ETV Bharat / state

ಗಂಗಾವತಿ: ಹೈಡ್ರಾಮಾಕ್ಕೆ ಕಾರಣವಾದ ಗಂಗಾವತಿ ನಗರಸಭೆಯ ಚುನಾವಣೆ ಮುಂದಕ್ಕೆ!?.... - Gangavathi Municipal Election News

ಬಿಜೆಪಿ, ಕಾಂಗ್ರೆಸ್ ಮಧ್ಯೆ ನಡೆಯುತ್ತಿರುವ ನೇರಾ-ನೇರಾ ಫೈಟ್, ಕಿಡ್ನಾಪ್ ಪ್ರಕರಣಗಳಿಂದಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿರುವುದನ್ನು ಮನಗಂಡ ಅಧಿಕಾರಿಗಳು ನಗರಸಭೆ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದಕ್ಕೆ ಹಾಕುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

Gangawati Municipality likely to postpone elections
ಗಂಗಾವತಿ ನಗರಸಭೆ
author img

By

Published : Oct 31, 2020, 7:23 PM IST

ಗಂಗಾವತಿ: ಬಿಜೆಪಿ, ಕಾಂಗ್ರೆಸ್​ ಮಧ್ಯೆ ಭಾರಿ ಹೈಡ್ರಾಮಾಕ್ಕೆ ವೇದಿಕೆಯಾಗುತ್ತಿರುವ ಇಲ್ಲಿನ ನಗರಸಭೆ ಚುನಾವಣೆಗಾಗಿ ಸದಸ್ಯರ ಕಿಡ್ನಾಪ್, ಎಫ್ಐಆರ್​​ ರೀತಿಯ ಪ್ರಕರಣಗಳಿಂದಾಗಿ ಈಗ ಕೊಪ್ಪಳ ಜಿಲ್ಲೆ ಗಮನ ಸೆಳೆಯುತ್ತಿದೆ.

ಬಿಜೆಪಿ, ಕಾಂಗ್ರೆಸ್ ಮಧ್ಯೆ ನಡೆಯುತ್ತಿರುವ ನೇರಾ-ನೇರಾ ಫೈಟ್, ಕಿಡ್ನಾಪ್ ಪ್ರಕರಣಗಳಿಂದಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುತ್ತಿರುವುದನ್ನು ಮನಗಂಡ ಅಧಿಕಾರಿಗಳು ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದಕ್ಕೆ ಹಾಕುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಹೀಗಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಲ್ಲಿ ನ.2ರಂದು ನಗರಸಭೆಗೆ ನಡೆಯಬೇಕಿದ್ದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯನ್ನು ಈ ರೀತಿಯ ಬಿಗುವಿನ ವಾತಾವರಣ ತಿಳಿಯಾಗುವವರೆಗೂ ಮುಂದಕ್ಕೆ ಹಾಕಲು ಚುನಾವಣಾ ವಿಭಾಗದ ಅಧಿಕಾರಿಗಳು ಕಾನೂನು ಸಲಹೆ ಪಡೆದುಕೊಂಡಿದ್ದಾರೆ.

ಸಾಧಕ-ಬಾಧಕ ಚರ್ಚಿಸಿ ಚುನಾವಣೆ ಮುಂದೂಡುವ ಸಾಧ್ಯತೆ ಅಧಿಕವಾಗಿದೆ ಎನ್ನಲಾಗಿದೆ. ಈಗಾಗಲೇ ಆಮ್ ಆದ್ಮಿ ಪಕ್ಷ ಕೂಡ, ಚುನಾವಣೆ ಹಿನ್ನೆಲೆ ಕಾಂಗ್ರೆಸ್-ಬಿಜೆಪಿ ಮಧ್ಯೆ ಅಹಿತಕರ ಘಟನೆಗಳ ಹಿನ್ನೆಲೆ ಕ್ರಮ ಕೈಗೊಳ್ಳುವಂತೆ ಡಿಸಿಯನ್ನು ಒತ್ತಾಯಿಸಿರುವುದು ಚುನಾವಣೆಯ ಮೇಲೆ ಒತ್ತಡಕ್ಕೂ ಕಾರಣವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.