023, 4:38 PM IST

ಅದ್ಧೂರಿ ಹುಟ್ಟುಹಬ್ಬ ಆಚರಣೆ.. ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಶಕ್ತಿ ಪ್ರದರ್ಶನ

ಗಂಗಾವತಿ(ಕೊಪ್ಪಳ): ಈಗಾಗಲೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸುವ ಮೂಲಕ ರಾಜಕೀಯ ಅಖಾಡಕ್ಕೆ ಇಳಿದಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಬುಧವಾರ ತಮ್ಮ ಹುಟ್ಟುಹಬ್ಬದ ಅಂಗವಾಗಿ ಗಂಗಾವತಿಯಲ್ಲಿ ಬೃಹತ್ ಬೈಕ್ ಜಾಥಾ ಆಯೋಜಿಸುವ ಮೂಲಕ ಗಮನ ಸೆಳೆದಿದ್ದಾರೆ.

ಸಾವಿರಕ್ಕೂ ಹೆಚ್ಚು ಜನರಿಂದ ಬೈಕ್​ ರ್ಯಾಲಿ: ಒಂದು ಸಾವಿರಕ್ಕೂ ಅಧಿಕ ಬೈಕ್​ಗಳ ಮೂಲಕ ರ್ಯಾಲಿ ಆಯೋಜಿಸಿದ್ದ ರೆಡ್ಡಿ 2023ರ ಚುನಾವಣೆಯಲ್ಲಿ ತಮ್ಮ ವಿರುದ್ಧ ಸ್ಪರ್ಧಿಸಲಿರುವ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಪರೋಕ್ಷವಾಗಿ ಸಂದೇಶ ಸಾರುವಂತೆ ಶಕ್ತಿ ಪ್ರದರ್ಶನಕ್ಕೆ ಮುಂದಾದರು. ಬೆಳಗ್ಗೆ ಹತ್ತು ಗಂಟೆಗೆ ಆರಂಭವಾಗಬೇಕಿದ್ದ ರ್ಯಾಲಿ ಒಂದೂವರೆ ಗಂಟೆ ವಿಳಂಬವಾಗಿ ಆರಂಭವಾಯಿತು.

ಹಿರೇಜಂತಕಲ್​ನಲ್ಲಿರುವ ವಿಜಯನಗರ ಕಾಲದ ಪಂಪಾವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಜನಾರ್ದನ ರೆಡ್ಡಿ ಬಳಿಕ ಬೈಕ್ ರ್ಯಾಲಿಗೆ ಚಾಲನೆ ನೀಡಿದರು. ಹಿರೇಜಂತಕಲ್ ದೇವಸ್ಥಾನದಿಂದ ಕೇಂದ್ರ ಬಸ್ ನಿಲ್ದಾಣದ ಶ್ರೀಕೃಷ್ಣ ದೇವರಾಯ ವೃತ್ತ ಕೇವಲ ಮುಕ್ಕಾಲು ಕಿಲೋ ಮೀಟರ್ ಅಂತರವಿದೆ. ಇಲ್ಲಿಗೆ ರ್ಯಾಲಿ ತಲುಪಲು ಬರೋಬ್ಬರಿ ಎರಡು ಗಂಟೆಗೂ ಹೆಚ್ಚು ಸಮಯ ಹಿಡಿಯಿತು. ತೆರೆದ ವಾಹನದಲ್ಲಿ ನಿಂತಿದ್ದ ರೆಡ್ಡಿ, ರಸ್ತೆಯ ಎರಡೂ ಕಡೆಗಳಲ್ಲಿ ನಿಂತಿದ್ದ ಯುವಕರು, ಮಹಿಳೆಯರು, ವೃದ್ಧರು, ಅಭಿಮಾನಿಗಳು, ಕಾರ್ಯಕರ್ತರತ್ತ ಕೈಬೀಸಿ, ಕೈಮಗಿಯುತ್ತಿದ್ದರು. ರೆಡ್ಡಿ ಅಭಿಮಾನಿಗಳು ಹೂವಿನ ಮಳೆಗರೆದು ಅಭಿನಂದನೆ ಸಲ್ಲಿಸಿದರು. ಬಸವೇಶ್ವರ ವೃತ್ತದಲ್ಲಿರುವ ಮಾಜಿ ಸಂಸದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎಚ್.ಜಿ. ರಾಮುಲು ಅವರ ನಿವಾಸದ ಮುಂದೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ರೆಡ್ಡಿ ಅಭಿಮಾನಿಗಳು, ಕೆಆರ್​ಪಿ ಪಕ್ಷದ ಕಾರ್ಯಕರ್ತರು ಮೆರವಣಿಗೆ ಮಾಡಿದರು.

reddy power show in gangavathi
ಗಂಗಾವತಿಯಲ್ಲಿ ರೆಡ್ಡಿ ಶಕ್ತಿ ಪ್ರದರ್ಶನ

ಸೆಲ್ಫಿ ಕ್ಲಿಕ್ಕಿಸಿಕೊಂಡ ಮಾಜಿ ಸಚಿವ.. ಮೆರವಣಿಗೆಯುದ್ದಕ್ಕೂ ರೆಡ್ಡಿ, ಅಭಿಮಾನಿಗಳಿಗೆ ಹಸ್ತಲಾಘವ ಮಾಡುತ್ತಿದ್ದರು. ಕೆಲ ಯುವಕರ ಮನವಿ ಮೇರೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದುದು ಕಂಡುಬಂತು. ಮಗುವೊಂದನ್ನು ಎತ್ತಿಕೊಂಡು ಫೊಟೋ ಕ್ಲಿಕ್ಕಿಸಿಕೊಂಡರು. ಅಲ್ಲದೇ ವಿಜಯದ ಸಂಕೇತವನ್ನು ತೋರಿಸಿದರು. ರೆಡ್ಡಿಯಿಂದ ಪ್ರೇರಣೆಗೊಂಡ ಮಗು ಕೂಡ ವಿಜಯದ ಸಂಕೇತ ತೋರಿ ಗಮನ ಸೆಳೆಯಿತು. ಇದು ಪಕ್ಷದ ಕಾರ್ಯಕರ್ತರಲ್ಲಿ ಹರ್ಷೋದ್ಘಾರಕ್ಕೆ ಕಾರಣವಾಯಿತು.

ಜೆಸಿಬಿ ಮೂಲಕ ಪುಷ್ಪವೃಷ್ಟಿ: ಜೆಸಿಬಿಗಳ ಮೂಲಕ ಮಾಜಿ ಸಚಿವ ರೆಡ್ಡಿಗೆ ಹೂಮಳೆ ಸುರಿಸಿದರು. ಅಭಿಮಾನಿಯೊಬ್ಬ ಜನಾರ್ದನ ರೆಡ್ಡಿಯ ಭಾವಚಿತ್ರವನ್ನು ಮೈಮೇಲೆ ಹಚ್ಚೆ ಹಾಕಿಸಿಕೊಂಡು ಮೆರವಣಿಗೆಯಲ್ಲಿ ವಾಹನವೊಂದರ ಮೇಲೆ ನಿಂತು ಪ್ರದರ್ಶನ ಮಾಡಿದ. ಡಾ.ಬಿ.ಆರ್. ಅಂಬೇಡ್ಕರ್, ಬಸವೇಶ್ವರ, ಮಹಾತ್ಮಗಾಂಧಿ ಮತ್ತಿತರ ವೃತ್ತಕ್ಕೆ ಮೆರವಣಿಗೆಯಲ್ಲಿ ಬಂದ ಅಭಿಮಾನಿಗಳ ಒತ್ತಾಸೆ ಹಿನ್ನೆಲೆ ರೆಡ್ಡಿ, ತೆರೆದ ವಾಹನದಿಂದ ಇಳಿದು ಮಹನೀಯರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು.

ಕ್ರಿಸ್​ಮಸ್​ ಹಬ್ಬದಂದು ಹೊಸ ಪಕ್ಷದ ಘೋಷಿಸಿದ್ದ ರೆಡ್ಡಿ.. ಇತ್ತೀಚೆಗೆ ಡಿಸೆಂಬರ್​ 25 ರಂದು ಕ್ರಿಸ್​ಮಸ್​ ಹಬ್ಬ ಮತ್ತು ವಾಜಪೇಯಿ ಅವರ ಜನ್ಮದಿನ ಆಗಿದ್ದರಿಂದ ಅಂದೇ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ನೂತನ ಪಾರ್ಟಿ ಘೋಷಿಸಿದ್ದರು. ಇದು ರಾಜ್ಯ ರಾಜಕೀಯದಲ್ಲಿ ಚರ್ಚೆಯ ವಿಷವಾಗಿತ್ತು.

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಜನಾರ್ದನ ರೆಡ್ಡಿ.. ಬಳ್ಳಾರಿ ಜಿಲ್ಲೆ ಸೇರಿದಂತೆ ಕಲ್ಯಾಣದ ಕರ್ನಾಟಕ ಭಾಗದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸಿದೆ. ಆದ್ರೆ ಆ ಪಕ್ಷದಲ್ಲಿ ನನ್ನನ್ನು ಕಡೆಗಣಿಸಲಾಯಿತು. ನನ್ನ ಎಲ್ಲಾ ವ್ಯಾಪಾರ ವ್ಯವಹಾರ ಬಿಟ್ಟು ಪಕ್ಷ ಬೆಳೆಸಲು ಪ್ರಯತ್ನಿಸಿದ್ದೆ ಎಂದು ಜನಾರ್ದನ್​ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದರು.

ಈ ಹಿಂದೆ ಬಿಜೆಪಿಯಲ್ಲಿದ್ದ ರೆಡ್ಡಿ.. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಬಿ ಎಸ್​ ಯಡಿಯೂರಪ್ಪ ಅವರು 2008ರಲ್ಲಿ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಅವರು ಸಚಿವರಾಗಿದ್ದರು. ಬಳಿಕ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ಅವರ ಮೇಲೆ ದಾಳಿ ನಡೆಸಿತ್ತು. ಈ ಸಂಬಂಧ ಅವರು ಜೈಲು ವಾಸವನ್ನು ಅನುಭವಿಸಿ, ಸದ್ಯ ಜಾಮೀನು ಪಡೆದು ಹೊರಬಂದಿದ್ದಾರೆ. ಈ ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.

ಇದನ್ನೂಓದಿ:ಕೊಪ್ಪಳ ಜಾತ್ರೆಯಲ್ಲಿ ಗಮನಸೆಳೆದ ಪಾರಂಪರಿಕ ಕೃಷಿ ಪರಿಕರಗಳ ಪ್ರದರ್ಶನ

Last Updated : Jan 11, 2023, 4:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.