ETV Bharat / state

ಗುಣಮಟ್ಟದ ಶಿಕ್ಷಣ ಮೊದಲ ಆದ್ಯತೆ : ಶಾಸಕ ಬಯ್ಯಾಪೂರ

ಕಳೆದ ವರ್ಷದಲ್ಲಿ ಕುಷ್ಟಗಿ ತಾಲೂಕಿನ ಸರ್ಕಾರಿ ಶಾಲೆಯ ಶೇ.35ರಷ್ಟು ಮಕ್ಕಳು ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದವರು, ಶಿಕ್ಷಣದ ಮೂಲಕ ಸಬಲರಾಗಲು ವಸತಿ ಶಿಕ್ಷಣ ವ್ಯವಸ್ಥೆ ಪೂರಕವಾಗಿದೆ ಎಂದರು..

author img

By

Published : Aug 30, 2020, 7:38 PM IST

girls new hostel inaugurate by mla amaregouda patil
ಬಾಲಕಿಯರ ವಸತಿ ನಿಲಯವನ್ನು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಉದ್ಘಾಟಿಸಿದರು

ಕುಷ್ಟಗಿ(ಕೊಪ್ಪಳ): ಸರ್ಕಾರಿ ಸಂಸ್ಥೆಗಳ ವಸತಿ ಶಿಕ್ಷಣ ವ್ಯವಸ್ಥೆಯಲ್ಲಿ ಹೊತ್ತಿನ ಊಟ ಕಡಿಮೆ ಆದರೂ ಚಿಂತೆ ಇಲ್ಲ. ಗುಣಮಟ್ಟದ ಶಿಕ್ಷಣದಲ್ಲಿ ಕಡಿಮೆಯಾಗಬಾರದು ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.

ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪಟ್ಟಣದಲ್ಲಿ ಬಾಲಕಿಯರ ನೂತನ ವಸತಿ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

ಬಾಲಕಿಯರ ವಸತಿ ನಿಲಯ ಉದ್ಘಾಟಿಸಿದ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ

ಅಂದಾಜು 3.28 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಇದಾಗಿದೆ. ಸುಸಜ್ಜಿತ ಕಟ್ಟಡ, ಮೂಲಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಉದ್ದೇಶ. ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡುವಂತಾಗಬೇಕು. ಮುರಾರ್ಜಿ ದೇಸಾಯಿ ವಸತಿ ಶಾಲೆಗಳಂತೆ ಸರ್ಕಾರದ ವಸತಿ ನಿಲಯಗಳಲ್ಲಿ ಗುಣಮಟ್ಟದ ಸುಧಾರಣೆಗೆ ಸಿಬ್ಬಂದಿ ಶ್ರಮಿಸಬೇಕಿದೆ ಎಂದರು.

ಕಳೆದ ವರ್ಷದಲ್ಲಿ ಕುಷ್ಟಗಿ ತಾಲೂಕಿನ ಸರ್ಕಾರಿ ಶಾಲೆಯ ಶೇ.35ರಷ್ಟು ಮಕ್ಕಳು ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದವರು, ಶಿಕ್ಷಣದ ಮೂಲಕ ಸಬಲರಾಗಲು ವಸತಿ ಶಿಕ್ಷಣ ವ್ಯವಸ್ಥೆ ಪೂರಕವಾಗಿದೆ ಎಂದರು.

ಮುಖ್ಯಮಂತ್ರಿಯಾಗಿದ್ದ ದಿ. ದೇವರಾಜು ಅರಸು ಅವರಿಗೆ ಬಡವರ ಬಗ್ಗೆ ಅಪಾರ ಕಾಳಜಿ ಹಿನ್ನೆಲೆ ಹಲವು ರಚನಾತ್ಮಕ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ಅವರು ಸ್ಮರಿಸಿದರು. ಕೇವಲ ಅಧಿಕಾರಿಗಳಾಗಿ ವೇತನಕ್ಕಾಗಿ ಕಾರ್ಯ ನಿರ್ವಹಿಸದೇ, ವಸತಿ ಶಾಲೆಯ ಮಕ್ಕಳು ತಮ್ಮ ಮಕ್ಕಳಂತೆ ಕಾಣಬೇಕು. ಸಮವಸ್ತ್ರ, ಬಿಸಿ ಊಟ, ಸುಸಜ್ಜಿತ ಶಾಲೆ ವ್ಯವಸ್ಥೆಯಾದರೆ ಶಿಕ್ಷಣ ಪರಿಪೂರ್ಣವಾಗದು. ಮಕ್ಕಳ ಮೂಲ ಉದ್ದೇಶ ಶಿಕ್ಷಣದ ಹಿನ್ನೆಲೆಯಲ್ಲಿ ಓದುವ ಹವ್ಯಾಸ ಹೆಚ್ಚಿಸುವುದು ವಾರ್ಡನ್​ಗಳ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಈರಪ್ಪ ಆಶಾಪೂರ ಪ್ರಸ್ತಾವಿಕವಾಗಿ ಮಾತನಾಡಿದರು. ಕುಷ್ಟಗಿ ತಾಲೂಕಿನಲ್ಲಿ ಬಿಸಿಎಂ ಹಾಸ್ಟೇಲ್‌ಗಳಿಗೆ ವಸತಿ ಇಲಾಖೆಯ 14 ಸ್ವಂತ ಕಟ್ಟಡ ಇವೆ. 1,130 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿದ್ದಾರೆ. ತಾವರಗೇರಾ ಆಶ್ರಮ ಶಾಲೆಯಲ್ಲಿ 125 ವಿದ್ಯಾರ್ಥಿಗಳಿದ್ದು, 5ನೇ ತರಗತಿಯ ಆಶ್ರಮ ಶಾಲೆಯನ್ನು 8ನೇ ತರಗತಿಗೆ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದರು.

ತಾಪಂ ಅಧ್ಯಕ್ಷೆ ಮಹಾಂತಮ್ಮ ಪೂಜಾರಿ, ತಾಪಂ ಸದಸ್ಯ ಭೀಮಣ್ಣ ತಲೆಖಾನ್, ಪುರಸಭೆ ಸದಸ್ಯರಾದ ವಸಂತ ಮೇಲಿನಮನಿ, ಚಿರಂಜೀವಿ ಹಿರೇಮಠ, ರಾಮಣ್ಣ ಬಿನ್ನಾಳ, ಸಯ್ಯದ್ ಮೈನುದ್ದೀನ್ ಮುಲ್ಲಾ,ಮೆಹಬೂಬ ಕಮ್ಮಾರ, ಇಮಾಂಬಿ ಕಲಬುರ್ಗಿ, ಗುತ್ತಿಗೆದಾರ ವೀರೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.