ಗಂಗಾವತಿ : ನಗರದಲ್ಲಿ ಯುವಕರು ಮತ್ತು ಪತ್ರಕರ್ತರು ಸೇರಿ ಹೋಳಿ ಹಬ್ಬದ ಅಂಗವಾಗಿ ಓಕುಳಿಯಾಡಿದ್ದ ಚಿತ್ರಗಳನ್ನು ದಿ ಕಾಶ್ಮೀರಿ ಫೈಲ್ಸ್ ಚಿತ್ರ ತಂಡ ತನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಇದೀಗ ಓಕುಳಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿವೆ.
ಹೋಳಿ ಹಬ್ಬದ ಅಂಗವಾಗಿ ನಗರದ ಕೆಲ ಯುವಕರು ಹಾಗೂ ಪತ್ರಕರ್ತರು ಸೇರಿ ದಿ ಕಾಶ್ಮೀರ ಫೈಲ್ ಚಿತ್ರದಲ್ಲಿ ನಟ ಅನುಪಮ್ ಖೇರ್ ಮಾಡಿಕೊಂಡಿದ್ದ ಶಿವನ ವಿನ್ಯಾಸ ಹೋಲುವ ಮಾದರಿಯಲ್ಲಿ ಮೇಕಪ್ ಮಾಡಿಕೊಂಡು ಹೋಳಿಯಾಡಿದ್ದರು.
- — Anupam Kher (@AnupamPKher) March 19, 2022 " class="align-text-top noRightClick twitterSection" data="
— Anupam Kher (@AnupamPKher) March 19, 2022
">— Anupam Kher (@AnupamPKher) March 19, 2022
ಚಿತ್ರದಲ್ಲಿ ಅನುಪಮ್ ಖೇರ್ ಶಿವನನ್ನು ಹೋಲುವ ಮಾದರಿಯಲ್ಲಿ ಮುಖಕ್ಕೆ ನೀಲಿ ಬಣ್ಣ ಬಳಿದುಕೊಂಡು, ಹಣೆಯಲ್ಲಿ ಮೂರನೇ ಕಣ್ಣು ಹೊಂದಿರುವ ರೀತಿಯಲ್ಲಿ ಈ ಯುವಕರು ಬಣ್ಣ ಹಚ್ಚಿದ್ದರು. ಈ ಚಿತ್ರಗಳನ್ನು ನಟ ಅನುಪಮ್ ಖೇರ್ ಮತ್ತು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ತಮ್ಮ ಟ್ವಿಟರ್ ಖಾತೆಗಳಲ್ಲಿ ಶೇರ್ ಮಾಡಿದ್ದು, ಇದೀಗ ಅವು ಎಲ್ಲೆಡೆ ವೈರಲ್ ಆಗಿವೆ.
ಓದಿ : ಕಿವಿಗಳೇ ಇಲ್ಲದ ಮಗುವಿಗೆ ಜನ್ಮ ನೀಡಿದ ಮಹಿಳೆ: ಇದು ಅಪರೂಪದಲ್ಲಿ ಅಪರೂಪ!