ಗಂಗಾವತಿ: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆಂದು ಸಂಗ್ರಹಿಸಲಾಗಿದ್ದ ಧಾನ್ಯವನ್ನು ಅನಧಿಕೃವಾಗಿ ತಾಲೂಕು ಪಂಚಾಯ್ತಿ ಸಾಮರ್ಥ್ಯ ಸೌಧದಲ್ಲಿ ಸಂಗ್ರಹಿಸಿಡಲಾಗಿತ್ತು. ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ತಿಮ್ಮಾನಾಯ್ಕ್, ಸಂಗ್ರಹಿಟ್ಟಿದ್ದ ಧಾನ್ಯಗಳನ್ನು ಹುನಗುಂದಾ ತಾಲೂಕು ಪಂಚಾಯ್ತಿಗೆ ಕಳುಹಿಸಿದರು.
ಹುನಗುಂದಾ ತಹಶೀಲ್ದಾರ್ ಆನಂದ್ ಫಲಹಾರ್ ಅವರನ್ನು ಭೇಟಿಯಾದ ತಿಮ್ಮಾನಾಯ್ಕ್, ಸಂಗ್ರಹಿಸಿದ ಧಾನ್ಯವನ್ನು ಅವರಿಗೆ ಒಪ್ಪಿಸಿ, ತಕ್ಷಣ ಸಂತ್ರಸ್ತರಿಗೆ ನೀಡುವಂತೆ ಮನವಿ ಮಾಡಿದರು.