ETV Bharat / state

ಬಂಡೆಯ ಮೇಲೆ ಕುಳಿತು ಪಂಪಾ ವಿರೂಪಾಕ್ಷೇಶ್ವರನಿಗೆ ಶಾಸಕ ಜನಾರ್ದನ ರೆಡ್ಡಿ ಪ್ರಾರ್ಥನೆ - ​ ETV Bharat Karnataka

ಶಾಸಕ ಜನಾರ್ದನ ರೆಡ್ಡಿ ಅವರು ಬಳ್ಳಾರಿ ಜಿಲ್ಲೆ ಪ್ರವೇಶಿಸದಂತೆ ನ್ಯಾಯಾಲಯದ ಆದೇಶವಿದೆ.

ಶಾಸಕ ಗಾಲಿ ಜನಾರ್ದರೆಡ್ಡಿ
ಶಾಸಕ ಗಾಲಿ ಜನಾರ್ದರೆಡ್ಡಿ
author img

By ETV Bharat Karnataka Team

Published : Nov 6, 2023, 6:46 AM IST

ಗಂಗಾವತಿ(ಕೊಪ್ಪಳ): ತನಗೆ ರಾಜಕೀಯ ಪುನರ್ಜನ್ಮ ನೀಡಿದ ಗಂಗಾವತಿ ಮತಕ್ಷೇತ್ರ ಮತ್ತು ಕರುನಾಡು ಸುಭಿಕ್ಷೆಯಿಂದ ಕೂಡಿರಲಿ. ನನ್ನೆಲ್ಲಾ ಸಂಕಷ್ಟಗಳು ದೂರಾಗಿ ವನವಾಸದಿಂದ ಮುಕ್ತನಾಗಿ ಮೊದಲಿನ ದಿನಗಳನ್ನು ಕರುಣಿಸು ದೇವ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಹಂಪೆಯ ಪಂಪಾವಿರೂಪಾಕ್ಷನಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಭಾನುವಾರ ಕೊಪ್ಪಳ ಜಿಲ್ಲೆಯ ಗಡಿ ಭಾಗವಾಗಿರುವ ಗಂಗಾವತಿ ತಾಲ್ಲೂಕಿನ ವಿರುಪಾಪುರ ಗಡ್ಡೆಯ ಗ್ರಾಮದ ಬಂಡೆಯಲ್ಲಿ, ಹಂಪೆಯ ಆರಾಧ್ಯದೈವ ಪಂಪಾ ವಿರೂಪಾಕ್ಷೇಶ್ವರನಿಗೆ ಅಭಿಮುಖವಾಗಿ ಕುಳಿತು, ನನ್ನೆಲ್ಲಾ ಸಂಕಷ್ಟಗಳನ್ನು ದೂರ ಮಾಡಿ, ನನ್ನ ಮೇಲೆ ದಾಖಲಾಗಿರುವ ಪ್ರಕರಣಗಳು ಖುಲಾಸೆಯಾಗಿ ನೇರವಾಗಿ ನಿನ್ನ ದರ್ಶನ ಭಾಗ್ಯ ಕರುಣಿಸು. ತವರು ಜಿಲ್ಲೆ ಬಳ್ಳಾರಿ ಪ್ರವೇಶಕ್ಕಿರುವ ನಿರ್ಬಂಧ ತೆರವು ಮಾಡು ಎಂದು ಪ್ರಾರ್ಥಿಸಿದರು.

ಗಣಿ ಸಂಬಂಧಿಸಿದಂತೆ ರೆಡ್ಡಿ ಮೇಲೆ ಸಾಕಷ್ಟು ಪ್ರಕರಣಗಳಿವೆ. ಈ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಗಡಿ ಪ್ರವೇಶಿಸಬಾರದು ಎಂದು ನ್ಯಾಯಾಲಯದಿಂದ ಆದೇಶವಿದೆ. ಹೀಗಾಗಿ ಅವರು ವಿಶೇಷ ಸಂದರ್ಭದಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೇ ಬಳ್ಳಾರಿ ಪ್ರವೇಶಿಸುವಂತಿಲ್ಲ. ಆದರೆ ನೆಚ್ಚಿನ ಆರಾಧ್ಯ ದೈವ ಪಂಪಾ ವಿರೂಪಾಕ್ಷೇಶ್ವರನ ದರ್ಶನಕ್ಕೂ ಅಡೆತಡೆಯಾಗಿದ್ದರಿಂದ ವಿರುಪಾಪುರ ಗಡ್ಡೆಯಿಂದಲೇ ದರ್ಶನ ಮಾಡಿದ್ದಾರೆ.

ಇದನ್ನೂ ಓದಿ: 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಹಾಡಿಗೆ ಹೆಜ್ಜೆ ಹಾಕಿದ MP, MLA, DC - VIDEO

ETV Bharat Logo

Copyright © 2025 Ushodaya Enterprises Pvt. Ltd., All Rights Reserved.