ETV Bharat / state

ಕಾಶ್ಮೀರದ 370ನೇ ವಿಧಿ ರದ್ಧತಿಗೆ ಶ್ರಮಿಸಿದವರನ್ನು ಅಭಿನಂದಿಸೋಣ: ಡಿಸಿಎಂ ಕಾರಜೋಳ - ಒಂದು ದೇಶ ಒಂದು ಸಂವಿಧಾನ ಕಾರ್ಯಾಗಾರ

ಕಾಶ್ಮೀರದಲ್ಲಿ ಪರಸ್ಥಿತಿ ಬಹಳ ಕೆಟ್ಟದಾಗಿತ್ತು. ನಾನು ಕಾಶ್ಮೀರಕ್ಕೆ ಹೋದಾಗ ಅಲ್ಲಿನ ಪರಸ್ಥಿತಿಯನ್ನು ಕಣ್ಣಾರೆ ಕಂಡಿದ್ದೇನೆ.‌ ಇಂದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರು ಇತಿಹಾಸದಲ್ಲಿ ಉಳಿಯುವಂತಹ ಕೆಲಸ ಮಾಡಿದ್ದಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.

ಡಿಸಿಎಂ. ಗೋವಿಂದ ಕಾರಜೋಳ
author img

By

Published : Sep 21, 2019, 12:21 AM IST

ಕೊಪ್ಪಳ: ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಒಂದು ದೇಶ ಒಂದು ಸಂವಿಧಾನ ಕಾರ್ಯಾಗಾರವನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಉದ್ಘಾಟಿಸಿದರು.

ಡಿಸಿಎಂ. ಗೋವಿಂದ ಕಾರಜೋಳ

ಕಾಶ್ಮೀರಕ್ಕೆ ನೀಡಿದ್ದ 370ನೇ ವಿಧಿಯ ವಿಶೇಷ ಸ್ಥಾನಮಾನ ರದ್ಧತಿಗೆ ಅನೇಕರು ಹೋರಾಡಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಕ್ಕಿದೆ. 370 ವಿಧಿ ರದ್ಧತಿಗೆ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ರದ್ಧತಿಗೆ ವೋಟ್ ಮಾಡಿದ ಎಲ್ಲ ಸಂಸದರನ್ನು ನಾವು ಅಭಿನಂದಿಸೋಣ. ಕಾಶ್ಮೀರಕ್ಕಿರುವ ವಿಶೇಷ ರದ್ಧತಿ ಎಂದೋ ಆಗಬೇಕಿತ್ತು ಎಂದರು.

ಯಾರೋ ಮಾಡಿದ ತಪ್ಪಿನಿಂದ, ಒಂದೇ ಮನೆತನದವರ ಆಡಳಿತದಿಂದ ಕಾಶ್ಮೀರದ ಈ ಸಮಸ್ಯೆಗೆ ಕಾರಣವಾಗಿತ್ತು. ಕಾಶ್ಮೀರದಲ್ಲಿ ಪರಸ್ಥಿತಿ ಬಹಳ ಕೆಟ್ಟದಾಗಿತ್ತು. ನಾನು ಕಾಶ್ಮೀರಕ್ಕೆ ಹೋದಾಗ ಅಲ್ಲಿನ ಪರಸ್ಥಿತಿಯನ್ನು ಕಣ್ಣಾರೆ ಕಂಡಿದ್ದೇನೆ.‌ ಇಂದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರು ಇತಿಹಾಸದಲ್ಲಿ ಉಳಿಯುವಂತಹ ಕೆಲಸ ಮಾಡಿದ್ದಾರೆ ಎಂದರು.

ಕಾಶ್ಮೀರಕ್ಕೆ ನೀಡಿದ್ದ 370 ನೇ ವಿಧಿಯನ್ನು ವಿರೋಧಿಸಿ ನೆಹರು ಸಂಪುಟದಿಂದ ಹೊರ ಬಂದಿದ್ದರು. ಕಾಶ್ಮೀರಕ್ಕೆ ಸಂವಿಧಾನದ 370 ನೇ ವಿಧಿಯ ಬಗ್ಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸಹ ವಿರೋಧ ವ್ಯಕ್ತಪಡಿಸಿದ್ದರು. ಆದರೂ ಒತ್ತಡದಿಂದ ಅವರು ಅದನ್ನು ಸಂವಿಧಾನದಲ್ಲಿ ಸೇರಿಸಿದ್ದರು. ಇದು ತಾತ್ಕಾಲಿಕ ಎಂದು ಸಹ ಅವರು ಹೇಳಿದ್ದರು. ಕಾಶ್ಮೀರದಲ್ಲಿ 370 ನೇ‌ ಕಲಂ ತೆಗೆದುಹಾಕಿದ ಬಳಿಕ ಅದು ಭಾರತದ ಅವಿಭಾಜ್ಯ ಅಂಗವಾಗಿದೆ. ಅಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಿಬಹುದು ಎಂದು ಹೇಳಿದರು. ಪ್ರಮುಖ ಭಾಷಣಕಾರರಾಗಿ ಆಗಮಿಸಿದದ ಕುಡಚಿ ಶಾಸಕ ಪಿ. ರಾಜೀವ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಬಸವರಾಜ ದಡೇಸೂಗೂರು ಸೇರಿದಂತೆ ಮೊದಲಾವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Intro:

Body:ಕೊಪ್ಪಳ:- ನೂತನ ವಿಜಯನಗರ ಜಿಲ್ಲಾ ರಚನೆ‌ ಕುರಿತಂತೆ ನಾನು ನನ್ನ ನಿರ್ಧಾರವನ್ನು ಕ್ಯಾಬಿನೆಟ್ ನಲ್ಲಿ ತಿಳಿಸುವೆ ಎಂದು ಡಿಸಿಎಂ ಗೋವಿಂದ ಕಾರಜೋಳ ಅವರು ಹೇಳಿದ್ದಾರೆ. ಡಿಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಕೊಪ್ಪಳಕ್ಕೆ ಆಗಮಿಸಿದ ಗೋವಿಂದ ಕಾರಜೋಳ ಅವರು, ಮಾಧ್ಯಮ‌ ಪ್ರತಿನಿಧಿಗಳೊಂದಿಗೆ ಮಾತನಾಡಿ, ಸೋಮಶೇಖರ್ ರಡ್ಡಿ ಅವರು ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಜಿಲ್ಲಾ ರಚನೆ ವಿಷಯ ಎಲ್ಲೆಂದರಲ್ಲಿ‌ ಮಾತಾಡೋದಲ್ಲ. ನೂತನ ವಿಜಯನಗರ ಜಿಲ್ಲಾ ರಚನೆ ಕುರಿತಂತೆ ಆ ವಿಷಯ ಕ್ಯಾಬಿನೇಟ್ ನಲ್ಲಿ ಬರುತ್ತದೆ. ಆಗ ನನ್ನ ನಿರ್ಧಾರ ಅಲ್ಲಿ ತಿಳಿಸುವೆ ಎಂದರು. ಇನ್ನು ಗಡಿ ಸಮಸ್ಯೆ ಇರುವುದರಿಂದ‌ ನಾವು ಯಾವುದೇ ಕಾರಣಕ್ಕೂ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಕೊಪ್ಪಳ ಜಿಲ್ಲೆಯಲ್ಲಿ ಅಸ್ಪೃಶ್ಯತೆ ಆಚರಣೆ ಕುರಿತಂತೆ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ‌ ಅಸ್ಪೃಶ್ಯತೆ ಆಚರಣೆ ತಡೆಗೆ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ ಎಂದರು. ಇನ್ನು ಸಿ.ಎಂ. ಯಡಿಯೂರಪ್ಪ ಅವರ ಪತ್ನಿ ಸಾವಿನ ವಿಚಾರ ಕುರಿತಂತೆ ಮಾಜಿ ಸಿಎಂ ಕುಮಾರಸ್ವಾಮಿ‌ ನೀಡಿರುವ ಹೇಳಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ ಕಾರಜೋಳ, ಯಾರ ಬಗ್ಗೆಯೂ ವಯಕ್ತಿಕವಾಗಿ ಮಾತನಾಡಬಾರದು ಎಂದರು. ಇನ್ನು ಮಾಜಿ ಸಚಿವ ಬಸವರಾಜ ರಾಯರಡ್ಡಿ ದಿನಕ್ಕೊಂದು ಹೇಳಿಕೆ ನೀಡುತ್ತಾರೆ. ಹೈದ್ರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದಾಗಬೇಕು ಎಂದು ಅನೇಕ ಬಾರಿ ಹೇಳಿಕೆ ನೀಡಿದ್ದಾರೆ. ಈ ನಾಡಿನ ಜನರ ಇಚ್ಛೆಯಂತೆ, ಬಸವಣ್ಣನವರ ನೆನಪು ಹಾಗೂ 12 ನೇ ಶತಮಾನದ ಶರಣರ‌ ಮೇಲಿನ ಗೌರವದಿಂದ‌ ಈ ಭಾಗಕ್ಕೆ ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಲಾಗಿದೆ. ನೆರೆ ಸಂತ್ರಸ್ತರಿಗೆ ತುರ್ತು ಅಗತ್ಯಕ್ಕಾಗಿ ಈಗಾಗಲೇ 10 ಸಾವಿರ ರುಪಾಯಿ ನೀಡಲಾಗಿದೆ. ಮೆನ‌ಪೂರ್ಣವಾಗಿ ಹಾನಿಯಾಗಿರುವ ಜನರಿಗೆ ಮನೆ ಕಟ್ಟಿಕೊಳ್ಳಲು ಈಗ ಮೊದಲ ಹಂತವಾಗಿ 1 ಲಕ್ಷ‌ ರುಪಾಯಿ ಬಿಡುಗಡೆ ಮಾಡಲಾಗಿದೆ ಎಂದರು. ನೆರೆ ಸ್ಥಿತಿಯನ್ನು ಕೇಂದ್ರ ಸಚಿವರನ್ನು ಹಾಗೂ ಅಧಿಕಾರಿಗಳನ್ನು ಕಳಿಸಿ ವರದಿ ತರಿಸಿಕೊಂಡಿದೆ. ಕೇಂದ್ರದಿಂದ‌ ಹಣ ಬಿಡುಗಡೆಯಾಗುತ್ತದೆ. ಆದರೆ, ಅಲ್ಲಿಯವರೆಗೂ ಕಾಯದೆ ರಾಜ್ಯ ಸರ್ಕಾರದ ಖಜಾನೆಯಿಂದ ಹಣ ಖರ್ಚು ಮಾಡಿ ಪರಿಹಾರ ಕಾರ್ಯಗಳನ್ನು ಮಾಡುತ್ತೇವೆ ಎಂದರು. ಇನ್ನು ನೆರೆ ಪರಿಹಾರ ಚೆಕ್ ವಿತರಣೆಯಲ್ಲಿ ನಮ್ಮ ಬೆಂಬಲಿಗರಿಗೆ ನೀಡಿಲ್ಲ. ಈ ವಿಚಾರದಲ್ಲಿ ಒಂದು ರುಪಾಯಿಯೂ ಸಹ ಅಕ್ರಮವಾಗಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.

ಬೈಟ್1:- ಗೋವಿಂದ ಕಾರಜೋಳ, ಡಿಸಿಎಂ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.